ಐರೋಡಿ – ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಸಂಪನ್ನ
ಕೋಟ: ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲೆಬೆಟ್ಟು- ಐರೋಡಿ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ವಿಜೃಂಭಣೆಯಿAದ ಜರಗಿತು.
ವೇ. ಮೂ ಸೂರ್ಯನಾರಾಯಣ ಬಾಯರಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.
ಧಾರ್ಮಿಕ ವಿಧಿ ವಿಧಾನದ ಭಾಗವಾಗಿ ಶ್ರೀ ದೇವರಿಗೆ ಕಲಾಶಕ್ತಿ ಹೋಮ ಮತ್ತು ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ವಾರ್ಷಿಕ ಕೆಂಡಜಾತ್ರೆ ವಿಶೇಷವಾದ ಹರಕೆಯ ಹಣ್ಣುಗೊನೆ ಸೇವೆ, ಅನ್ನಸಂತರ್ಪಣೆ ಸಂಪನ್ನಗೊAಡಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಐರೋಡಿ ವಿಠಲ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಿವರಾಮ್ ಶ್ರೀಯಾನ್, ಪ್ರಧಾನ ಪಾತ್ರಿ ಮೊಕ್ತೇಸರ ಕರಿಯ ಮಡಿವಾಳ, ಉಪಾಧ್ಯಕ್ಷರಾದ ಶೇಖರ್ ಮಡಿವಾಳ, ಕಿರಣ್ ಮಡಿವಾಳ, ಶ್ರೀನಿವಾಸ ಕೆಪಿಟಿಸಿಎಲ್, ಶ್ರೀನಿವಾಸ ಪೂಜಾರಿ, ಜಗನಾಥ್ ಬಂಗೇರ, ನಟರಾಜ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.

