• Home  
  • ಪೊಲೀಸ್ ಇಲಾಖೆ–ಮನಸ್ವಿನಿ ಆಸ್ಪತ್ರೆ ಸಹಯೋಗದಲ್ಲಿ ದಿಢೀರ್ ಡ್ರಗ್ಸ್ ತಪಾಸಣೆ (Police Department-Manaswini Hospital collaboration conducts rapid drug screening)
- Helth - PROBLEMS

ಪೊಲೀಸ್ ಇಲಾಖೆ–ಮನಸ್ವಿನಿ ಆಸ್ಪತ್ರೆ ಸಹಯೋಗದಲ್ಲಿ ದಿಢೀರ್ ಡ್ರಗ್ಸ್ ತಪಾಸಣೆ (Police Department-Manaswini Hospital collaboration conducts rapid drug screening)

Share: ಪೊಲೀಸ್ ಇಲಾಖೆ–ಮನಸ್ವಿನಿ ಆಸ್ಪತ್ರೆ ಸಹಯೋಗದಲ್ಲಿ ದಿಢೀರ್ ಡ್ರಗ್ಸ್ ತಪಾಸಣೆ  ಮಂಗಳೂರು ನಗರ  ಡ್ರಗ್ಸ್ ಮುಕ್ತಗೊಳಿಸುವತ್ತ ಮಹತ್ವದ ಹೆಜ್ಜೆ (Mangaluru) ಮಂಗಳೂರು: ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ದೃಢ ಸಂಕಲ್ಪದೊಂದಿಗೆ ಮಂಗಳೂರು ಪೊಲೀಸ್ ಇಲಾಖೆ, ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆಯವರ ಸಹಯೋಗದಲ್ಲಿ ದಿಢೀರ್ ಡ್ರಗ್ಸ್ ತಪಾಸಣೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.    ಯಾವುದೇ ಮುನ್ಸೂಚನೆ ನೀಡದೆ ಒಂದೇ ದಿನದಲ್ಲಿ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ತಪಾಸಣೆ ನಡೆಸಿರುವುದು ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಪ್ರಥಮವಾಗಿದೆ.   ಕೊಣಾಜೆ–ದೇರಳಕಟ್ಟೆ ವ್ಯಾಪ್ತಿಯ […]

(Mangaluru) ಮಂಗಳೂರು: ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ದೃಢ ಸಂಕಲ್ಪದೊಂದಿಗೆ ಮಂಗಳೂರು ಪೊಲೀಸ್ ಇಲಾಖೆ, ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆಯವರ ಸಹಯೋಗದಲ್ಲಿ ದಿಢೀರ್ ಡ್ರಗ್ಸ್ ತಪಾಸಣೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

   ಯಾವುದೇ ಮುನ್ಸೂಚನೆ ನೀಡದೆ ಒಂದೇ ದಿನದಲ್ಲಿ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ತಪಾಸಣೆ ನಡೆಸಿರುವುದು ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಪ್ರಥಮವಾಗಿದೆ.

  ಕೊಣಾಜೆ–ದೇರಳಕಟ್ಟೆ ವ್ಯಾಪ್ತಿಯ ಕೆಲವು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚಣೆ ನಡೆದಿದೆ. ಡ್ರಗ್ಸ್ ತಪಾಸಣೆಗೆ ಒಳಪಟ್ಟ ಎಲ್ಲಾ ವಿದ್ಯಾರ್ಥಿಗಳ ವರದಿಗಳು ನೆಗೆಟಿವ್ ಆಗಿರುವುದು  ವಿಶೇಷವಾಗಿದ್ದು, ವಿದ್ಯಾರ್ಥಿಗಳಲ್ಲಿ ಮೂಡುತ್ತಿರುವ ಜಾಗೃತಿ ಮತ್ತು ಜವಾಬ್ದಾರಿಯ ಮನೋಭಾವವನ್ನು ಸ್ಪಷ್ಟಪಡಿಸಿದೆ.

   ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀಂದ್ರ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ವಿಭಾಗದ ಎಸಿಪಿ ವಿಜಯ್ ಕ್ರಾಂತಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

    ಈ ದಿಢೀರ್ ಕಾರ್ಯಾಚರಣೆಯ ವಿಶೇಷವೆಂದರೆ, ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆಗೆ ಯಾವುದೇ ಮುಂಚಿತ ಮಾಹಿತಿ ನೀಡದೇ ಕೇವಲ ಲೊಕೇಶನ್ ಹಂಚಿಕೊಂಡು ತಕ್ಷಣ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಲಾಗಿತ್ತು. ಒಂದೇ ದಿನದಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಡ್ರಗ್ಸ್ ತಪಾಸಣೆ ನಡೆಸಿರುವುದು ಎಲ್ಲರಲ್ಲೂ ಅಚ್ಚರಿ ಉಂಟುಮಾಡಿದ್ದು, ಇಂತಹ ತ್ವರಿತ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗಳೂ ಸಾಧ್ಯವೆಂಬುದನ್ನು ತೋರಿಸಿದೆ.

   ಫರಂಗಿಪೇಟೆಯಲ್ಲಿರುವ ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆ ರಿಹ್ಯಾಬಿಲಿಟೇಷನ್ ಸೆಂಟರ್ ಆಗಿದ್ದು, ಪ್ರಖ್ಯಾತ ಮನೋವೈದ್ಯ ಡಾ. ರವೀಶ ತುಂಗಾ ಐರೋಡಿ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಜಾಗೃತಿ ಕಾರ್ಯಾಗಾರಗಳು, ಅರಿವು ಕಾರ್ಯಕ್ರಮಗಳು ಹಾಗೂ ಡ್ರಗ್ಸ್ ತಪಾಸಣೆಗಳನ್ನು ನಡೆಸುತ್ತಾ ಪಾರದರ್ಶಕ ಮತ್ತು ನಿಖರ ವರದಿಗಳನ್ನು ನೀಡುತ್ತಿದೆ.

    ಒಟ್ಟಿನಲ್ಲಿ, ಪೊಲೀಸ್ ಇಲಾಖೆಯ ಈ ರೀತಿಯ ಕಟ್ಟುನಿಟ್ಟಾದ ಮತ್ತು ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ವಿರುದ್ಧ ಅರಿವು ಹೆಚ್ಚಾಗಿದ್ದು, ನಾಗರಿಕರು, ಸಂಘ–ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡುತ್ತಿರುವುದು ಕಂಡುಬಂದಿದೆ.

  ಡ್ರಗ್ಸ್ ಮುಕ್ತ ಕ್ಯಾಂಪಸ್ ಮತ್ತು ಡ್ರಗ್ಸ್ ಮುಕ್ತ ನಗರ ನಿರ್ಮಾಣದತ್ತ ಮಂಗಳೂರು ಪೊಲೀಸ್ ಇಲಾಖೆ ಕೈಗೊಂಡಿರುವ ಈ ಕ್ರಮಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.