ಪಲಿಮಾರು; ನಂದಿಕೂರು ಸ್ಟ್ರೈಕರ್ಸ್ ಆಯೋಜನೆಯ ನಂದ್ಯೂರಮ್ಮ ಟ್ರೋಫಿ 2024 ಕ್ರಿಕೇಟ್ ಪಂದ್ಯಾಟ
(Palimaru) ಪಲಿಮಾರು: ಪಲಿಮಾರು ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಂದಿಕೂರು ಸ್ಟ್ರೈಕರ್ಸ್ ವತಿಯಿಂದ ನಡೆದ 8 ತಂಡಗಳನ್ನು ಒಳಗೊಂಡ ನಂದ್ಯೂರಮ್ಮ ಟ್ರೋಫಿ 2024 ಪಂದ್ಯಾಕೂಟವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀಹರಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ಶೆಟ್ಟಿ, ಮಹದೇಶ್ವರ ಭಜನಾ ಮಂಡಳಿ ಪಲಿಮಾರು ಇದರ ಅಧ್ಯಕ್ಷ ಸುಧಾಕರ್ ಪಲಿಮಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಲಿಮಾರು ಇದರ ಅಧ್ಯಕ್ಷ ಯೋಗೀಶ್ ಸುವರ್ಣ, ನಂದಿಕೂರು ಸ್ಟ್ರೈಕರ್ಸ್ ಇದರ ಮಾಲಕರಾದ ಪ್ರತೀಕ್ ಕೋಟ್ಯಾನ್, ಯೋಗೀಶ್ ಪೂಜಾರಿ ಅವರಾಲು, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ದೇವಾಡಿಗ, ಹೊಯಿಗೆ ಫ್ರೆಂಡ್ಸ್ ಹೊಯಿಗೆ ಪಲಿಮಾರು ಇದರ ಅಧ್ಯಕ್ಷ ರಿತೇಶ್ ದೇವಾಡಿಗ, ಪಲಿಮಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಾರಂಬೆಟ್ಟು, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಪೂಜಾರಿ ಪಲಿಮಾರು, ಮಹಾಲಿಂಗೇಶ್ವರ ಕ್ರಿಕೆಟರ್ಸ್ ಇದರ ಅಧ್ಯಕ್ಷ ಭರತ್ ಭಟ್, ಪಲಿಮಾರು ಬಿಜೆಪಿ ಮುಖಂಡ ಪ್ರಸಾದ್ ಪಲಿಮಾರು, ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಶೆಟ್ಟಿ, ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ಅಡ್ವೆ ನಿತೇಶ್ ಕರ್ಕೇರ ಹಾಗೂ ಅರುಣ್ ಪೂಜಾರಿ ಮಾಲಿಕತ್ವದ ಅಡ್ಡೆದ ಜವನೆರ್ ತಂಡವು ಫೈನಲ್ ಪಂದ್ಯಾಟದಲ್ಲಿ ಜಯಶಾಲಿಯಾಗಿ ಚಾಂಪಿಯನ್ ಟ್ರೋಪಿ ಮತ್ತು 50004/- ನಗದು ಪುರಸ್ಕಾರ ಪಡೆದುಕೊಂಡಿದೆ.
ಪಲಿಮಾರು ಗುರುಪ್ರಸಾದ್ ಪೂಜಾರಿಯವರ ಮಾಲಿಕತ್ವದ ಆಂಜನೇಯ ಕ್ರಿಕೆಟರ್ಸ್ ಪಲಿಮಾರು ತಂಡ ರನ್ನರ್ ಅಪ್ ಟ್ರೋಫಿ ಜೊತೆ 30004/- ನಗದು ಪುರಸ್ಕಾರ ಪಡೆದುಕೊಂಡಿದೆ.
ಪೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಆದರ್ಶ್ ಶೆಟ್ಟಿ ಪಡೆದುಕೊಂಡರೆ, ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಸುಕೇಶ್ ಮಟ್ಟು ತಮ್ಮದಾಗಿಸಿಕೊಂಡಿದ್ದಾರೆ.
ಉತ್ತಮ ದಾಂಡಿಗ ಪ್ರಶಸ್ತಿ ಜಿತೇಶ್ ಆಚಾರ್ಯ ಪಾಲಾಗಿದೆ. ಯೋಗೀಶ್ ಸುವರ್ಣ ಮಾಲಿಕತ್ವದ ವೀರ ವಿನಾಯಕ ತಂಡದ ಪ್ರತೀಕ್ ಆಚಾರ್ಯ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿ ವಿಶೇಷ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಉತ್ತಮ ಎಸೆತಗಾರ ಪ್ರಶಸ್ತಿ ಧನುಷ್ ಪಡೆದುಕೊಂಡರೆ, ಸರಣಿಯುದ್ಧಕ್ಕೂ ಉತ್ತಮ ಆಲ್ ರೌಂಡರ್ ಪ್ರದರ್ಶನ ತೋರಿದ ಅಡ್ವೆ ಜವನೆರ್ ತಂಡದ ಕಪ್ತಾನ ಜಿತೇಶ್ ಪೂಜಾರಿ ಸರಣಿ ಶೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪಂದ್ಯಾಕೂಟಕ್ಕೆ ಬೆನ್ನೆಲುಬಾಗಿ ನಿಂತು ಸರ್ವ ರೀತಿಯಲ್ಲೂ ಸಹಕರಿಸಿದ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಚೀಂಕ್ರಿಗುತ್ತು ಹಾಗೂ ಪಂಚಾಯತ್ ಉಪಾಧ್ಯಕ್ಷರಾದ ರಾಯೇಶ್ವರ ಪೈ, ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಪುತ್ರನ್, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೊ, ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಪಡುಬಿದ್ರಿ, ಪತ್ರಕರ್ತ ಸುರೇಶ್ ಎರ್ಮಾಳ್, ಪ್ರಸಾದ್ ಪಲಿಮಾರು, ರಮೇಶ್ ಶೆಟ್ಟಿ ಪಾರಂಬೆಟ್ಟು, ಅಡ್ಡೆದ ಜವನರ್ ತಂಡದ ಮಾಲಕ ನಿತೇಶ್ ಕರ್ಕೇರ, ಆಂಜನೇಯ ಕ್ರಿಕೆಟರ್ಸ್ ತಂಡದ ಮಾಲಕ ಗುರುಪ್ರಸಾದ್ ಪಲಿಮಾರು ಉಪಸ್ಥಿತರಿದ್ದರು.
ಪಂದ್ಯಾಕೂಟದ ವೀಕ್ಷಕ ವಿವರಣಾಕಾರರಾಗಿ ವಿನಯ್ ಉದ್ಯಾವರ ಮತ್ತು ಶಿವು ಕಾಪು ಹಾಗೂ ನಿರ್ಣಯಕಾರರಾಗಿ ಯಾದವ ಪೂಜಾರಿ ಕಾಪು ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮವನ್ನು ಸಂತೋಷ್ ನಂಬಿಯಾರ್ ನಿರೂಪಿಸಿದರು.

