ಪಡುಬಿದ್ರಿ ಶ್ರೀ ದೇಗುಲ: ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ ಸಂಪನ್ನ
ಮೇ. 2 ಮತ್ತು 3 ರಂದು ಬ್ರಹ್ಮಕುಂಭಾಭಿಷೇಕ ನೆರವೇರಲಿದೆ
(ಚಿತ್ರ ಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ)
(Padubidri) ಪಡುಬಿದ್ರಿ: ಸಂಪೂರ್ಣ ಪುನರ್ ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ ಸಂಪನ್ನಗೊಂಡಿತು.
ಮೇ. 2 ಮತ್ತು 3 ರಂದು ಬ್ರಹ್ಮಕುಂಭಾಭಿಷೇಕ ನೆರವೇರಲಿದೆ
ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೊಡವೂರು ಕಂಬಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ಅರ್ಚಕ ಎಚ್. ಪದ್ಮನಾಭ ಭಟ್ ಮತ್ತು ವೈ. ಗುರುರಾಜ್ ಭಟ್ ಉಸ್ತುವಾರಿಯಲ್ಲಿ ಸಮೂಹ ಹಾಗೂ ಭಗವದಕ್ತರ ಕೂಡುವಿಕೆಯಲ್ಲಿ ಗಣಪತಿ ಬಿಂಬ ಪ್ರತಿಷ್ಠೆ ನೆರವೇರಿತು.
ದೇವಳದಲ್ಲಿ ಅಷ್ಟೋತ್ತರ ಶತನಾರಿಕೇಳ ಗಣ ಯಾಗ, ಪೀಠಿಕಾಯಾಗ, ಶಕ್ತಿಯಾಗ, ಅಷ್ಟಬಂಧ ಲೇಪನ, ಕಲಶಾಭಿಷೇಕ, ಪ್ರತಿಜ್ಞಾವಿಧಿ, ಧ್ವಜದೇವತಾ ಯಾಗ, ಪಂಚಬ್ರಹ್ಮಯಾಗ, ನವಕ ಪ್ರಧಾನಯಾಗ, ಕಲಶಾಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ ನೆರವೇರಿತು
ರಥೋತ್ಸವದ ಪ್ರಯುಕ್ತ ಸಂದರ್ಭ ನೂತನ ಧ್ವಜಸ್ಥಂಭದಲ್ಲಿ ಧ್ವಜಾರೋಹಣ ಹಾಗೂ ಸ್ವರ್ಣ ಶಿಖರ ಕಲಶಾಭಿಷೇಕ ನಡೆಯಿತು. ಮೇ. 2 ರ ಶನಿವಾರ ಬೆಳಿಗ್ಗೆ 11ಗಂಟೆಗೆ ರಥಾರೋಹಣ ನೆರವೇರಲಿದೆ.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ಬ್ರಹ್ಮಕಲಶ ಮಂಟಪ ಸಂಸ್ಕಾರ, ದುರ್ಗಾ ರಾಧನೆ, ರಾತ್ರಿಪೂಜೆ, ಬಲಿ, ಮಹಾ ರಂಗಪೂಜೆ ನಡೆಯಿತು.
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿಬೀಡು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ಭಟ್, ಗೋಪಾಲ ಉಪಾಧ್ಯಾಯ, ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಪದ್ಮನಾಭ ಭಟ್, ಪ್ರಧಾನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಉಪಸ್ಥಿತರಿದ್ದರು.
(ಚಿತ್ರ ಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ)

