• Home  
  • ಪರ್ಕಳ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ ದೇಗುಲದಲ್ಲಿ ಪರಿಸರ ಸ್ನೇಹಿ “ಮಯೂರ” ದ್ವಾರ (Eco-friendly “Mayura” gate at Parkala Sri Mahalingeshwara Mahaganapati, Mahishamardhini Temple)
- ಧಾರ್ಮಿಕ

ಪರ್ಕಳ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ ದೇಗುಲದಲ್ಲಿ ಪರಿಸರ ಸ್ನೇಹಿ “ಮಯೂರ” ದ್ವಾರ (Eco-friendly “Mayura” gate at Parkala Sri Mahalingeshwara Mahaganapati, Mahishamardhini Temple)

Share: ಪರ್ಕಳ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ ದೇಗುಲದಲ್ಲಿ ಪರಿಸರ ಸ್ನೇಹಿ “ಮಯೂರ” ದ್ವಾರ ಮಹಾಗಣಪತಿ ಭಜನಾ ಮಂಡಳಿ, ವಾಲಿಬಾಲ್​ ಫ್ರೆಂಡ್ಸ್ ಪರ್ಕಳದ ಸದಸ್ಯರಿಂದ ನಿರ್ಮಾಣ (Udupi) ಉಡುಪಿ: ಜಿಲ್ಲೆಯ ಪ್ರಸಿದ್ಧ ಶಿವತಾಣಗಳಲ್ಲೊಂದಾದ ಪರ್ಕಳದ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ, ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.   ಬೆಳಗ್ಗೆ ಸಾಮೂಹಿಕ ಶತರುದ್ರಾಭಿಷೇಕ, ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಕುಣಿತ ಭಜನೆ ಹಾಗೂ ಮಂಗಲೋತ್ಸವ ನಡೆಯಿತು. ರಾತ್ರಿ 9:30ಕ್ಕೆ ರುದ್ರ ದೇವರಿಗೆ […]

(Udupi) ಉಡುಪಿ: ಜಿಲ್ಲೆಯ ಪ್ರಸಿದ್ಧ ಶಿವತಾಣಗಳಲ್ಲೊಂದಾದ ಪರ್ಕಳದ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ, ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.

  ಬೆಳಗ್ಗೆ ಸಾಮೂಹಿಕ ಶತರುದ್ರಾಭಿಷೇಕ, ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಕುಣಿತ ಭಜನೆ ಹಾಗೂ ಮಂಗಲೋತ್ಸವ ನಡೆಯಿತು. ರಾತ್ರಿ 9:30ಕ್ಕೆ ರುದ್ರ ದೇವರಿಗೆ ರಂಗಪೂಜೆ ನೆರವೇರಿತು.

  ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಹಾಗೂ ವಾಲಿಬಾಲ್​ ಫ್ರೆಂಡ್ಸ್ ​ ಪರ್ಕಳದ ಸದಸ್ಯರು ದೇವಾಲಯದ ಮುಂಭಾಗದಲ್ಲಿ ಸುಂದರವಾದ ಪರಿಸರ ಸ್ನೇಹಿ “ಮಯೂರ ದ್ವಾರ’ ನಿರ್ಮಿಸಿದ್ದರು. ತೆಂಗಿನ ಗರಿ, ತಾಳೆ ಗರಿ, ಬಾಳೆ ಹಾಗೂ ವಿವಿಧ ಫಲ ಮತ್ತು ತರಕಾರಿ ಬಳಸಿದ್ದ ಈ ದ್ವಾರ, ಶಿವನ ದರ್ಶನಕ್ಕೆ ಬಂದ ಭಕ್ತರ ಗಮನ ಸೆಳೆಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.