ಬಂಟಕಲ್ಲು: ಶ್ರೀ ದುರ್ಗಾಪರಮೇಶ್ವರೀ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ
ಸಮವಸ್ತ್ರ ನೀಡಿದ ದಾನಿ ರಂಜಿತ್ ಪ್ರಕಾಶ್ ಬರ್ಬೋಜ
(Bantakal) ಬಂಟಕಲ್: ಬಂಟಕಲ್ : ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಾನಿ ರಂಜಿತ್ ಪ್ರಕಾಶ್ ಬರ್ಬೋಜ ಇಸ್ರೇಲ್ ರವರು ನೀಡುವ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಶಾಲಾ ಸಂಚಾಲಕರಾದ ರಾಮದಾಸ ಪ್ರಭು ರವರ ಅಧ್ಯಕ್ಷತೆಯಲ್ಲಿ ಜರಗಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಅಭಿಮಾನಿ ರಂಜೀತ್ ರವರು ತಮ್ಮ ಲಾಭದ ಸ್ವಲ್ಪ ಅಂಶವನ್ನು ಶಾಲೆ ಅಥವಾ ಸಮಾಜಕ್ಕೆ ನೀಡುವುದರ ಮೂಲಕ ತಮ್ಮ ಉದಾರ ಮನೋಭಾವನೆಯನ್ನು ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯಾವಾದುದು ಎಂದರು.
ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಜಯರಾಮ ಪ್ರಭುರವರು ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿ ಮಾತನಾಡಿ, ರಂಜಿತ್ ಪ್ರಕಾಶ್ ಬರ್ಬೋಜಾರವರು ದೂರದ ಇಸ್ರೇಲ್ ನಲ್ಲಿದ್ದರೂ ನಮ್ಮ ಊರ ಶಾಲೆಯ ಅಭಿಮಾನದಿಂದ ಶಾಲಾ ಮಕ್ಕಳಿಗೆ ಹಲವು ವರ್ಷಗಳಿಂದ ಸಮ ವಸ್ತ್ರ ನೀಡುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಮುಖ್ಯ ಅತಿಥಿ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಆರ್ ಪಾಟ್ಕರ್ ರವರು ರಂಜಿತ್ ಪ್ರಕಾಶ್ ಬರ್ಬೋಜರ್ ಅವರು ಶಾಲೆ, ಆರೋಗ್ಯ ಹಾಗೂ ಇತರ ಸಾಮಾಜಿಕ ಕಾರ್ಯಗಳಿಗೆ ನೀಡುತ್ತಿರುವ ಸಹಾಯ, ಸಹಕಾರವನ್ನು ತಿಳಿಸಿ, ಅವರಿಗೆ ಕೖತಜ್ಞತೆಯನ್ನು ಸಲ್ಲಿಸಿ ದರು.
ಶಾಲೆಯ 65 ವಿದ್ಯಾರ್ಥಿಗಳಿಗೆ 74 ಜೊತೆ ಸಮವಸ್ತ್ರ ವಿತರಿಸಲಾಯಿತು. ಶಾಲಾ ಶತಮಾನೋತ್ಸವ ಸಮಿತಿ ಕೊಶಾಧಿಕಾರಿ ವಿಶ್ವನಾಥ ಬಾಂದೇಲ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಗೀತ ಪಾಟ್ಕರ್ ಸ್ವಾಗತಿಸಿದರು. ಶಿಕ್ಷಕಿ ವಿನುತಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ರೇಷ್ಮಾ ವಂದಿಸಿದರು. ಶಿಕ್ಷಕಿಯರಾದ ಸುಮತಿ, ಶ್ವೇತ ಸಹಕರಿಸಿದರು.

