• Home  
  • ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ (Padmashali Seva Samthi Kadu matt, Cultural emtertainment Competition)
- ಮನೋರಂಜನೆ - ಸಂಘ, ಸಂಸ್ಥೆಗಳು

ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ (Padmashali Seva Samthi Kadu matt, Cultural emtertainment Competition)

Share: ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ (Vitla) ವಿಟ್ಲ: ಪದ್ಮಶಾಲಿ ಸೇವಾಸಮಿತಿ, ಕಾಡುಮಠ, ವಿಟ್ಲದ ಸಾಂಸ್ಕೃತಿಕ ಮನೊರಂಜನಾ ಸ್ಪರ್ಧೆಯು ಮುಡಿಪು ಆಡಿಟೊರಿಯಂನಲ್ಲಿ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ  ರಾಮದಾಸ ಶೆಟ್ಟಿಗಾರ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.  ಕರಾವಳಿ ಸಂಸ್ಕೃತಿಯ ಮೂಲ ಸ್ರೋತವಾದ ಕೋಲ ಭೂತ, ಕೋಲ ನಾಗಾರಾಧನೆ ಇತ್ಯಾ ದಿಗಳನ್ನು  ಸಂರಕ್ಷಿಸಲು ಕಾರ್ಯಕ್ರಮವು ಪರ್ಯಾಪ್ತ ವಾಗುವುದೆಂದು ಅವರು ನುಡಿದರು. ಮಂಜೇಶ್ವರ  ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಮೋಕ್ತೆಸರರಾದ ರಾಮ ಗುರಿಕಾರ ಯಾನೆ ಮೋಹನ ಶೆಟ್ಟಿಗಾರರು […]

ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ

(Vitla) ವಿಟ್ಲ: ಪದ್ಮಶಾಲಿ ಸೇವಾಸಮಿತಿ, ಕಾಡುಮಠ, ವಿಟ್ಲದ ಸಾಂಸ್ಕೃತಿಕ ಮನೊರಂಜನಾ ಸ್ಪರ್ಧೆಯು ಮುಡಿಪು ಆಡಿಟೊರಿಯಂನಲ್ಲಿ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ  ರಾಮದಾಸ ಶೆಟ್ಟಿಗಾರ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.

 ಕರಾವಳಿ ಸಂಸ್ಕೃತಿಯ ಮೂಲ ಸ್ರೋತವಾದ ಕೋಲ ಭೂತ, ಕೋಲ ನಾಗಾರಾಧನೆ ಇತ್ಯಾ ದಿಗಳನ್ನು  ಸಂರಕ್ಷಿಸಲು ಕಾರ್ಯಕ್ರಮವು ಪರ್ಯಾಪ್ತ ವಾಗುವುದೆಂದು ಅವರು ನುಡಿದರು.

ಮಂಜೇಶ್ವರ  ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಮೋಕ್ತೆಸರರಾದ ರಾಮ ಗುರಿಕಾರ ಯಾನೆ ಮೋಹನ ಶೆಟ್ಟಿಗಾರರು ದೀಪ ಪ್ರಜ್ವಲಿಸಿ  ಕಾರ್ಯಕ್ರಮ ಉದ್ಘಾಟಿಸಿದರು.

ಸಾಹಿತಿಗಳಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರರವರು ಮುಖ್ಯ ಅಭ್ಯಾಗತರಾಗಿ ಮಾತನಾಡಿ, ಕಲಾಸಂಭ್ರಮವು ಕುಲಸಂಭ್ರಮವೂ ಆಗಿದ್ದು, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶ ಹೊಂದಿದ ಆದರ್ಶ ಕಾರ್ಯವೆಂದು ನುಡಿದರು.

