• Home  
  • ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ (Railway Iron lock case at Palimaru Avaralu Mattu: MP Kota visits the scene)
- ಅಪರಾಧ - ರಾಜಕೀಯ

ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ (Railway Iron lock case at Palimaru Avaralu Mattu: MP Kota visits the scene)

Share: ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ   ಉನ್ನತಾಧಿಕಾರಿಗಳಿಂದ ತನಿಖೆಗೆ ಸಂಸದ ಕೋಟ ಆಗ್ರಹ  (Padubidri) ಪಡುಬಿದ್ರಿ, ಫೆ. 19: ಪಲಿಮಾರು ಅವರಾಲು ಮಟ್ಟಿನಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಪಲಿಮಾರು ಅವರಾಲು ಮಟ್ಟಿನ ರೈಲ್ವೇ ಹಳಿಯ ಬಳಿಯಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಗ್ಯಾಂಗ್‌ಮ್ಯಾನ್ ಮೇಲೆ ಪ್ರಕರಣ ದಾಖಲಾಗಿದ್ದು, ಬುಧವಾರ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಪದಾಧಿಕಾರಿಗಳು […]

ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ

  ಉನ್ನತಾಧಿಕಾರಿಗಳಿಂದ ತನಿಖೆಗೆ ಸಂಸದ ಕೋಟ ಆಗ್ರಹ

 (Padubidri) ಪಡುಬಿದ್ರಿ, ಫೆ. 19: ಪಲಿಮಾರು ಅವರಾಲು ಮಟ್ಟಿನಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಪಲಿಮಾರು ಅವರಾಲು ಮಟ್ಟಿನ ರೈಲ್ವೇ ಹಳಿಯ ಬಳಿಯಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಗ್ಯಾಂಗ್‌ಮ್ಯಾನ್ ಮೇಲೆ ಪ್ರಕರಣ ದಾಖಲಾಗಿದ್ದು, ಬುಧವಾರ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಪದಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಸಮಗ್ರ ತನಿಖೆಗೆ ಕೋಟ ಆಗ್ರಹ

  ಕೊಂಕಣ ರೈಲ್ವೇ ಕಾರ್ಪೊರೇಶನ್‌ನ ಅವರಾಲು ಮಟ್ಟು ಪ್ರದೇಶದಲ್ಲಿ ರೈಲು ಹಳಿಗಳ ಕಬ್ಬಿಣದ ಲಾಕ್‌ಗಳನ್ನು ಫೆ. 15ರಂದು ಬಾಲಕರಿಬ್ಬರು ಹೆಕ್ಕಿದ ಪ್ರಕರಣದ ಹಿನ್ನೆಲೆಯಲ್ಲಿ ರೈಲ್ವೇ ಸುರಕ್ಷೆಯ ಬಗೆಗಿನ ಜನರ ಆತಂಕಕ್ಕೆ ಹೊಣೆ ಯಾರಾಗುತ್ತಾರೆ ಮತ್ತು ಈ ಘಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದರ ಕುರಿತಾಗಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಸಮಗ್ರ ತನಿಖೆಯಾಗಬೇಕು ಎಂದು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

 ರೈಲ್ವೇ ಗ್ಯಾಂಗ್‌ಮ್ಯಾನ್, ಬಾಲಕರನ್ನು ಹಿಡಿದು ಪೊಲೀಸರಿಗೊಪ್ಪಿಸಲು ಆತ ಮಾಡಿದ ಕರ್ತವ್ಯದ ವಿರುದ್ಧವಾಗಿ ಆತನ ಮೇಲೆಯೇ ದೂರು ದಾಖಲಾಗಿದೆ. ಬಾಲಕರನ್ನು ನೂರು ರೂ. ದಂಡ ವಿಧಿಸಿ ಬಿಟ್ಟಿದ್ದಾರೆ. ಈ ಕುರಿತಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ರೈಲ್ವೇ ಸುರಕ್ಷತೆಯ ಮೂಲ ಪ್ರಶ್ನೆಯೂ ಇಲ್ಲಡಗಿದೆ ಎಂದೂ ಸಂಸದ ಶ್ರೀನಿವಾಸ ಪೂಜಾರಿ ಹೇಳಿದರು.

  ಗ್ಯಾಂಗ್‌ಮ್ಯಾನ್ ಓರ್ವ ಗಮನಿಸದೇ ಇದ್ದಲ್ಲಿ ರಾಷ್ಟ್ರೀಯ ದುರಂತ ಸಂಭವಿಸಬಹುದಾದ ಪ್ರಕರಣವಿದು. ಹಾಗಾಗಿ ಈ ಕುರಿತಾಗಿ ರಾಜ್ಯ ಸರಕಾರದಿಂದ ಸಮಗ್ರ ತನಿಖೆ ನಡೆಯಲೇ ಬೇಕು. ಯಾವುದೇ ಜಾತಿ, ಧರ್ಮ, ವರ್ಗಗಳಾದವರೂ ಸರಿ. ಪ್ರಕರಣಗಳ ಹಿಂದಿನ ಶಕ್ತಿ ಯಾವುದೆನ್ನುವುದು ಸೂಕ್ತ ತನಿಖೆಯ ಮೂಲಕವೇ ಹೊರಬರಬೇಕು.

 ಗ್ಯಾಂಗ್‌ಮ್ಯಾನ್ ವಿರುದ್ಧ ದಾಖಲಾದ ಪ್ರಕರಣವನ್ನು ಪರಿಶೀಲನೆಗೊಳಪಡಿಸಿ, ಆತ ನಿರಪರಾಧಿಯಾಗಿದ್ದರೆ, ಆತನ ವಿರುದ್ಧದ ಪ್ರಕರಣಗಳನ್ನು ವಾಪಾಸು ಪಡೆಯಬೇಕು. ವಿನಾಕಾರಣ ರೈಲ್ವೇ ಸುರಕ್ಷೆಯ ಬಗೆಗೆ ಧಕ್ಕೆ ತರುವ ವಾತಾವರಣವು ನಿರ್ಮಾಣವಾದರೆ ಅಂತಹಾ ಆತಂಕಕಾರಿ ಪರಿಸ್ಥಿತಿಗಳು ಎದುರಾದಾಗ ಮತ್ತೇನು ಮಾಡಬೇಕೆನ್ನುವುದನ್ನು ಚಿಂತಿಸುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ ಎಂದೂ ಸಂಸದ ಶ್ರೀನಿವಾಸ ಪೂಜಾರಿ ಹೇಳಿದರು.

ಸಂಸದರೊಂದಿಗೆ ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ಮತ್ತು ಶರಣ್ ಕುಮಾರ್ ಮಟ್ಟು, ಮಂಡಲ ಬಿಜೆಪಿ ವಕ್ತಾರ ನವೀನ್ ಎಸ್. ಕೆ., ರಂಜನ್ ಕೋಟ್ಯಾನ್, ಹರ್ಷಿತ್ ಪೂಜಾರಿ, ಆರ್‌ಪಿಎಫ್ ಇನ್ಸ್ಪೆಕ್ಟರ್ ಮಧುಸೂದನ್ ಮತ್ತಿತರರಿದ್ದರು.  

Leave a comment

Your email address will not be published. Required fields are marked *

eMedia Kannada  @2025. All Rights Reserved.