• Home  
  • ಪಡುಬಿದ್ರಿ : ಹೆದ್ದಾರಿ ಮಧ್ಯೆ ಮೀನಿನ ಲಾರಿ ಪಲ್ಟಿ (Padubidri: Fish lorry overturned in the middle of the highway)
- ಅಪಘಾತ

ಪಡುಬಿದ್ರಿ : ಹೆದ್ದಾರಿ ಮಧ್ಯೆ ಮೀನಿನ ಲಾರಿ ಪಲ್ಟಿ (Padubidri: Fish lorry overturned in the middle of the highway)

Share: ಪಡುಬಿದ್ರಿ : ಹೆದ್ದಾರಿ ಮಧ್ಯೆ ಮೀನಿನ ಲಾರಿ ಪಲ್ಟಿ ಪಡುಬಿದ್ರಿ ನಾರಾಯಣಗುರು ಮಂದಿರದ ಬಳಿ ನಡೆದ ಘಟನೆ ಪಡುಬಿದ್ರಿ : ಮೀನಿನ ಲಾರಿಯೊಂದು ಡಿವೈಡರ್ ಗೆ ಡಿಕ್ಕಿಯಾಗಿ ಹೆದ್ದಾರಿ ಮಧ್ಯೆ ಮಗುಚಿ ಬಿದ್ದು  ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಪಡುಬಿದ್ರಿ ನಾರಾಯಣಗುರು ಮಂದಿರದ ಬಳಿ ಮಂಗಳವಾರ ಮುಂಜಾನೆ ಘಟಿಸಿದೆ.   ಭೂತಾಯಿ ಮೀನು ಹೇರಿಕೊಂಡು ಉಡುಪಿ ಕಡೆಯಿಂದ ಕೇರಳ ಕಡೆಗೆ ಸಾಗುತ್ತಿದ್ದ ಲಾರಿಯು ಡಿವೈಡರ್ ಗೆ ಡಿಕ್ಕಿಯಾಗಿ ಹೆದ್ದಾರಿ ಮಧ್ಯೆ ಮಗುಚಿ […]

ಪಡುಬಿದ್ರಿ : ಮೀನಿನ ಲಾರಿಯೊಂದು ಡಿವೈಡರ್ ಗೆ ಡಿಕ್ಕಿಯಾಗಿ ಹೆದ್ದಾರಿ ಮಧ್ಯೆ ಮಗುಚಿ ಬಿದ್ದು  ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಪಡುಬಿದ್ರಿ ನಾರಾಯಣಗುರು ಮಂದಿರದ ಬಳಿ ಮಂಗಳವಾರ ಮುಂಜಾನೆ ಘಟಿಸಿದೆ.

  ಭೂತಾಯಿ ಮೀನು ಹೇರಿಕೊಂಡು ಉಡುಪಿ ಕಡೆಯಿಂದ ಕೇರಳ ಕಡೆಗೆ ಸಾಗುತ್ತಿದ್ದ ಲಾರಿಯು ಡಿವೈಡರ್ ಗೆ ಡಿಕ್ಕಿಯಾಗಿ ಹೆದ್ದಾರಿ ಮಧ್ಯೆ ಮಗುಚಿ ಬಿದ್ದಿದೆ.

  ಚಾಲಕನ ಅತಿ ವೇಗದೊಂದಿಗೆ ನಿದ್ದೆ ಮಂಪರು ಅಪಘಾತಕ್ಕೆ ಕಾರಣವಿರಬಹುದೆಂದು ಎನ್ನಲಾಗಿದೆ.

 ಪಡುಬಿದ್ರಿ ಪೋಲೀಸರು ಸ್ಥಳಕ್ಕೆ ಆಗಮಿಸಿ, ಮಂಗಳೂರು ಕಡೆಗೆ ಸಾಗುವ ವಾಹನಗಳನ್ನು ಸರ್ವಿಸ್ ರಸ್ತೆಯ ಮೂಲಕ ಸಾಗಲು ಅನುವು ಮಾಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.