ರಾಜೇಂದ್ರ  ಶೆಟ್ಟಿಗಾರ್ ಬಸ್ರೂರುರವರು ಮಾತನಾಡಿ, ಎಳೆಯರಲ್ಲಿ ಸತ್ಸಂಸ್ಕಾರವನ್ನು ರೂಢಿಸಿ,  ಸಂಗೀತ, ಸಾಹಿತ್ಯ, ಮತ್ತು ನಾಟ್ಯ ಇತ್ಯಾದಿಗಳಲ್ಲಿ ಅಭಿರುಚಿ ಬೆಳೆಸಲು ಈ ಕಾರ್ಯಕ್ರಮವು ಉತ್ತಮ ಮಾಧ್ಯಮವೆಂದು ಶ್ಲಾಘಿಸಿದರು.

ಬಾಬು ಶೆಟ್ಟಿಗಾರ್ ಕೋಕಳರವರು ಅನಿಸಿಕೆಯನ್ನು  ವ್ಯಕ್ತ ಪಡಿಸಿ, ಯುವಕರ ಪ್ರತಿಭೆಗೆ ಅವಕಾಶ ಕಲ್ಪಿಸುವ  ಮಹತ್ಕಾರ್ಯದ ಬಗ್ಗೆ ಪ್ರಶಂಸಿಸಿದರು.

ವಾಸುದೇವ ಶೆಟ್ಟಿಗಾರ್ ಮಂಜೇಶ್ವರರವರು ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಸಾರವನ್ನು  ಮುಂದಿನ ಜನಾಂಗಕ್ಕೆ  ಒಯ್ಯುವುದಕ್ಕೆ ಹೇತುವಾದ ಕ್ರಮಗಳ ಬಗ್ಗೆ ಆಸ್ಥೆ ವಹಿಸಬೇಕೆಂದು ಕರೆ ನೀಡಿದರು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವು ಸಂಸ್ಥೆಯ ಅಧ್ಯಕ್ಷರಾದ ತುಕಾರಾಮ ಶೆಟ್ಟಿಗಾರರ ಅಧ್ಯಕ್ಷತೆಯಲ್ಲಿ ಜರುಗಿತು.

 ಎಲ್ಲಾ ಕಾರ್ಯಕರ್ತರ ಪರಿಶ್ರಮ ಮತ್ತು ತ್ಯಾಗದಿಂದ ಅಭೂತಪೂರ್ವವಾಗಿ ಕಲಾಸಂಭ್ರಮವು ಮೂಡಿಬಂದ ಬಗೆಗೆ ಹರ್ಷ ವ್ಯಕ್ತಪಡಿಸಿದರಲ್ಲದೆ, ಹದಿನಾರು ದೇವಸ್ಥಾನಗಳ ಸಹಕಾರಕ್ಕೆ ಕೃತಜ್ಷತೆ ಸಲ್ಲಿಸಿದರು.  ದತ್ತರಾಜ ಶೆಟ್ಟಿಗಾರರು, ಉತ್ತಮ ಪರಿಕಲ್ಪನೆಯ ಪ್ರಯೋಗವು ಯಶಸ್ವಿ ಯಾಗಿರುವುದೆಂದು ತಿಳಿಸಿ ಸಂಸ್ಥೆಯನ್ನು ಅಭಿನಂದಿಸಿದರು.

ಲಕ್ಷಣ ಕೊಡಿಯಾಲ್ ಬೈಲ್ ರವರು ಮಾತನಾಡಿ, ಪ್ರಥಮ ಬಾರಿಗೆ ಜಯಭೇರಿ ಬಾರಿಸಿ ಕಲಾಸಂಭ್ರಮವು ಇತಿಹಾಸ ನಿರ್ಮಿಸಿರುವುದಾಗಿ ಪ್ರಶಂಸಿದರು.

 ಮಂಜೇಶ್ವರ  ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಚಂದ್ರಹಾಸ ಬೊಳ್ನರವರು ಕಲಾಸಂಭ್ರಮದ ಉತ್ತಮಿಕೆಯನ್ನು  ಕೊಂಡಾಡಿದರು.

