ಪ್ರತಾಪ್ ಸಿಂಹ ಮಹಿಷನನ್ನು ದೆವ್ವಕ್ಕೆ ಹೋಲಿಸಿದರೆ, ನಾವು ಸಂಸದ ಪ್ರತಾಪ್ ಸಿಂಹನನ್ನು ದೆವ್ವಕ್ಕೆ ಹೋಲಿಸುತ್ತೇವೆ : ಕಾಪುವಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹೇಳಿಕೆ
ಉಡುಪಿ\ಕಾಪು: ಪ್ರತಾಪ್ ಸಿಂಹ ಮಹಿಷನನ್ನು ದೆವ್ವವೆಂದು ಜರೆದರೆ ನಾವು ಪ್ರತಾಪ್ ಸಿಂಹನನ್ನು ದೆವ್ವವೆಂದು ಕರೆಯುತ್ತೇವೆ. ಪ್ರತಾಪ್ ಸಿಂಹ ಜನಪ್ರತಿನಿಧಿ. ಮಹಿಷ ದ್ರಾವಿಡ ಮಹಾರಾಜ. ಮಹಿಷನನ್ನು ಆತ ಅಧ್ಯಯನ ಮಾಡಿಲ್ಲ. ಹಾಗಾಗಿ ಆತ ಮಹಿಷನನ್ನು ದೆವ್ವ ಎಂದು ಕರೆಯುತ್ತಾನೆ. ವೈದಿಕತೆಯ ಮತ್ತು ಪುರಾಣಗಳ ಆಧಾರದಲ್ಲಿ ದ್ರಾವಿಡ ದೊರೆ ಮಹಿಷನನ್ನು ತುಳಿಯಲು ಪ್ರಯತ್ನ ಮಾಡುತ್ತಾರೆ.
ಪ್ರತಾಪ್ ಸಿಂಹ ತನ್ನ ಅಧಿಕಾರ ಉಳಿಸಲು ಇಂತಹ ಕೀಳುಮಟ್ಟದ ಹೇಳಿಕೆ ನೀಡಲು ಆತನಿಗೆ ನೈತಿಕ ಹಕ್ಕಿಲ್ಲ.
ಮೈಸೂರಿನ ಸಂಸದ ಪ್ರತಾಪ್ ಸಿಂಹರವರು ಮಹಿಷನನ್ನು ದೆವ್ವ ಎಂದು ಕರೆದಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ಎಂದು “e media kannada” ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿಯವರನ್ನು ಕಾಪುವಿನಲ್ಲಿ ಪ್ರಶ್ನಿಸಿದಾಗ ಅವರು ಕೆಂಡಾಮಂಡಲರಾಗಿ ಮೇಲಿನಂತೆ ಉತ್ತರಿಸಿದ್ದಾರೆ.
