ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ :
(Pangala) ಪಾಂಗಾಳ: ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಸುಮಾರು 39 ವರ್ಷಗಳ ಸುದೀರ್ಘ ಕಾಲ ದ್ವಿತೀಯ ದರ್ಜೆಯ ಗುಮಾಸ್ತರಾಗಿ ಸೇವೆ ಸಲ್ಲಿಸಿದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿಜಯ ಶೇರಿಗಾರರವರು ಸೇವೆಯಿಂದ ನಿವೃತ್ತಿ ಹೊಂದಿದರು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ಶಾಲೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾವರ್ಧಕ ಪ್ರಾಥಮಿಕ ಶಾಲೆಯಿಂದ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಯಿತು.
ವಿಜಯ ಸೇರಿದಾರ ದಂಪತಿಗಳನ್ನು ಶಾಲು ಹೊಧಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಪಿ .ರಾಜೇಶ್ ರಾವ್ ವಹಿಸಿದ್ದರು.
ಕಾರ್ಯದರ್ಶಿ ಪಿ. ಸುಬ್ಬ ರಾವ್ ನಿವೃತ್ತರ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಭೋಜರಾಜ ಶೆಟ್ಟಿ, ಸುರೇಶ್ ರಾವ್, ರಾಧಾಕೃಷ್ಣ ರಾವ್, ರಾಜೇಶ್ ಶೆಟ್ಟಿ, ಗೋಪಾಲಕೃಷ್ಣರಾವ್, ಪ್ರೌಢಶಾಲಾ ನಿವೃತ್ತ ಶಿಕ್ಷಕಿ ಶಕುಂತಲಾ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಿ ಶೆಟ್ಟಿ, ಹಳೆ ವಿದ್ಯಾರ್ಥಿಗಳಾದ ರಾಜೇಶ್ ಶೆಟ್ಟಿ, ಸಹನಾ ದೇವಾಡಿಗ, ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.
ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಶ್ರೀಯುತ ಫ್ರಾನ್ಸಿಸ್ ಮಿನೇಜಸ್ ವಿಜಯ ಸೇರಿಗಾರರ ಸೇವೆಯನ್ನು ಸ್ಮರಿಸಿ, ಅಅವರ ಮುಂದಿನ ಜೀವನ ಸುಖಮಯ ಆಗುವಂತೆ ಸ್ಮರಿಸಿದರು.
ಶಿಕ್ಷಕಿ ಶ್ರೀಮತಿ ಜ್ಯೋತಿ ನಿವೃತ್ತರ ಸನ್ಮಾನ ಪತ್ರ ವಾಚಿಸಿದರು .
ಶಿಕ್ಷಕಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಕಲ್ಯಾಣಿಯವರು ವಂದಿಸಿದರು.

