• Home  
  • ಪಾಂಗಾಳ “ಆಸರೆ” ಹಿರಿಯ ನಾಗರಿಕರ ಸೇವಾ ಸಂಸ್ಥೆ ದಶಮಾನೋತ್ಸವ ಸಂಭ್ರಮ ಉದ್ಘಾಟನೆ (Pangala “Asare” Senior Citizens Service Organization Tenth Anniversary Celebration Inauguration)
- CONGARTULATIONS - ಸಂಘ, ಸಂಸ್ಥೆಗಳು

ಪಾಂಗಾಳ “ಆಸರೆ” ಹಿರಿಯ ನಾಗರಿಕರ ಸೇವಾ ಸಂಸ್ಥೆ ದಶಮಾನೋತ್ಸವ ಸಂಭ್ರಮ ಉದ್ಘಾಟನೆ (Pangala “Asare” Senior Citizens Service Organization Tenth Anniversary Celebration Inauguration)

Share: ಪಾಂಗಾಳ “ಆಸರೆ” ಹಿರಿಯ ನಾಗರಿಕರ ಸೇವಾ ಸಂಸ್ಥೆ ದಶಮಾನೋತ್ಸವ ಸಂಭ್ರಮ ಉದ್ಘಾಟನೆ (Pangala) ಪಾಂಗಾಳ : ಆಸರೆ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಆಸರೆ ಹಿರಿಯ ನಾಗರಿಕರ ಸೇವಾ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಮತ್ತು ಹಿರಿಯ ನಾಗರಿಕರ ವಸತಿ ಗೃಹದ ಪ್ರಥಮ ಮಹಡಿಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಅವರು ಮಾತನಾಡಿ, ಆಸರೆ ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಮಾನವೀಯತೆ ಸೇವೆಗೆ ನಾವೆಲ್ಲರೂ ಬೆಂಬಲ, […]

(Pangala) ಪಾಂಗಾಳ : ಆಸರೆ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಆಸರೆ ಹಿರಿಯ ನಾಗರಿಕರ ಸೇವಾ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಮತ್ತು ಹಿರಿಯ ನಾಗರಿಕರ ವಸತಿ ಗೃಹದ ಪ್ರಥಮ ಮಹಡಿಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನೆರವೇರಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.

ಅವರು ಮಾತನಾಡಿ, ಆಸರೆ ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಮಾನವೀಯತೆ ಸೇವೆಗೆ ನಾವೆಲ್ಲರೂ ಬೆಂಬಲ, ಸಹಕಾರ ನೀಡಬೇಕಿದೆ. ಪೆನ್ವೆಲ್ ಸೋನ್ಸ್ ಅವರು ಸೇವೆ ಆರಂಭಿಸುವಾಗಲೂ ಬೆಂಬಲಿಸಿದ್ದು, ಈಗಲೂ ಅವರೊಂದಿಗೆ ಇರಲು ಖುಷಿಯಾಗುತ್ತಿದೆ. ಇಂತಹ ಸೇವೆಗೆ ನಿರಂತರ ಸಹಕಾರ ನೀಡುವುದರ ಜತೆಗೆ ಸರಕಾರದಿಂದ ದೊರೆಯುವ ಪ್ರಯೋಜನ ಒದಗಿಸಿ ಕೊಡುವ ಭರವಸೆ ನೀಡಿದರು.

 ಸಾಧಕರನ್ನು ಸನ್ಮಾನಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹೆತ್ತು ಹೊತ್ತು ಸಲಹಿದ ಹೆತ್ತವರನ್ನು ಸಾಕಲು ಕಷ್ಟಪಡುತ್ತಿರುವ ಈ ಸಮಯದಲ್ಲಿ ಸಮಾಜದಲ್ಲಿ ಯಾರು ಇಲ್ಲದ ನೂರಾರು ಹಿರಿಯರನ್ನು ತನ್ನ ತಂದೆ ತಾಯಿಗಳಂತೆ ನೋಡಿಕೊಳ್ಳುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ. ಇಂತಹ ಸೇವೆ ನೀಡುತ್ತಿರುವ ಪೆನ್ವೆಲ್ ಸೋನ್ಸ್‌ಮತ್ತು ಬಳಗದ ಸೇವೆ ಶ್ಲಾಘನೀಯವಾದುದ್ದಾಗಿದೆ ಎಂದರು.

ಆಸರೆ ಹಿರಿಯ ನಾಗರಿಕ ಸೇವಾ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ವಿವಿಧ ಸೇವೆ ಮಾಡಿದ ಮತ್ತು ಕಟ್ಟಡ ನಿರ್ಮಾಣಕ್ಕೆ ದಾನ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.

 ಸಮಾಜ ಸೇವಕ ಸುರೇಶ್‌ ಶೆಟ್ಟಿ ಯಾನೆ ಸೂರಿ ಶೆಟ್ಟಿ ಕಾಪು, ಅಂಬುಲೆನ್ಸ್‌ ಚಾಲಕ ನಾಗರಾಜ್ ಕಾಪು, ಶ್ರೀನಾಥ್ ಶೆಟ್ಟಿ, ರಾಜೇಂದ್ರ ಸನಿಲ್ ಅವರನ್ನು ಸನ್ಮಾನಿಸಲಾಯಿತು.

 ಕಾಪು ತಾಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಮತ್ತು ಪಾಂಗಾಳ ಗುಡ್ಡೆ ಸಿ.ಎಸ್.ಐ. ಕ್ರಿಸ್ತ ವಂದನಾ ಚರ್ಚ್‌ನ ಧರ್ಮಗುರು ಶಶಿಕಲಾ ಅಂಚನ್‌ರವರು ಪ್ರಥಮ ಮಹಡಿಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ರಾಜೇಶ್ ರಾವ್ ಪಾಂಗಾಳ ಅಧ್ಯಕ್ಷತೆ ವಹಿಸಿದ್ದರು.

 ಸಿಎ ಗಣೇಶ್ ಕೆ. ಶೆಟ್ಟಿ ಮುಂಬಯಿ, ಮುಂಬಯಿಯ ಉದ್ಯಮಿಗಳಾದ ಪ್ರದೀಪ್ ಪೂಜಾರಿ, ಗೋವಿಂದ ಶೆಟ್ಟಿ ಆರ್ಯಾಡಿ, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ರಘುನಾಥ ಶೆಟ್ಟಿ ನಾನಯರ ಗರಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಆಸರೆ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಪೆನ್ಸೆಲ್ ಸೋನ್ಸ್ ಸ್ವಾಗತಿಸಿ, ಪ್ರಸ್ತಾವನೆಗೈದರು.

 ಕಾರ್ಯದರ್ಶಿ ಸ್ನೇಹಲತಾ ಪಾಂಗಾಳ ವಂದಿಸಿದರು. ಸಂತೋಷ್ ಎಂ. ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.