• Home  
  • ಫಲಿಮಾರು ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿಕೊಟ್ಟ   ಕಾಪು ತಹಶಿಲ್ದಾರ್ ಪ್ರತಿಭಾ ಆರ್, ಸಾರ್ವತ್ರಿಕ ಶ್ಲಾಘನೆ (Kaup Thahashildar dr̤ Prathibha for making Adhar Card at home for disabled boy of Palimaŗu Adve. Universal appreciation)
- Uncategorised

ಫಲಿಮಾರು ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿಕೊಟ್ಟ   ಕಾಪು ತಹಶಿಲ್ದಾರ್ ಪ್ರತಿಭಾ ಆರ್, ಸಾರ್ವತ್ರಿಕ ಶ್ಲಾಘನೆ (Kaup Thahashildar dr̤ Prathibha for making Adhar Card at home for disabled boy of Palimaŗu Adve. Universal appreciation)

Share: ಫಲಿಮಾರು ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿಕೊಟ್ಟ   ಕಾಪು ತಹಶಿಲ್ದಾರ್ ಪ್ರತಿಭಾ ಆರ್, ಸಾರ್ವತ್ರಿಕ ಶ್ಲಾಘನೆ (Palimaru) ಪಲಿಮಾರು: ಪಲಿಮಾರು ಗ್ರಾಮದ ಅಡ್ವೆ ಬಳಿ 14 ವರ್ಷದ ʼದಿವ್ಯಾಂಗ ಬಾಲಕʼ ಆರೋಗ್ಯ ಕೀರ್ತನ್ ಮನೆಗೆ ಆಧಾರ್ ಕಾರ್ಡ್ ಸಿಬ್ಬಂದಿಗಳೊಡನೆ ತಾವೇ ಸ್ವತಃ ತೆರಳಿ ಆಧಾರ್ ಕಾರ್ಡ್ ಮಾಡಿಸಲು ನೆರವಾಗಿ ಮಾನವೀಯತೆ ಮೆರೆದ ತಹಶಿಲ್ದಾರ್ ಪ್ರತಿಭಾ ಆರ್ ಬಗ್ಗೆ ಕಾಪು ತಾಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆರೋಗ್ಯ ಕೀರ್ತನ್’ ತಂದೆ ತಾಯಿಗಳಾದ ಗುರುಸ್ವಾಮಿ ಮತ್ತು ಮಮತಾರವರು […]

ಫಲಿಮಾರು ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿಕೊಟ್ಟ   ಕಾಪು ತಹಶಿಲ್ದಾರ್ ಪ್ರತಿಭಾ ಆರ್, ಸಾರ್ವತ್ರಿಕ ಶ್ಲಾಘನೆ

