• Home  
  • ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್” (Palimaru: Vihitham Brahmin Youth Conference)
- ಕರಾವಳಿ - ಜೀವನಶೈಲಿ

ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್” (Palimaru: Vihitham Brahmin Youth Conference)

Share: ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್”  ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣ: ಪಲಿಮಾರು ಶ್ರೀ (Palimaru) ಪಲಿಮಾರು: ಮಕ್ಕಳಿಗೆ ಯಾವ ಹಂತದಲ್ಲಿಯೂ ಜವಾಬ್ದಾರಿಯನ್ನು ಕೊಡದೆ ಹೆತ್ತ ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೇಸರ ವ್ಯಕ್ತಪಡಿಸಿದರು.  ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ […]

ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶವಿಹಿತಮ್”

 ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣ: ಪಲಿಮಾರು ಶ್ರೀ

(Palimaru) ಪಲಿಮಾರು: ಮಕ್ಕಳಿಗೆ ಯಾವ ಹಂತದಲ್ಲಿಯೂ ಜವಾಬ್ದಾರಿಯನ್ನು ಕೊಡದೆ ಹೆತ್ತ ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೇಸರ ವ್ಯಕ್ತಪಡಿಸಿದರು.

 ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವದ ಸಂದರ್ಭದಲ್ಲಿ ಪಲಿಮಾರು ಮೂಲ ಮಠದಲ್ಲಿ ಶನಿವಾರ ಆಯೋಜಿಸಿದ್ದ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಕ್ಕಳು ರಾಜನಾಗಿ ಬೆಳೆಯಬೇಕು. ನಾವು ಜೀತದಾಳುಗಳಾಗಿರುತ್ತೇವೆ ಎನ್ನುವ ಭಾವನೆ ಬೆಳೆಸಿರುವಂತಹ ಸಮಾಜದ ವಿಘಟನೆಗನ್ನು ಕಂಡಿದ್ದೀರಿ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು. ಏನೇನು ಜವಾಬ್ದಾರಿಗಳನ್ನು ಕೊಡಬೇಕು ಎನ್ನುವುದನ್ನು ಸರಿಪಡಿಸಿದರೆ ಮುಂದಿನ ಸಮಾಜ ಸ್ವಲ್ಪ ನೆಮ್ಮದಿಯನ್ನು ಕಾಣಬಹುದು ಎಂದು ತಿಳಿಸಿದರು.

 ಶರೀರದ ಎಲ್ಲಾ ಅಂಗಗಳ ಆರೈಕೆ ಮಾಡುವ ಕರ್ತವ್ಯ ಹೇಗೋ ಅದೇ ರೀತಿ ಹಿಂದೂ ಸಂಘಟನೆಯಲ್ಲಿ ಬ್ರಾಹ್ಮಣ ಸಂಘಟನೆಯೂ ಅದಕ್ಕೆ ಪೂರಕವಾಗಿದೆ. ಬ್ರಾಹ್ಮಣರು ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಬ್ರಾಹ್ಮಣ ಸಮಾಜದಲ್ಲಿ ಪ್ರಸ್ತುತ ಬ್ರಾಹ್ಮಣ್ಯದ ಬಗ್ಗೆ ನಿಕೃಷ್ಟ ಬಾವ ಬಂದೊದಗಿದೆ. ಬ್ರಾಹ್ಮಣ್ಯದ ಬಗೆಗಿನೆ ಜಿಗುಪ್ಸೆ ಕಾಲಘಟ್ಟದಲ್ಲಿ ನಾವಿದ್ದೇವೆ. ಬ್ರಾಹ್ಮಣ್ಯ ಕಡಿಮೆಯದ್ದೇನು ಅಲ್ಲ. ಅನಾದಿ ಕಾಲದಿಂದ ಅವಿಚ್ಛಿನ್ನವಾದ ಪರಂಪರೆಯಲ್ಲಿ ಬಂದ ಗಾಯತ್ರಿ ಮಂತ್ರದ ಸಂಪತ್ತು ಬ್ರಾಹ್ಮಣ ಸಮಾಜದ ಆಸ್ತಿಯಾಗಿದೆ. ಈ ಮಂತ್ರ ಸಿದ್ದಿಯಿಂದ ಏನನ್ನೂ ಸಂಪಾದನೆ ಮಾಡಬಹುದು ಎಂದರು.   

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಭೀಮನಕಟ್ಡೆ ಮಠದ ಶ್ರೀ ರಘುವರೇಂದ್ರ ತೀರ್ಥರು ಆಶೀರ್ವಚನ ನೀಡಿದರು.

ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್‌ನಿಂದ ಪ್ರಕಟಿತ ಸರಳ ಮಹಾಭಾರತ ಹಾಗೂ ಆದಿತ್ಯ ಪುರಾಣ ವೆಂಕಟೇಶ್ವರ ಮಹಾತ್ಮೆ ಆಂಗ್ಲಾನುವಾದ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥರು, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಸಂಗೀತ ಕಲಾವಿದ ಕೃಷ್ಣಪವನ್ ಕುಮಾರ್, ನಿಕ್ಷಿತ್ ಪುತ್ತೂರು, ರೂಬಿಕ್ ಮೊಸಾಯಿಕ್ ಕಲಾವಿದ ಪೇತ್ರಿ ಪೃಥ್ವೀಶ್ ಭಟ್, ಇನ್ಫೋಸಿಸ್ ಕಂಪೆನಿಯ ಅಧಿಕಾರಿ ರವಿ ಚಿಪ್ಳೂಣ್ಕರ್ ಉಪಸ್ಥಿತರಿದ್ದರು.

ವಿಷ್ಣು ಆಚಾರ್ಯ ಸ್ವಾಗತಿಸಿದರು.

 ವಂಶಿ ಕೃಷ್ಣ ಆಚಾರ್ಯ ಕೃತಿ ಪರಿಚಯಿಸಿದರು. ಸಂಘಟಕ ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬ್ರಾಹ್ಮಣರ ಅನನ್ಯ ಜೀವನ ಕ್ರಮ ಮತ್ತು ಸಂರಕ್ಷಣೆಯ ಅನಿವಾರ್ಯತೆ, ಬ್ರಾಹ್ಮಣ ಸಮಾಜದ ಆಂತರಿಕ ಮತ್ತು ಬಾಹ್ಯ ಸವಾಲುಗಳು ಮತ್ತು ಪರಿಹಾರೋಪಾಯಗಳ ವಿಚಾರದಲ್ಲಿ ನಡೆದ ಎರಡು ವಿಚಾರಗೋಷ್ಠಿಗಳಲ್ಲಿ ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿ ಹಾಗೂ ಹಿಂದೂ ಧಾರ್ಮಿಕ ಮುಖಂಡ ಬಾಲಾಜಿ ರಾಘವೇಂದ್ರಾಚಾರ್ಯ ಉಪನ್ಯಾಸ ನೀಡಿದರು. ಪಲಿಮಾರು ಮಠದ ಅಧೀನದ ಸಾಧ್ವೀ ಮಾಧ್ವೀ ಶಾಲೆಯ ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.