• Home  
  • ಪಡುಬಿದ್ರಿ ಯುವವಾಹಿನಿ ಘಟಕ ವತಿಯಿಂದ ಮಕ್ಕಳ ಹಬ್ಬ – 2025 ಕಾರ್ಯಕ್ರಮ (Makkala Habba – 2025 program organized by Yuva Vahini Padubidri unit)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಪಡುಬಿದ್ರಿ ಯುವವಾಹಿನಿ ಘಟಕ ವತಿಯಿಂದ ಮಕ್ಕಳ ಹಬ್ಬ – 2025 ಕಾರ್ಯಕ್ರಮ (Makkala Habba – 2025 program organized by Yuva Vahini Padubidri unit)

Share: ಪಡುಬಿದ್ರಿ ಯುವವಾಹಿನಿ ಘಟಕ ವತಿಯಿಂದ ಮಕ್ಕಳ ಹಬ್ಬ – 2025 ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್     (Padubidri) ಪಡುಬಿದ್ರಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವವಾಹಿನಿ ಪಡುಬಿದ್ರಿ ಘಟಕದ ಆಯೋಜನೆಯಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ – 2025 ಕಾರ್ಯಕ್ರಮ ನೆರವೇರಿತು.    ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್ ನೆರವೇರಿಸಿದರು.    ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ […]

ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್  

  (Padubidri) ಪಡುಬಿದ್ರಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವವಾಹಿನಿ ಪಡುಬಿದ್ರಿ ಘಟಕದ ಆಯೋಜನೆಯಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ – 2025 ಕಾರ್ಯಕ್ರಮ ನೆರವೇರಿತು.

   ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್ ನೆರವೇರಿಸಿದರು.

   ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ ವಹಿಸಿದ್ದರು

     ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಕುಲಾಲ್, ಬಿಲ್ಲವ ಸಮಾಜ ಸೇವಾ ಸಂಘ ಮುದರಂಗಡಿ ಇದರ ಪೂರ್ವಾಧ್ಯಕ್ಷರಾದ ಕೃಷ್ಣ ಪೂಜಾರಿ ಕೇಂಜ, ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಕುತ್ಯಾರು ಇಲ್ಲಿನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶರ್ಮಿಳಾ,  ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಇದರ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ ವಿಧಿತ್ ಉಪಸ್ಥಿತರಿದ್ದರು.

    ಶ್ರೀಮತಿ ಪೂರ್ಣಿಮ ವಿಧಿತ್ ಸ್ವಾಗತಿಸಿದರು. ಶ್ರೀಮತಿ ಚೈತ್ರ ಗಣೇಶ್ ಮತ್ತು ಶ್ರೀಮತಿ ಸುಷ್ಮಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.

   ವೇದಿಕೆಯಲ್ಲಿ ಕಲಾಶ್ರೀ ಮತ್ತು ಕಲಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿತು.

     ವಿಭಾಗ 1 ಮತ್ತು ವಿಭಾಗ 2ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 4ನೇ ತರಗತಿಯ ಸಾಕ್ಷಿ ಇವರಿಗೆ ಕಲಾಶ್ರೀ ಮತ್ತು 6ನೇ ತರಗತಿಯ ಅನ್ವಿತ ಮೂಲ್ಯ ಇವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

     ಮಕ್ಕಳ ಹಬ್ಬದ ಪ್ರಯುಕ್ತ ನಡೆದ  ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೆಯೇ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು.

  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ಪ್ರೇಕ್ಷ ಅಮೀನ್, ರಂಜಿತ್ ಅವರಾಲು ಹಾಗೂ ಸುಮಿಶ್ ಸುಕೇಶ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.

   ಶ್ರೀಮತಿ ಚಿತ್ರಾಕ್ಷಿ ಹಾಗೂ ಕುಟ್ಟಿ ಕೋಟ್ಯಾನ್ ರವರ ಪುತ್ರ ಅಭಿಷೇಕ್ ಕೋಟ್ಯಾನ್ ಇವರ ವತಿಯಿಂದ 7 ಜನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಸಮಾರೋಪ ಸಮಾರಂಭ  

  ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ದ್ವಿತೀಯ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್, ಜ್ಯೋತಿಷ್ಯ ಆಗಮ ಪುರೋಹಿತರಾದ ವೇದಮೂರ್ತಿ ಪಾದೆಬೆಟ್ಟು ರಾಘವೇಂದ್ರ ಆಚಾರ್ಯ, ವಿದ್ಯಾವರ್ಧಕ ಸಂಘ ಶಿರ್ವ ಇದರ ಆಡಳಿತಾಧಿಕಾರಿ  ಪ್ರೊ. ವೈ ಭಾಸ್ಕರ್ ಶೆಟ್ಟಿ, ಬಿಲ್ಲವ ಸಂಘ ಪಡುಬಿದ್ರಿ  ಇದರ ಅಧ್ಯಕ್ಷ ವೈ ಸುಧೀರ್ ಕುಮಾರ್, ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಕುತ್ಯಾರು ಇಲ್ಲಿನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶರ್ಮಿಳಾ, ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಇದರ ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಶ್ರೀಮತಿ ಪೂರ್ಣಿಮ ವಿಧಿತ್ ಉಪಸ್ಥಿತರಿದ್ದರು.

    ಶ್ರೀಮತಿ ಸುಜಾತಾ ಹರೀಶ್ ಮತ್ತು ಶ್ರೀಮತಿ ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು.

   ಸಮಾರೋಪ ಸಮಾರಂಭದ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ ವಹಿಸಿದ್ದರು.

    ಕುಮಾರಿ ಯಶೋಧ ಪಡುಬಿದ್ರಿ ಮತ್ತು ಹರೀಶ್ ಕೋಟ್ಯಾನ್ ಉಳ್ಳೂರು ನಿರೂಪಿಸಿದರು.

 ಘಟಕದ ಕಾರ್ಯದರ್ಶಿ ಭಾಸ್ಕರ್ ಎನ್ ಅಂಚನ್  ಧನ್ಯವಾದ ಸಲ್ಲಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.