• Home  
  • ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ( A Two – days Mssive Job fair under the Sponsorship of MRG Group is underway at Manipura, Kunthala Nagara
- ವ್ಯವಹಾರ - ಸಂಘ, ಸಂಸ್ಥೆಗಳು

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ( A Two – days Mssive Job fair under the Sponsorship of MRG Group is underway at Manipura, Kunthala Nagara

Share: ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ. ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ ಮುಂದೆ 50 ಸಾವಿರ ಉದ್ಯೋಗಾವಕಾಶ : ಬಂಜಾರಾ ಡಾ. ಕೆ. ಪ್ರಕಾಶ್  ಶೆಟ್ಟಿ ಮಣಿಪುರ, ಕುಂತಳನಗರ, ನ.16: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂತಳನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ಆಯೋಜನೆಯಲ್ಲಿ ಸತತ 3ನೇ ಬಾರಿಗೆ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಎಂಆರ್‌ಜಿ. […]

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ.

ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ ಮುಂದೆ 50 ಸಾವಿರ ಉದ್ಯೋಗಾವಕಾಶ : ಬಂಜಾರಾ ಡಾ. ಕೆ. ಪ್ರಕಾಶ್  ಶೆಟ್ಟಿ

ಮಣಿಪುರ, ಕುಂತಳನಗರ, ನ.16: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂತಳನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ಆಯೋಜನೆಯಲ್ಲಿ ಸತತ 3ನೇ ಬಾರಿಗೆ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಎಂಆರ್‌ಜಿ. ಗ್ರೂಪ್ ಮುಖ್ಯಸ್ಥ ಬಂಜಾರಾ ಡಾ. ಕೆ. ಪ್ರಕಾಶ್  ಶೆಟ್ಟಿ ಉದ್ಘಾಟಿಸಿದರು.

ಅವರು ಈ ಸಂದರ್ಭ ಮಾತನಾಡಿ, ಉದ್ಯೋಗಾರ್ಥಿಗಳು ಉದ್ಯೋಗ ಸಿಕ್ಕಿಲ್ಲ ಎಂದು ಬೇಸರಿಸದೆ ತಮ್ಮ ಪ್ರಯತ್ನ ಮುಂದುವರಿಸಿ. ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ ಮುಂದೆ 50 ಸಾವಿರ ಉದ್ಯೋಗಾವಕಾಶ ಇದೆ. 3ನೇ ಬಾರಿಯ ಉದ್ಯೋಗ ಮೇಳದಲ್ಲಿ ಹೆಚ್ಚು ಕಂಪೆನಿಗಳು ಮತ್ತು ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಉದ್ಯೋಗ ಮೇಳ ಆಯೋಜಿಸಿದ್ದಕ್ಕೆ ಸಾರ್ಥಕವಾಗಿದೆ ಎಂದರು.

 ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಮಾತನಾಡಿ, ಖಾಸಗಿ ಸಂಸ್ಥೆಗಳು ಉದ್ಯೋಗ ಮೇಳ ಆಯೋಜನೆ ಮಾಡಿ, ನಿರುದ್ಯೋಗಕ್ಕೆ ಸವಾಲು ಒಡ್ಡಿರುವುದು ಅತ್ಯಂತ ಸಂತಸದ ಸಂಗತಿ. ಇನ್ನೂ ಹತ್ತು ಹಲವು ಸಂಸ್ಥೆಗಳು ಉದ್ಯೋಗ ಮೇಳ ಆಯೋಜನೆ ಮಾಡಬೇಕು.

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವಿವಿಧ ದೊಡ್ಡ ಕಂಪೆನಿಗಳನ್ನು ಗ್ರಾಮೀಣ ಭಾಗಕ್ಕೆ ಕರೆಸಿ ಜಿಲ್ಲೆಯ ಉದ್ಯೋಗ ಆಕಾಂಕ್ಷಿಗಳಿಗಾಗಿ ನಡೆಸುತ್ತಿರುವ ಉದ್ಯೋಗ ಮೇಳ  ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

 ಉಡುಪಿ – ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರಕಾರಿ ಉದ್ಯೋಗ ಕೇವಲ ಒಂದು ಪ್ರತಿಷತ ಮಾತ್ರಾ ಲಭ್ಯವಿದೆ. ಉಳಿದ 99 % ಪ್ರತಿಷತ ಉದ್ಯೋಗವನ್ನು ಖಾಸಗಿ ಸಂಸ್ಥೆಗಳೇ ನೀಡ ಬೇಕಿದೆ. ಸರಕಾರಿ ಉದ್ಯೋಗಕ್ಕೆ ಆಸೆ ಪಡದೆ ಸಿಕ್ಕ ಉದ್ಯೋಗದಲ್ಲಿ ಸಂತಸ ಪಡಿ ಎಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಿರುದ್ಯೋಗ ಮುಕ್ತವಾಗಿಸುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಪರಿಶ್ರಮ ಆದರ್ಶಪ್ರಾಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು.

ಅವರು ಮಾತನಾಡಿ, ಈಗಾಗಲೇ ಎರಡುಬಾರಿ ಉದ್ಯೋಗಮೇಳ ಆಯೋಜಿದ್ದು, 1500 ಮಂದಿ  ಉದ್ಯೋಗ ಪಡೆದಿದ್ದಾರೆ. ಈ ಬಾರಿ ಆನ್‌ಲೈನ್‌ನಲ್ಲಿ 1900ರಷ್ಟು ಆಕಾಂಕ್ಷಿಗಳು ನೋಂದಾಯಿಸಿದ್ದು, 2500ಕ್ಕೂ ಅಧಿಕ ಆಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 2000ಕ್ಕೂ ಅಧಿಕ ಉದ್ಯೋಗವಕಾಶ ಇದೆ ಎಂದೂ ಅಶೋಕ್‌ ಶೆಟ್ಟಿ ಹೇಳಿದರು.

 ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್. ಬಿ. ಶೆಟ್ಟಿ, ಗಣ್ಯರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಂಗ್ರೆಸ್‌ ನಾಯಕರಾದ ಮಿಥುನ್ ರೈ, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಉಧ್ಯಮಿಗಳಾದ ಮನೋಹರ್ ಎಸ್. ಶೆಟ್ಟಿ, ರಾಘು ಪೂಜಾರಿ ಕಲ್ಮಂಜೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶರತ್ ಆಳ್ವ ಸುಬ್ರಹ್ಮಣ್ಯ, ಚಾರಿಟೆಬಲ್ ಟ್ರಸ್ಟ್‌ನ ಹೇಮಂತ್ ಶೆಟ್ಟಿ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಟ್ರಸ್ಟಿ, ಪ್ರೋಗ್ರಾಂ ಕೋಆರ್ಡಿನೇಟರ್ ಪದ್ಮನಾಭ ಹೆಗ್ಡೆ, ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ಪ್ರೋಗ್ರಾಮ್ ಡೈರೆಕ್ಟರ್ ಪ್ರೊ. ದಿವ್ಯಾ ರಾಣಿ ಪ್ರದೀಪ್, ಇಂಟರ್ವ್ಯೂ ಸಮಿತಿಯ ಛೇರ್ಮನ್ ಗುರುಪ್ರಶಾಂತ್ ಭಟ್ ಕೆ., ವೇದಿಕೆಯಲ್ಲಿದ್ದರು.

 ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ, ಪ್ರೋಗ್ರಾಂ ಕೋಆರ್ಡಿನೇಟರ್ ವಿಜಿತ್ ಶೆಟ್ಟಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.