(Palimaru) ಪಲಿಮಾರು: ಪಲಿಮಾರು ಗ್ರಾಮದ ಅಡ್ವೆ ಬಳಿ 14 ವರ್ಷದ ʼದಿವ್ಯಾಂಗ ಬಾಲಕʼ ಆರೋಗ್ಯ ಕೀರ್ತನ್ ಮನೆಗೆ ಆಧಾರ್ ಕಾರ್ಡ್ ಸಿಬ್ಬಂದಿಗಳೊಡನೆ ತಾವೇ ಸ್ವತಃ ತೆರಳಿ ಆಧಾರ್ ಕಾರ್ಡ್ ಮಾಡಿಸಲು ನೆರವಾಗಿ ಮಾನವೀಯತೆ ಮೆರೆದ ತಹಶಿಲ್ದಾರ್ ಪ್ರತಿಭಾ ಆರ್ ಬಗ್ಗೆ ಕಾಪು ತಾಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಆರೋಗ್ಯ ಕೀರ್ತನ್’ ತಂದೆ ತಾಯಿಗಳಾದ ಗುರುಸ್ವಾಮಿ ಮತ್ತು ಮಮತಾರವರು ಮಾಧ್ಯಮದೊಂದಿಗೆ ಮಾತನಾಡಿ, ಕಳೆದ 5-6 ವರ್ಷಗಳಿಂದ ನಮ್ಮ ಮಗ ‘ಆರೋಗ್ಯ ಕೀರ್ತನ್’ ಗೆ ಆಧಾರ್ ಮಾಡಿಸಲು ಪ್ರಯತ್ನಿಸಿ ಸೋತಿದ್ದೆವು. ಎದ್ದು ಕೂಡಲೂ ಆಗದಂತಹ, ಸದಾ ಹಾಸಿಗೆಯಲ್ಲೇ ಮಲಗಿರುವ ಮಗನಿಗೆ ಅಂಗವಿಕಲ ಪ್ರಮಾಣ ಪತ್ರ ಮಾಡಿಸಲು ಹೋದಾಗ ಆಧಾರ್ ಕಾರ್ಡ್ ತನ್ನಿ ಅಂದ್ರು. ಎಷ್ಟು ಪ್ರಯತ್ನಿಸಿದರೂ ಮಾಡಿಸಲು ಆಗಿರಲಿಲ್ಲ. ಆಧಾರ್ ಕೇಂದ್ರಕ್ಕೆ ಮಗನನ್ನು ಕರೆದೊಯ್ಯಲು ಸಾಧ್ಯವಾಗದೆ ಆಧಾರ್  ಕಾರ್ಡ್ ಮಾಡಿಸಲಾಗಿರಲಿಲ್ಲ. ಆದರೆ ಇಂದು ತಹಶಿಲ್ದಾರ್ ಪ್ರತಿಭಾ ಮೇಡಂರವರು ಸ್ವತಃ ನಮ್ಮ ಮನೆಗೆ ಬಂದು ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದಾರೆ. ಅವರು ನಮ್ಮ ಮನೆಗೆ ಬಂದಿದ್ದು ಬಡವರ ಮನೆಗೆ ಭಾಗ್ಯ ಲಕ್ಷ್ಮಿ ಬಂದಂತಾಯಿತು. ಈ ಆಧಾರ್ ಕಾರ್ಡ್ ನಿಂದ ಮಗನಿಗೆ ಅಂಗವಿಕಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿಭಾ ಮೇಡಂರವರಿಗೆ ನಾವು ಸದಾ ಚಿರಋಣಿ ಎಂದು ಅಳುತ್ತಾ ಹೇಳಿದರು.

 ಪಲಿಮಾರಿನಲ್ಲಿ ಗ್ರಾಮ ಒನ್ ಸಂಸ್ಥೆ ನಡೆಸುತ್ತಿರುವ ಇಸ್ಮಾಯಿಲ್ ಫಲಿಮಾರುರವರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಇವರ ಕುಟುಂಬದ ಕಷ್ಟ ಕಂಡು ತಹಶೀಲ್ದಾರ್ ರವರ ಗಮನಕ್ಕೆ ತಂದಿದ್ದಾರೆ. ಈ ಕಟುಂಬಕ್ಕೆ ಸಹಾಯ ಮಾಡಲು ಆಧಾರ್ ಸಿಬ್ಬಂದಿಯನ್ನು ಕರೆತಂದು ಆಧಾರ್ ಕಾರ್ಡ್ ಮಾಡಿಸಲು ನೆರವಾಗಿದ್ದಾರೆ.

ಇಸ್ಮಾಯಿಲ್ ಪಲಿಮಾರು ಮಾತನಾಡಿ, ಕಳೆದ 5-6 ವರ್ಷಗಳಿಂದ ಈ ಕುಟುಂಬ ಆಧಾರ್‌ ಕಾರ್ಡ್ ಮಾಡಿಸಲು ಪ್ರಯತ್ನಿಸುತ್ತಿತ್ತು. ಇದನ್ನು ತಹಶಿಲ್ದಾರ್‌ ಡಾ. ಪ್ರತಿಭಾ ರವರ ಗಮನಕ್ಕೆ ತಂದು ಆಧಾರ್ ಸಿಬ್ಬಂದಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಧಾರ್ ಕಾರ್ಡ್ ಮಾಡಿಸಿದ್ದೇವೆ. ಅಂಗವಿಕಲ ಮಗುವಿಗೆ ನೆರವಾದ ಆತ್ಮತೃಪ್ತಿ ಉಂಟಾಗಿದೆ. ಎಂದರು.

 ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಮಾತನಾಡಿ, ಆಧಾರ್ ಕಾರ್ಡ್ ಮಾಡಿಸಿದ ಮೇಲೆ ಆ ಬಾಲಕನ ತಂದೆ ತಾಯಿಯ ಮುಖದ ನಗು ಕಂಡು ಆತ್ಮ ತೃಪ್ತಿ ಉಂಟಾಗಿದೆ. ಕಾಪು ತಾಲೂಕಿನಲ್ಲಿ ಈ ರೀತಿಯ ಹಾಸಿಗೆ ಹಿಡಿದ ಹಿರಿಯರು, ಅಂಗವಿಕಲ ವ್ಯಕ್ತಿಗಳಿಗೆಲ್ಲ ಇದೇ ರೀತಿ  ಮನೆಗೇ ತೆರಳಿ ಆಧಾರ್ ಕಾರ್ಡ್ ಮಾಡಿಕೊಡಲು ಯೋಜನೆ ಹಾಕಿಕೊಂಡಿದ್ದೇನೆ. ಯಾವ ವ್ಯಕ್ತಿಯೂ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಸೌಲಭ್ಯ ವಂಚಿತರಾಗಬಾರದು ಎಂಬುದು ನಮ್ಮ ಧ್ಯೇಯ. ಈ ಅಂಗವಿಕಲ ಬಾಲಕನಿಗೆ ಸರ್ಕಾರದ ಕಡೆಯಿಂದ ಬರಬಹುದಾದ ಸೌಲಭ್ಯಗಳನ್ನು ದೊರಕಿಸಲು ಕ್ರಮ ಕೈಗೊಳ್ಳುತ್ತೇನೆ.

 ಆಧಾರ್ ಕಾರ್ಡ್ ಆಪರೇಟರ್ ಸಂಧ್ಯಾರವರು ಬಹಳ ತಾಳ್ಮೆಯಿಂದ ವಿಶೇಷ ಚೇತನ ಮಗುವಿನ ಆಧಾರ್ ಕಾರ್ಡ್ ಮಾಡಲು ಸಹಕರಿಸಿದರು. ಅವರೊಂದಿಗೆ ಪೂರ್ಣಿಮಾ ಜೊತೆಗಿದ್ದರು.

 ಪೆಟ್ರೋಲ್ ಬಂಕ್ ಒಂದರಲ್ಲಿ ನೈಟ್ ವಾಚ್ ಮನ್ ಕೆಲಸ ಮಾಡುವ ಗುರುಸ್ವಾಮಿ, LLB ಓದಿದ್ದರೂ,  ಗೃಹಿಣಿಯಾಗಿ ಮಗನಿಗಾಗಿ ಬದುಕು ಮೀಸಲಿಟ್ಟಿರುವ ಮಮತಾ ದಂಪತಿಗಳಿಗೆ ಕ್ರಿಷ್ಮಾ ಎಂಬ ಒಂಭತ್ತು ವರ್ಷ ಮಗಳಿದ್ದಾಳೆ.

  3-4 ವರ್ಷ ಮಗುವಿನ ದೇಹದಾರ್ಢ್ಯ ಇರುವ ಆರೋಗ್ಯ ಕೀರ್ತನ್ ಗೆ 14 ವರ್ಷ ಎಂದರೆ ನಂಬಲು ಸಾಧ್ಯವಿಲ್ಲ. ಕೈ ಕಾಲು ಸ್ವಾಧೀನವಿಲ್ಲ. ತಾಯಿಯೇ ಎಲ್ಲ ಸೇವೆ ಮಾಡಬೇಕಾದ ಪರಿಸ್ಥಿತಿ ಕರುಳು ಕಿತ್ತು ಬರುವಂತಿತ್ತು ಎಂದೂ ಕಾಪು ತಹಶೀಲ್ದಾರ್‌ ಡಾ. ಪ್ರತಿಭಾರವರು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.