• Home  
  •   ಫೆ 13: ಬಂಟಕಲ್‌ ಶ್ರೀ ಮಧ್ವ  ವಾದಿರಾಜ ತಾಂತ್ರಿಕ  ಕಾಲೇಜಿನಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ (Inauguration of MBA Program at Shri Madhwa Vadiraja Institute Bantakal)  
- ಶಾಲಾ ಕಾಲೇಜು

  ಫೆ 13: ಬಂಟಕಲ್‌ ಶ್ರೀ ಮಧ್ವ  ವಾದಿರಾಜ ತಾಂತ್ರಿಕ  ಕಾಲೇಜಿನಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ (Inauguration of MBA Program at Shri Madhwa Vadiraja Institute Bantakal)  

Share: ಫೆ 13: ಬಂಟಕಲ್‌ ಶ್ರೀ ಮಧ್ವ  ವಾದಿರಾಜ ತಾಂತ್ರಿಕ  ಕಾಲೇಜಿನಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಬಹುನಿರೀಕ್ಷೆಯ ಹೊಸ ಎಂಬಿಎ ಕೋರ್ಸ್‌ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ 13ರಂದು  ಬೆಳಿಗ್ಗೆ 10.೦೦ ಗಂಟೆಗೆ ಉದ್ಘಾಟನೆ ನೆರವೇರಲಿದೆ.    ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ  ಅಧ್ಯಕ್ಷರಾದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.   ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ  ನಿರ್ದೇಶಕರಾದ […]

ಫೆ 13: ಬಂಟಕಲ್‌ ಶ್ರೀ ಮಧ್ವ  ವಾದಿರಾಜ ತಾಂತ್ರಿಕ  ಕಾಲೇಜಿನಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ

ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಬಹುನಿರೀಕ್ಷೆಯ ಹೊಸ ಎಂಬಿಎ ಕೋರ್ಸ್‌ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ 13ರಂದು  ಬೆಳಿಗ್ಗೆ 10.೦೦ ಗಂಟೆಗೆ ಉದ್ಘಾಟನೆ ನೆರವೇರಲಿದೆ.

   ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ  ಅಧ್ಯಕ್ಷರಾದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.

  ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ  ನಿರ್ದೇಶಕರಾದ ಡಾ. ಗುರುರಾಜ್ ಎಚ್ ಕಿದಿಯೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.   

 ಶ್ರೀ ಮಧ್ವ ವಾದಿರಾಜ ತಾಂತ್ರಿಕ  ಮಹಾ ವಿದ್ಯಾಲಯದಲ್ಲಿ ಆರಂಭವಾದ ಎಂಬಿಎ ಕೋರ್ಸ್ ಬೆಳಗಾವಿಯ ಪ್ರತಿಷ್ಠಿತ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (VTU) ಅನುಮೋದನೆ ಪಡೆದಿದ್ದು, ಡ್ಯುಯಲ್ ಸ್ಪೆಷಲೈಸೇಶನ್ ಆಯ್ಕೆಯನ್ನು  ಹೊಂದಿದೆ.

 ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಹಣಕಾಸು, ಮಾನವ ಸಂಪನ್ಮೂಲ ಮತ್ತು ಮಾರ್ಕೆಟಿಂಗ್ ಎಂಬ ಮೂರು ವಿಷಯಗಳಲ್ಲಿ ಎರಡನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ವೃತ್ತಿ ಜೀವನದ ಆಕಾಂಕ್ಷೆ ಮತ್ತು ಬೇಡಿಕೆಗೆ ತಕ್ಕಂತೆ ಹೊಂದಿಸಲು ಅನುವುಮಾಡಿಕೊಡುತ್ತದೆ.

 ಹೊಸದಾಗಿ ಆರಂಭಗೊಂಡ ಎಂಬಿಎ ಕೋರ್ಸಿನಲ್ಲಿ  ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅನುಭವವನ್ನು ಪಡೆದ ನುರಿತ ಅಧ್ಯಾಪಕರನ್ನು ಹೊಂದಿದ್ದು, ಇದು ವಿದ್ಯಾರ್ಥಿಗಳನ್ನು ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಮುನ್ನಡೆಯಲು ಅಗತ್ಯವಾದ ಕೌಶಲ್ಯ, ಜ್ಞಾನ ಮತ್ತು ಮನಸ್ಥಿತಿಯನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಎಂಬಿಎ ಕೋರ್ಸ್‌ನ ನಿರ್ದೇಶಕರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ವ್ಯಾಪಾರ ಕ್ಷೇತ್ರದ ಪ್ರಮುಖರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಎಂಬಿಎ ಕೋರ್ಸ್ ಮತ್ತು ಪ್ರವೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  https://sode-edu.in/ ವೆಬ್‌ಸೈಟನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.