ಪುತ್ತೂರು : ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳಿಗೆ ಅಂತರಾಜ್ಯ ಮಟ್ಟದ ”ಕೃಷಿ ರತ್ನ ಪ್ರಶಸ್ತಿ” ಪ್ರಧಾನ
(Putturu)ಪುತ್ತೂರು: ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಪುತ್ತೂರಿನ ಲಯನ್ಸ್ ಸೇವಾ ಮಂದಿರ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ, ತಮ್ಮ ಜೇನು ಕೃಷಿ, ಸಂಶೋಧನೆ ಬರಹ ಸಹಿತ ಕಲಾ ಸೇವೆಗಾಗಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ದಂಪತಿಗಳಿಗೆ ಅಭಿನಂದನೆಗಳೊಂದಿಗೆ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪೂಡಾ ಅಧ್ಯಕ್ಷ ರಾಮಚಂದ್ರ ಅಮಳ, ಪುತತೂರು ನಗರ ಪ್ರಾಧಿಕಾರ ಇದರ ಸದಾನಂದ ಮಾವಾಜಿ, ಪದ್ಮರಾಜ ರಾಜ್, ಬಿ ಸಿ ಚಾರ್ವಾಕ, ವಿಜಯಕುಮಾರ್ ಸುಳ್ಯ, ರಾಮ ಪಾಂಬಾರು, ಮಮತಾ ಮಡಿಕೇರಿ, ಸನತ್ ಕೆ, ಪ್ರಜ್ವಲ್ ಕೆ, ನವ್ಯ ಕೆ, ಹರೀಶ್ ಪಂಜಿ ಕಲ್ಲು, ಸಂದೀಪ್ ಅಡ್ಯನಡ್ಕ ಮಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

