• Home  
  • ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಕಾಪುವಿನಲ್ಲಿ ಉಚಿತ ರಿಕ್ಷಾ ಸೇವೆ
- ಕರಾವಳಿ - ಪ್ರಯಾಣ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಕಾಪುವಿನಲ್ಲಿ ಉಚಿತ ರಿಕ್ಷಾ ಸೇವೆ

Share: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಕಾಪುವಿನಲ್ಲಿ ಉಚಿತ ರಿಕ್ಷಾ ಸೇವೆ ಉಡುಪಿ\ಕಾಪು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಇಂದು ಕಾಪುವಿನ ರಿಕ್ಷಾ ಚಾಲಕ ಚಂದ್ರ ಮಲ್ಲಾರುರವರು  ಹಮ್ಮಿಕೊಂಡ  “ಉಚಿತ ರಿಕ್ಷಾ ಪ್ರಯಾಣ”ಕ್ಕೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿ ಪ್ರಯಾಣಿಸಿದರು. ಚಂದ್ರ ಮಲ್ಲಾರುರವರು ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿಯವರ ಜನ್ಮದಿನದಂದು ಕಾಪು ಪೇಟೆ ವ್ಯಾಪ್ತಿಯ ೫ ಕಿಮೀಟರ್‌ ವರೆಗೆ ಬೆಳಿಗ್ಗೆ ೧೦ ಗಂಟೆಯಿಂದ […]

ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಕಾಪುವಿನಲ್ಲಿ ಉಚಿತ ರಿಕ್ಷಾ ಸೇವೆ

ಉಡುಪಿ\ಕಾಪು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಇಂದು ಕಾಪುವಿನ ರಿಕ್ಷಾ ಚಾಲಕ ಚಂದ್ರ ಮಲ್ಲಾರುರವರು  ಹಮ್ಮಿಕೊಂಡ  “ಉಚಿತ ರಿಕ್ಷಾ ಪ್ರಯಾಣ”ಕ್ಕೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿ ಪ್ರಯಾಣಿಸಿದರು.

ಚಂದ್ರ ಮಲ್ಲಾರುರವರು ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿಯವರ ಜನ್ಮದಿನದಂದು ಕಾಪು ಪೇಟೆ ವ್ಯಾಪ್ತಿಯ ೫ ಕಿಮೀಟರ್‌ ವರೆಗೆ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೭ರವರೆಗೆ ಉಚಿತ ಪ್ರಯಾಣ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ನವೀನ್ ಎಸ್.ಕೆ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.