• Home  
  • ಪ್ರಧಾನಿ ನರೇಂದ್ರ ಮೋದಿ ಏ. 14ರಂದು ಮಂಗಳೂರಿಗೆ
- ರಾಜಕೀಯ

ಪ್ರಧಾನಿ ನರೇಂದ್ರ ಮೋದಿ ಏ. 14ರಂದು ಮಂಗಳೂರಿಗೆ

Share: ಪ್ರಧಾನಿ ನರೇಂದ್ರ ಮೋದಿ ಏ. 14ರಂದು ಮಂಗಳೂರಿಗೆ (PM Nrendra Modi visit Mangaluru On April 14th ) (Udupi) ಉಡುಪಿ : ಪ್ರಧಾನಿ ನರೇಂದ್ರ ಮೋದಿ (PM Narendra Modi) ಏಪ್ರಿಲ್‌ ಹದಿನಾಲ್ಕರಂದು ಮಂಗಳೂರಿಗೆ  ಆಗಮಿಸುತ್ತಿದ್ದು, ಗೋಲ್ಡ್ ಫಿಂಚ್ ಮೈದಾನದಲ್ಲಿ ದ.ಕ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (Brijesh Chauta) ಮತ್ತು ಉಡುಪಿ – ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojary) ಪರ ಮತ ಯಾಚನೆ […]

ಪ್ರಧಾನಿ ನರೇಂದ್ರ ಮೋದಿ ಏ. 14ರಂದು ಮಂಗಳೂರಿಗೆ (PM Nrendra Modi visit Mangaluru On April 14th )

(Udupi) ಉಡುಪಿ : ಪ್ರಧಾನಿ ನರೇಂದ್ರ ಮೋದಿ (PM Narendra Modi) ಏಪ್ರಿಲ್‌ ಹದಿನಾಲ್ಕರಂದು ಮಂಗಳೂರಿಗೆ  ಆಗಮಿಸುತ್ತಿದ್ದು, ಗೋಲ್ಡ್ ಫಿಂಚ್ ಮೈದಾನದಲ್ಲಿ ದ.ಕ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (Brijesh Chauta) ಮತ್ತು ಉಡುಪಿ – ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojary) ಪರ ಮತ ಯಾಚನೆ ನಡೆಸಲಿದ್ದಾರೆ.

ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದು, ಉಭಯ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲು (MP NaliKumar kateelu) ಹೇಳಿದ್ದಾರೆ.

 ಉಡುಪಿ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.

 ಈ ಬಾರಿ ನಾಲ್ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಲು ಜನರು ನಿಶ್ಚಯ ಮಾಡಿದ್ದು, ಚುನಾವಣೆಗೂ ಮುನ್ನವೇ ಫಲಿತಾಂಶ ನಿಗದಿಯಾಗಿದೆ ಎಂದು ಹೇಳಿದರು.

 ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯ (CM Siddaramayya) ಕಳೆದ ಹತ್ತು ವರ್ಷಗಳಿಂದಲೂ ಮೋದಿ ಅಲೆ ಇಲ್ಲ ಎಂದು ಹೇಳುತ್ತಲೇ ಇದ್ದಾರೆ. ಆದರೆ ಮೋದಿ ಅಲೆ ವೃದ್ದಿಸುತ್ತಲೇ ಇದೆ. ಕಾಂಗ್ರೆಸ್ ನಲ್ಲಿ ಸರಿಯಾದ ಅಭ್ಯರ್ಥಿಗಳೇ  ಇಲ್ಲ. ಇದೇ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಯನ್ನು (Dhingaleshwara Swamiji) ನಿಲ್ಲಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಹೇಳಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.