• Home  
  • ಫೆ.10ಕ್ಕೆ ದಿ.ಕಾಳಿಂಗ ನಾವಡರಿಗೆ ಮರಣೋತ್ತರ ಅಭಿಮತ ಕೀರ್ತಿ ಕಲಶ ಗೌರವ (Postmous Apriciation ‘Abhimatha Keerthi Kalash’ honored to Late Kalinga Navada)
- ಕರಾವಳಿ

ಫೆ.10ಕ್ಕೆ ದಿ.ಕಾಳಿಂಗ ನಾವಡರಿಗೆ ಮರಣೋತ್ತರ ಅಭಿಮತ ಕೀರ್ತಿ ಕಲಶ ಗೌರವ (Postmous Apriciation ‘Abhimatha Keerthi Kalash’ honored to Late Kalinga Navada)

Share: ಫೆ.10ಕ್ಕೆ ದಿ.ಕಾಳಿಂಗ ನಾವಡರಿಗೆ ಮರಣೋತ್ತರ ಅಭಿಮತ ಕೀರ್ತಿ ಕಲಶ ಗೌರವ  (Kota) ಕೋಟ: ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು (Janaseva Trust Moodu Giliyaru) ಆಶ್ರಯದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಕೊಡಮಾಡುವ ಕೀರ್ತಿ ಕಲಶ ಪುರಸ್ಕಾರಕ್ಕೆ ಈ ಬಾರಿ ಖ್ಯಾತ ಭಾಗವತ ದಿ. ಕಾಳಿಂಗ ನಾವಡರನ್ನು ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ. ಫೆ. 10ರಂದು ಸಂಜೆ 6-30ಕ್ಕೆ ಮೂಡು ಗಿಳಿಯಾರಿನ ಅಲ್ಸೆಕೆರೆ ಮಹಾಲಿಂಗೇಶ್ವರ ದೇಗುಲದ ಸಮೀಪ ನಡೆಯುವ ಅಭಿಮತ ಸಂಭ್ರಮ ವೇದಿಕೆಯಲ್ಲಿ ನಾವಡರ […]

ಫೆ.10ಕ್ಕೆ ದಿ.ಕಾಳಿಂಗ ನಾವಡರಿಗೆ ಮರಣೋತ್ತರ ಅಭಿಮತ ಕೀರ್ತಿ ಕಲಶ ಗೌರವ

 (Kota) ಕೋಟ: ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು (Janaseva Trust Moodu Giliyaru) ಆಶ್ರಯದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಕೊಡಮಾಡುವ ಕೀರ್ತಿ ಕಲಶ ಪುರಸ್ಕಾರಕ್ಕೆ ಈ ಬಾರಿ ಖ್ಯಾತ ಭಾಗವತ ದಿ. ಕಾಳಿಂಗ ನಾವಡರನ್ನು ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ.

ಫೆ. 10ರಂದು ಸಂಜೆ 6-30ಕ್ಕೆ ಮೂಡು ಗಿಳಿಯಾರಿನ ಅಲ್ಸೆಕೆರೆ ಮಹಾಲಿಂಗೇಶ್ವರ ದೇಗುಲದ ಸಮೀಪ ನಡೆಯುವ ಅಭಿಮತ ಸಂಭ್ರಮ ವೇದಿಕೆಯಲ್ಲಿ ನಾವಡರ ಕುಟುಂಬ ಸದಸ್ಯರಿಗೆ ಗಣ್ಯರು ಈ ಪ್ರಶಸ್ತಿ ಹಸ್ತಾಂತರಿಸಲಿದ್ದಾರೆ.

 ಇದೇ ಸಂದರ್ಭ ಕೃಷಿ ಕ್ಷೇತ್ರದ ಸಾಧಕ ಗಿಳಿಯಾರು ಭರತ್ ಕುಮಾರ್ ಶೆಟ್ಟಿ ಹಾಗೂ ಉಚಿತ ಆ್ಯಂಬುಲೆನ್ಸ್ ಸೇವೆಯ ಮೂಲಕ ಗ್ರಾಮಾಂತರ ಭಾಗದ ಸಂಜೀವಿನಿ ಎನಿಸಿಕೊಂಡ ಸಾಬ್ರಕಟ್ಟೆಯ  ಜನನಿ ಯುವ ಕನ್ನಡ  ಸಂಘಟನೆ, ಕ್ರೀಡಾ ಕ್ಷೇತ್ರದ ಸಾಧಕ, ಕಬಡ್ಡಿಪಟು ರಾಜೇಂದ್ರ ಎಸ್. ಸುವರ್ಣ ಅವರಿಗೆ ಯಶೋಗಾಥೆ ಗೌರವವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.