• Home  
  • ಪಶ್ಚಿಮ ಬಂಗಾಳದ ಒಂಡಾಗ್ರಾಮ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲುಗಳು ಪರಸ್ಪರ ಢಿಕ್ಕಿ
- ದೇಶ-ವಿದೇಶ

ಪಶ್ಚಿಮ ಬಂಗಾಳದ ಒಂಡಾಗ್ರಾಮ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲುಗಳು ಪರಸ್ಪರ ಢಿಕ್ಕಿ

Share: ಪ.ಬಂಗಾಳ: ಜೂ. 2ರಂದು ದೇಶದ ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ರೈಲು ಅಪಘಾತ ಒಡಿಶಾದಲ್ಲಿ ನಡೆದಿತ್ತು. ಸುಮಾರು 292 ಮಂದಿಯ ಬಲಿ ತೆಗೆದ ಈ ರೈಲು ದುರಂತದ ಕಹಿ ಘಟನೆ ಮಾಸುವ ಮುನ್ನವೇ ಇನ್ನೊಂದು ದುರಂತ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.  ಬಂಕುರ ಜಿಲ್ಲೆ ಒಂಡಾಗ್ರಾಮ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲುಗಳು ಪರಸ್ಪರ ಢಿಕ್ಕಿಯಾಗಿ ರವಿವಾರ ಮುಂಜಾನೆ 4 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರೈಲುಗಳ ಡಿಕ್ಕಿ ಹಿನ್ನಲೆಯಲ್ಲಿ ಹಳಿಗಳು […]

ಪ.ಬಂಗಾಳ: ಜೂ. 2ರಂದು ದೇಶದ ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ರೈಲು ಅಪಘಾತ ಒಡಿಶಾದಲ್ಲಿ ನಡೆದಿತ್ತು. ಸುಮಾರು 292 ಮಂದಿಯ ಬಲಿ ತೆಗೆದ ಈ ರೈಲು ದುರಂತದ ಕಹಿ ಘಟನೆ ಮಾಸುವ ಮುನ್ನವೇ ಇನ್ನೊಂದು ದುರಂತ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

 ಬಂಕುರ ಜಿಲ್ಲೆ ಒಂಡಾಗ್ರಾಮ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲುಗಳು ಪರಸ್ಪರ ಢಿಕ್ಕಿಯಾಗಿ ರವಿವಾರ ಮುಂಜಾನೆ 4 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರೈಲುಗಳ ಡಿಕ್ಕಿ ಹಿನ್ನಲೆಯಲ್ಲಿ ಹಳಿಗಳು ಹಾಳಾಗಿದ್ದು, ಹಲವು ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ.

 ಒಂಡಾಗ್ರಾಮ್ ನಿಲ್ದಾಣದಲ್ಲಿ ಹಳಿಗಳ ನಿರ್ವಹಣೆ ನಡೆಸಲಾಗುತಿತ್ತು. ಈ ಮಾರ್ಗದಲ್ಲಿ ಹೊರಟಿದ್ದ ಗೂಡ್ಸ್ ರೈಲು ನಿಲ್ದಾಣದಲ್ಲಿ ನಿಂತಿದ್ದ ನಿರ್ವಹಣಾ ರೈಲಿಗೆ ಡಿಕ್ಕಿ ಹೊಡೆದಿದೆ. ನಿಲ್ಲುವ ಸಿಗ್ನಲ್ ನೀಡಿದ್ದರೂ ರೈಲು ವೇಗವಾಗಿ ಹೊರಟಿದ್ದು ದುರ್ಘಟನೆಗೆ ಕಾರಣ ಎನ್ನಲಾಗಿದೆ. ಎಂಟು ಬೋಗಿಗಳು ಉರುಳಿಬಿದ್ದಿವೆ. ಮಾರ್ಗಗಳನ್ನು ಕೆಲವೇ ಗಂಟೆಗಳಲ್ಲಿ ಸರಿಪಡಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.