• Home  
  •  ಪಡುಬಿದ್ರಿ ಶ್ರೀ ಬಾಲಗಣಪತಿ   ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳಕ್ಕೆ ಕಾಪು ಶಾಸಕರಿಂದ ಚಾಲನೆ ( Today agriculture Fare at Padubidri Balaganapathi Temple area)
- ಕರಾವಳಿ

 ಪಡುಬಿದ್ರಿ ಶ್ರೀ ಬಾಲಗಣಪತಿ   ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳಕ್ಕೆ ಕಾಪು ಶಾಸಕರಿಂದ ಚಾಲನೆ ( Today agriculture Fare at Padubidri Balaganapathi Temple area)

Share: ಪಡುಬಿದ್ರಿ ಶ್ರೀ ಬಾಲಗಣಪತಿ   ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳಕ್ಕೆ ಕಾಪು ಶಾಸಕರಿಂದ ಚಾಲನೆ (Padubidri) ಪಡುಬಿದ್ರಿ ; ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಶನಿವಾರ ಬೆಳಿಗ್ಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ವಿಶೇಷ ಆಕರ್ಷಣೆಗಳೊಂದಿಗೆ ಜರಗಿದ  ಕೃಷಿ ಮೇಳವನ್ನು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ (MLA Gurme Suresh Shetty) ಉದ್ಘಾಟಿಸಿದರು. ಈ ಸಂದರ್ಭ […]

ಪಡುಬಿದ್ರಿ ಶ್ರೀ ಬಾಲಗಣಪತಿ   ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳಕ್ಕೆ ಕಾಪು ಶಾಸಕರಿಂದ ಚಾಲನೆ

(Padubidri) ಪಡುಬಿದ್ರಿ ; ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಶನಿವಾರ ಬೆಳಿಗ್ಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ವಿಶೇಷ ಆಕರ್ಷಣೆಗಳೊಂದಿಗೆ ಜರಗಿದ  ಕೃಷಿ ಮೇಳವನ್ನು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ (MLA Gurme Suresh Shetty) ಉದ್ಘಾಟಿಸಿದರು.

ಈ ಸಂದರ್ಭ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಹಿಂದೆ ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿತ್ತು. ಕಾಲಬದಲಾದಂತೆ ನಾವು ಕೂಡಾ ಬದಲಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿಯುವಕರು ಕೃಷಿಯತ್ತ ಮುಖ ಮಾಡಿರುವುದು ಸಂತಸದ ಸಂಗತಿ. ಇಂತಹ ಕೃಷಿ ಮೇಳವು  ಕೃಷಿಕರ ಬಾಳಿಗೆ ನಂದಾದೀಪವಾಗಲಿ ಎಂದು ಹಾರೈಸಿದರು.

 ಮೂಡುಬಿದಿರೆ ಜೈನ ಮಠದ ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ (DR. Swasthi Sri Charukeerthi Bhattaraka Swamiji)  ಆಶೀರ್ವಚಿಸಿದರು.

  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ (Shashikant Padubidri) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಸ್ಥಳೀಯ ಐವರು ಸಾಧಕ ಕೃಷಿಕರಿಗೆ ಕೃಷಿ ಋಷಿ ಸಮ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್ (EX MLA Lalaji mendon), ಯು.ಪಿ.ಸಿ.ಎಲ್ ಕಾರ್ಯನಿರ್ವಾಹಕ  ನಿರ್ದೇಶಕ ಕಿಶೋರ್ ಆಳ್ವ UPCL ADANI Working President Kishore Alva), ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ Y Sudheer Kumar), ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ರಾಜ್, ತೋಟಗಾರಿಕೆ ಇಲಾಖೆಯ ಎಲ್. ಹೇಮಂತ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಯೇಶ್ ಪೈ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.