ಈ ಶುಭಾವಸರದಲ್ಲಿ ಅಧ್ಯಾಪನ ಮತ್ತು ಯಕ್ಷಗಾನ ಕ್ಷೇತ್ರದ ಸಾಧಕರಾದ ದೂಮಣ್ಣ ಶೆಟ್ಟಿಗಾರರವನ್ನು  ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ, ಕಲೆಯು ಮನಸ್ಸಿಗೆ ಮುದವನ್ನು ಮತ್ತು ಆತ್ಮಕ್ಕೆ ಆನಂದವನ್ನು  ನೀಡುವುದೆಂದು ತಿಳಿಸಿದರಲ್ಲದೆ, ಕಲೆಯ ನೆಲೆಯನ್ನು  ಭದ್ರಗೊಳಿಸಲು ಪ್ರಯೊಗಶೀಲರಾದ ಸಂಸ್ಥೆಯ ಕಾರ್ಯಕರ್ತರನ್ನು ಅಭಿನಂದಿಸಿದರು.

 ಕಲಾಸ್ಪ ರ್ಧೆಯಲ್ಲಿ ಉಳ್ಳಾಲ, ಸಾಲಿಕೇರಿ, ಸಿದ್ಧ ಕಟ್ಟೆ  ಕಿನ್ನಿಮೂಲ್ಕಿ, ಹಳೆಯಂಗಡಿ ಮಂಗಳೂರು, ಮೂಲ್ಕಿ, ಕಾರ್ಕಳ ಮತ್ತು ಬಂಗ್ರ ಮಂಜೇಶ್ವರ ಸೇರಿದಂತೆ ಒಂಬತ್ತು ದೇವಸ್ಥಾನಗಳ ತಂಡಗಳು ಭಾಗವಹಿಸಿದ್ದವು. ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಮತ್ತು ಪಂಚಮ ಬಹುಮಾನವನ್ನು ಅನುಕ್ರ ಮವಾಗಿ ಸಿದ್ಧ ಕಟ್ಟೆ, ಮಂಗಳೂರು, ಕಾರ್ಕಳ ಮುಲ್ಕಿ ಮತ್ತು ಕಿನ್ನಿಮುಲ್ಕಿ ದೇವಸ್ಥಾನಗಳ ತಂಡಗಳು ಪಡೆದವು.

ಅತ್ಯುತ್ತಮ ನಿರೂಪಕ ಪ್ರಶಸ್ತಿಯ ಪ್ರಥಮ ಸ್ಥಾನವನ್ನು  ಪ್ರಜ್ವಲ್ ಸಿದ್ಧಕಟ್ಟೆ ಹಾಗೂ ದ್ವಿತೀಯ ಸ್ಥಾನವನ್ನು ಕವನ ಕಾರ್ಕಳರವರು ಪಡೆದರು.

ಅತ್ಯುತ್ತಮ ಸೃಜನಶೀಲ ಪ್ರಶಸ್ತಿಯ ಪ್ರಥಮ ಸ್ಥಾನವನ್ನು ಉಳ್ಳಾಲ ಹಾಗೂ ದ್ವಿತೀಯ ಸ್ಥಾನವನ್ನು ಸಾಲಿಕೇರಿ ದೇವಸ್ಥಾನಗಳ ತಂಡಗಳು ಪಡೆದವು.

  ತೀರ್ಪುಗಾರರಾಗಿ ಡಾ. ಮೀನಾಕ್ಷಿ ರಾಮಚಂದ್ರ,  ಶಶಿರಾಜ್ ಕಾವೂರ್ ಮತ್ತು  ಮೈಮ್ ರಾಮದಾಸ್‌ರವರು ಸಹಕರಿಸಿದರು.

ಸಮಾರಂಭದ ಯಶಸ್ಸಿಗೆ ಶ್ರಮಿಸಿದ ರೂವಾರಿಗಳನ್ನು ಗೌರವಿಸಲಾಯಿತು. ಡಾ. ಲೋಕರಾಜ್ ನಿರೂಪಿಸಿದರು. ವರದರಾಜ್ ಇರಾ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.