• Home  
  • ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಲ್ಲಿ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ ಪ್ರಮಾಣಪತ್ರ ವಿತರಣೆ (Udupi Grameena Bantara Sangha; Distribution of free computer literecy training certificate)
- ಕರಾವಳಿ - ವಿಡಿಯೋ - ಶಾಲಾ ಕಾಲೇಜು

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಲ್ಲಿ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ ಪ್ರಮಾಣಪತ್ರ ವಿತರಣೆ (Udupi Grameena Bantara Sangha; Distribution of free computer literecy training certificate)

Share: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಲ್ಲಿ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ ಪ್ರಮಾಣಪತ್ರ ವಿತರಣೆ (Udupi)ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಸ್ಟಿಕ್ ಕಂಪನಿ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕುಂತಳನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್‌ನಲ್ಲಿ (Kuntala Nagara Skill Developement centre) ನಡೆಯುತ್ತಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ 13ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಹಾಗೂ 14ನೇ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮವನ್ನು ಕಾಪು […]

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಲ್ಲಿ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ ಪ್ರಮಾಣಪತ್ರ ವಿತರಣೆ

(Udupi)ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಸ್ಟಿಕ್ ಕಂಪನಿ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕುಂತಳನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್‌ನಲ್ಲಿ (Kuntala Nagara Skill Developement centre) ನಡೆಯುತ್ತಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ 13ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಹಾಗೂ 14ನೇ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮವನ್ನು ಕಾಪು ತಹಶಿಲ್ದಾರ್‌ ಶ್ರೀಮತಿ ಡಾ. ಪ್ರತಿಭಾ ಆರ್ (Kaup Tahashildar DR Prathibha R) ಉದ್ಘಾಟಿಸಿದರು.

ಈ ಸಂದರ್ಭ ತಹಶೀಲ್ದಾರ್‌ ಡಾ. ಪ್ರತಿಭಾ ಮಾತನಾಡಿ, ಇಂದು ಎಲ್ಲಾ ಕ್ಷೇತ್ರದಲ್ಲೂ ಕಂಪ್ಯೂಟರ್ ಪರಿಜ್ಞಾನದ ಅತ್ಯಗತ್ಯವಿದ್ದು ಗ್ರಾಮೀಣ ಬಂಟರ ಸಂಘವು ಅದನ್ನು ಇಲ್ಲಿ ಉಚಿತವಾಗಿ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ. ವೃತ್ತಿಜೀವನದಲ್ಲಿ ಯಶಸ್ಸುಗಳಿಸಲು ಜ್ಞಾನ ಮತ್ತು  ಕೌಶಲ್ಯದೊಂದಿಗೆ ಪ್ರಾಮಾಣಿಕತೆಯೂ ಅತೀ ಮುಖ್ಯವಾಗಿದೆ ಎಂದರು..

  ಮುಖ್ಯ ಅತಿಥಿಯಾಗಿದ್ದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ (DR Deviprasad Shetty) ಮಾತನಾಡಿ, ಜೀವನದಲ್ಲಿ ಯಶಸ್ಸು ಪಡೆಯಲು ಗುರಿ ಮತ್ತು ಅದನ್ನು ಸಾಸುವ ಛಲ ಇರಬೇಕು. ಜ್ಞಾನ ಮತ್ತು ಬುದ್ದಿವಂತಿಕೆ ಇದ್ದರೆ ಏನನ್ನು ಬೇಕಾದರೂ ಸಾಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ (Ashok Kumar Shetty) ಪ್ರಾಸ್ತಾವಿಕವಾಗಿ ಮಾತನಾಡಿ, ಈವರೆಗೆ ಶಿಬಿರದಲ್ಲಿ 260 ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್ ತರಬೇತಿ ಪಡೆದುಕೊಂಡಿದ್ದಾರೆ. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ 1800 ವಿದ್ಯಾರ್ಥಿಗಳು, 300 ಮಹಿಳೆಯರು ಭಾಗವಹಿಸಿದ್ದಾರೆ. ಎರಡು ಬಾರಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರು.

ಶಿಬಿರದ ಪ್ರಾಯೋಜಿಕ ಸಂಸ್ಥೆಯ ಆಲ್ ಕಾರ್ಗೋ ಲಾಜಸ್ಟಿಕ್ ಕಂಪನಿಯ ಸಿಎಸ್‌ಆರ್ ಎಕ್ಸಿಕ್ಯೂಟೀವ್ ಸವಿಸ್ತಾರ್ ಆಳ್ವ (Savisthar Alva), ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್ ಬಿ ಶೆಟ್ಟಿ, ಟ್ರಸ್ಟಿಗಳಾದ ದಯಾನಂದ ಶೆಟ್ಟಿ ಕಲ್ಮಂಜೆ, ಸತೀಶ್ ಶೆಟ್ಟಿ ಮಣಿಪುರ, ರಮೇಶ್ ಶೆಟ್ಟಿ ನಿಂಜೂರು, ಕಂಪ್ಯೂಟರ್ ತರಬೇತುದಾರ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಉಡುಪಿ ಗ್ರಾಮೀಣ ಬಂಟರ ಸಂಘದ ಕೋಶಾಧಿಕಾರಿ ಹಾಗೂ ಕಾರ್ಯಕ್ರಮ ನಿದೇರ್ಶಕ ವಿಜಿತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮೀಣ ಬಂಟರ ಸಂಘದ ಕೋಶಾಧಿಕಾರಿ ರಂಜನಿ ವಂದಿಸಿದರು

Leave a comment

Your email address will not be published. Required fields are marked *

eMedia Kannada  @2025. All Rights Reserved.