ಪಾಂಗಾಳ : ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಕಟ್ಟಡ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂ. ಮಂಜೂರು
(Kaup) ಕಾಪು : ಕಾಪು ತಾಲೂಕಿನ ಪಾಂಗಾಳ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2 ಲಕ್ಷ ರೂ. ಮೊತ್ತದ ಮಂಜೂರಾತಿ ಪತ್ರವನ್ನು ಕಾಪು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ
ಮಮತ ಶೆಟ್ಟಿ ಯವರು ದೇವಳದ ಸಮಿತಿ ಅಧ್ಯಕ್ಷರಾದ ನಾಗರಾಜ್ ರಾವ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಯೋಜನಾಧಿಕಾರಿ ಮಮತ ಶೆಟ್ಟಿ, ವಲಯಾಧ್ಯಕ್ಷೆ ಸುಜಯ ಶೆಟ್ಟಿ, ಮೇಲ್ವಿಚಾರಕರಾದ ವೀಣಾ, ಸೇವಾ ಪ್ರತಿನಿಧಿ ಜ್ಯೋತಿ ಉಪಸ್ಥಿತರಿದ್ದರು.

