• Home  
  •   ಫೆ18. ಭಾನುವಾರ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ- ಹೆಜಮಾಡಿ ಶಾಖೆ ಉದ್ಘಾಟನೆ :  (Feb 18th Inaguration of Padubidri Sahakari society’s Hejamady Branch)
- social service

  ಫೆ18. ಭಾನುವಾರ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ- ಹೆಜಮಾಡಿ ಶಾಖೆ ಉದ್ಘಾಟನೆ :  (Feb 18th Inaguration of Padubidri Sahakari society’s Hejamady Branch)

Share:   ಫೆ18. ಭಾನುವಾರ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ– ಹೆಜಮಾಡಿ ಶಾಖೆ ಉದ್ಘಾಟನೆ   (Padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ನೂತನ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 18 ಭಾನುವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ.   ಬ್ಯಾಂಕಿನ ಅಧ್ಯಕ್ಷ ವೈ ಸುಧೀರ್ ಕುಮಾರ್ (Padubidri Sahakari society’s President Y Sudheer Kumar) ಈ ಬಗ್ಗೆ ಮಾಹಿತಿ ನೀಡಿದರು.   ಬ್ಯಾಂಕಿಂಗ್ ಕಟ್ಟಡ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ […]

  ಫೆ18. ಭಾನುವಾರ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ– ಹೆಜಮಾಡಿ ಶಾಖೆ ಉದ್ಘಾಟನೆ  

(Padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ನೂತನ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 18 ಭಾನುವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ.

  ಬ್ಯಾಂಕಿನ ಅಧ್ಯಕ್ಷ ವೈ ಸುಧೀರ್ ಕುಮಾರ್ (Padubidri Sahakari society’s President Y Sudheer Kumar) ಈ ಬಗ್ಗೆ ಮಾಹಿತಿ ನೀಡಿದರು.

  ಬ್ಯಾಂಕಿಂಗ್ ಕಟ್ಟಡ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ನೆರೆವೇರಿಸಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದಾರೆ.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ ಸುವರ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ. ಬೆಂಗಳೂರು ಇದರ ನಿರ್ದೇಶಕರಾದ ಬಿ ಜಯಕರ ಶೆಟ್ಟಿ ಇಂದ್ರಾಳಿ, ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು.

 ಈ ಸಂದರ್ಭ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀಮತಿ ನಿಶ್ಮಿತಾ ಪಿ.ಎಚ್ (GM SMT Nishmitha PH) , ಬ್ಯಾಂಕಿನ ಉಪಾಧ್ಯಕ್ಷ  ಗುರುರಾಜ್ ಪೂಜಾರಿ(Gururaj Poojary),  ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ  ಬಾಲಗೋಪಾಲ್ ಬಲ್ಲಾಳ್, ನಿರ್ದೇಶಕರುಗಳಾದ ಕೆ ರಸೂಲ್ ವೈ.ಜಿ, ಶ್ರೀ ಗಿರೀಶ್ ಪಲಿಮಾರ್, ಶಿವರಾಮ ಎನ್. ಶೆಟ್ಟ, ರಾಜಾರಾಮ್ ರಾವ್,  ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ., ಮಾಧವ ಆಚಾರ್ಯ,  ಸ್ಪ್ಯಾನಿ ಕ್ವಾಡ್ರಸ್,  ಶ್ರೀಮತಿ ಸುಚರಿತ ಎಲ್. ಅಮೀನ್,  ಶ್ರೀಮತಿ ಕುಸುಮಾ ಎಮ್. ಕರ್ಕೇರ,  ಶ್ರೀಮತಿ ಕಾಂಚನ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.