ಮಲ್ಪೆ: ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಲ್ಪೆಗೆ ಆಗಮಿಸಿದ ಭೂಗತ ಪಾತಕಿ ರವಿ ಪೂಜಾರಿ.
ನ್ಯಾಯಾಲಯದ ಅನುಮತಿ ಮೇರೆಗೆ ಬಿಗಿ ಭದ್ರತೆಯಲ್ಲಿ ಬಂದ ರವಿ ಪೂಜಾರಿ
(Malpe) ಮಲ್ಪೆ : ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ಮಲ್ಪೆಗೆ ಕರೆತಂದಿದ್ದಾರೆ.
ತಾಯಿ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ಮೊನ್ನೆ ರಾತ್ರಿ ನಿಧನ ಹೊಂದಿದ್ದರು.
ಸುಶೀಲಾ ಪೂಜಾರ್ತಿ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ಅವರಿಗೆ ಐದು ಮಕ್ಕಳು, ಅದರಲ್ಲಿ ಇಬ್ಬರು ಹುಡುಗಿಯರು, ರವಿ ಪೂಜಾರಿ ಸೇರಿದಂತೆ ಮೂವರು ಗಂಡು ಮಕ್ಕಳು.
ಇಂದು ( ಶನಿವಾರ) ರವಿ ಪೂಜಾರಿ ಹಿರಿಯ ಮನೆ ಮಲ್ಪೆಯ ನೆರ್ಗಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು ನ್ಯಾಯಾಲಯದ ಅನುಮತಿ ಮೇರೆಗೆ ಬಿಗಿ ಭದ್ರತೆಯಲ್ಲಿ ಪೊಲೀಸರು ಕರೆತಂದರು.

