• Home  
  • ಕೋಟ: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ, ತಂದೆ, ಮಗ ಸಾವು, ತಾಯಿಯ ರಕ್ಷಣೆ (Kota: Three members of the same family attempt suicide by jumping into a well, father and son die, mother rescued)
- ಅಪರಾಧ

ಕೋಟ: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ, ತಂದೆ, ಮಗ ಸಾವು, ತಾಯಿಯ ರಕ್ಷಣೆ (Kota: Three members of the same family attempt suicide by jumping into a well, father and son die, mother rescued)

Share:  ಕೋಟ: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ, ತಂದೆ, ಮಗ ಸಾವು, ತಾಯಿಯ ರಕ್ಷಣೆ (Kota) ಕೋಟ:  ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತಂದೆ, ಮಗ ಸಾವನ್ನಪ್ಪಿ ತಾಯಿಯನ್ನು ರಕ್ಷಿಸಿದ ಘಟನೆ ಗುರುವಾರ ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.  ಮೃತರನ್ನು ಮಾಧವ ದೇವಾಡಿಗ (55), ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ತಾಯಿ ತಾರಾ ದೇವಾಡಿಗ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. […]

(Kota) ಕೋಟ:  ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತಂದೆ, ಮಗ ಸಾವನ್ನಪ್ಪಿ ತಾಯಿಯನ್ನು ರಕ್ಷಿಸಿದ ಘಟನೆ ಗುರುವಾರ ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.

 ಮೃತರನ್ನು ಮಾಧವ ದೇವಾಡಿಗ (55), ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ.

ತಾಯಿ ತಾರಾ ದೇವಾಡಿಗ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.

 ಮೂಲತಃ ಕುಂದಾಪುರದವರಾದ ಇವರು ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಶಂಕರ್ ಶೆಟ್ಟಿ ಅವರ ಕಟ್ಟಡದಲ್ಲಿ ಸುಮಾರು ಏಳು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ತಂದೆ ಮತ್ತು ಮಗ ಕುಂದಾಪುರ ರಿಲಯನ್ಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಕುಂಭಾಸಿ ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಡುಗೆ ಕೆಲಸದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

 ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆ ರಂಗೋಲಿ ಹಾಕಲೆಂದು ಮನೆಯಿಂದ ಹೊರಗಡೆ ಬಂದಾಗ ಮನೆಯ ಎದುರುಗಡೆ ಇದ್ದ ಬಾವಿಯಲ್ಲಿ ಕಿರುಚುವ ಶಬ್ದ ಕೇಳಿ ಬಾವಿಯಲ್ಲಿ ಇಣುಕಿ ನೋಡುವಾಗ ಮಹಿಳೆ ಬಾವಿಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಅಕ್ಕ ಪಕ್ಕದವರನ್ನು ಕರೆದು ತಕ್ಷಣ ಮಹಿಳೆಯನ್ನು ರಕ್ಷಿಸಲಾಯಿತು.

ಮೂವರನ್ನು ಬಾವಿಯಿಂದ ಮೇಲೆತ್ತಾಗಿದ್ದು, ಅಷ್ಟರಲ್ಲಿ ಪತಿ, ಮತ್ತು ಮಗ ಮೃತಪಟ್ಟಿದ್ದಾರೆ.

 ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.