• Home  
  • ಪಡುಬಿದ್ರಿ : ಮಿತ್ರನ ಹುಟ್ಟು ಹಬ್ಬಕ್ಕೆಂದು ಹೇಳಿ ತೆರಳಿದ್ದ ಬಾಲಕ ನಾಪತ್ತೆ(Padubidri: Boy who went to a friend’s birthday party goes missing)
- MISSING

ಪಡುಬಿದ್ರಿ : ಮಿತ್ರನ ಹುಟ್ಟು ಹಬ್ಬಕ್ಕೆಂದು ಹೇಳಿ ತೆರಳಿದ್ದ ಬಾಲಕ ನಾಪತ್ತೆ(Padubidri: Boy who went to a friend’s birthday party goes missing)

Share: ಪಡುಬಿದ್ರಿ : ಮಿತ್ರನ ಹುಟ್ಟು ಹಬ್ಬಕ್ಕೆಂದು ಹೇಳಿ ತೆರಳಿದ್ದ ಬಾಲಕ ನಾಪತ್ತೆ   (Padubidri) ಪಡುಬಿದ್ರಿ : ಸ್ನೇಹಿತನ ಹುಟ್ಟುಹಬ್ಬಕ್ಕೆಂದು ತೆರಳಿದ ಬಾಲಕನೋರ್ವ ಮನೆಗೆ ಬಾರದೆ ಇದ್ದು. ನಾಪತ್ತೆಯಾದ ಘಟನೆ ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಘಟಿಸಿದೆ.  ಪಡುಬಿದ್ರಿ ಕಂಚಿನಡ್ಕ ನಿವಾಸಿ ದಯಾನಂದ ಎಂಬವರ ಮಗ ಅನ್ವಿತ್‌ (16) ನಾಪತ್ತೆ ಆದ ಬಾಲಕ. ಅನ್ವಿತ್‌ ಮುಲ್ಕಿಯಲ್ಲಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಇದೆ, ಅದಕ್ಕೆ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಮುಲ್ಕಿಗೆ ಹೋಗುತ್ತಿದ್ದೇನೆ ಎಂದು ಬುಧವಾರ ರಾತ್ರಿ ತಾಯಿಗೆ […]

(Padubidri) ಪಡುಬಿದ್ರಿ : ಸ್ನೇಹಿತನ ಹುಟ್ಟುಹಬ್ಬಕ್ಕೆಂದು ತೆರಳಿದ ಬಾಲಕನೋರ್ವ ಮನೆಗೆ ಬಾರದೆ ಇದ್ದು. ನಾಪತ್ತೆಯಾದ ಘಟನೆ ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಘಟಿಸಿದೆ.

 ಪಡುಬಿದ್ರಿ ಕಂಚಿನಡ್ಕ ನಿವಾಸಿ ದಯಾನಂದ ಎಂಬವರ ಮಗ ಅನ್ವಿತ್‌ (16) ನಾಪತ್ತೆ ಆದ ಬಾಲಕ.

ಅನ್ವಿತ್‌ ಮುಲ್ಕಿಯಲ್ಲಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಇದೆ, ಅದಕ್ಕೆ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಮುಲ್ಕಿಗೆ ಹೋಗುತ್ತಿದ್ದೇನೆ ಎಂದು ಬುಧವಾರ ರಾತ್ರಿ ತಾಯಿಗೆ ಹೇಳಿ ತೆರಳಿದ್ದನು. ಮರುದಿನ   ಮಧ್ಯಾಹ್ನ ಅನ್ವಿತ್‌ ಮೊಬೈಲಿಗೆ ಫೋನಾಯಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಗಾಬರಿ ಆದ ಹೆತ್ತವರು ಸಂಬಂಧಿಕರು, ಬಂಧು ಮಿತ್ರರಲ್ಲಿ ವಿಚಾರಿಸಿದಾಗ ಎಲ್ಲೂ ಪತ್ತೆ ಆಗಿಲ್ಲ.

 ತನ್ನ ಮಗನನ್ನು ಯಾರೋ ಪುಸಲಾಯಿಸಿ ಎಲ್ಲಿಗೋ ಕರೆದುಕೊಂಡು ಹೋಗಿರುವ ಸಂಶಯದ ಹಿನ್ನೆಲೆಯಲ್ಲಿ ಬಾಲಕನ ಹೆತ್ತವರು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.