ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ : 73 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ
ಹೆಜಮಾಡಿ ಕೋಡಿ ವಿದ್ಯಾಪ್ರಸಾರ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮ
(Padubidri) ಪಡುಬಿದ್ರಿ: ಪಡುಬಿದ್ರಿ ರೋಟರಿಕ್ಲಬ್ ಸಹಕಾರದೊಂದಿಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ73 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ ಹೆಜಮಾಡಿಕೋಡಿ ವಿದ್ಯಾಪ್ರಸಾರ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶನಿವಾರ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸುರೇಶ್ ನಾಯಕ್ ರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಹೆಜಮಾಡಿ ಕೋಡಿ ವಿದ್ಯಾಪ್ರಸಾರ ಆಂಗ್ಲ ಮಾದ್ಯಮ ಶಾಲೆಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ ಶುದ್ದ ನೀರಿನ ಘಟಕವನ್ನು ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ ಹಾಗೂ ಶಾಲಾ ಅಧ್ಯಕ್ಷ ದಯಾನಂದ ಹೆಜಮಾಡಿ ಉದ್ಘಾಟಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಸಹಕಾರದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸೊಸೈಟಿಯ ನಿರ್ದೇಶಕ ಶಿವರಾಮ ಎನ್ ಶೆಟ್ಟಿ, ರಸೂಲ್ ವೈ.ಜಿ., ವಾಸುದೇವ ದೇವಾಡಿಗ, ರಾಜಾರಾಮ ರಾವ್, ಶ್ರೀಮತಿ ರೋಹಿಣಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ನಿಶ್ಮಿತಾ ಪಿ.ಎಚ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ದೀಪಕ್ ಸಾಲ್ಯಾನ್, ವಿದ್ಯಾಪ್ರಸಾರ ಶಾಲಾ ಚೇರ್ ಮ್ಯಾನ್ ವಿನೋದ್ ಕೋಟ್ಯಾನ್, ಪ್ರಾಂಶುಪಾಲೆ ಶ್ರೀಮತಿ ರಾಜೇಶ್ವರಿ ಎಸ್ ಕರ್ಕೇರ, ಶಾಲಾ ಸಿಬಂದಿ ವರ್ಗ, ರೋಟರಿ ಕ್ಲಬ್ ಪಡುಬಿದ್ರಿ ಮಾಜಿ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ಕಾರ್ತಿಕ್, ಸದಸ್ಯರಾದ ಶ್ರೀಮತಿ ಜ್ಯೋತಿ ಮೆನನ್ ಉಪಸ್ಥಿತರಿದ್ದರು.

