ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸದಸ್ಯರಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ
ಶ್ರೀ ಬಬ್ಬುಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ರಸ್ತೆ, ಅಂಬೇಡ್ಕರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ
(Paniyuru) ಪಣಿಯೂರು : ಭಗವಾನ್ ಶ್ರೀ ಬಬ್ಬುಸ್ವಾಮಿ ದೇವಸ್ಥಾನ ಪಣಿಯೂರು, ಬಬ್ಬುಸ್ವಾಮಿ ಕ್ರಿಕೆಟರ್ಸ್ ಪಣಿಯೂರು, ಮತ್ತು ಪುರುಷ ಮತ್ತು ಮಹಿಳಾ ಸದಸ್ಯರಿಂದ ಭಾನುವಾರ ಬೆಳಿಗ್ಗೆ ದೈವಸ್ಥಾನದ ಪರಿಸರದಲ್ಲಿ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.
ಶ್ರೀ ಬಬ್ಬುಸ್ವಾಮಿ ದೇವಸ್ಥಾನ ಪಣಿಯೂರು, ಗಾಂಧಿ ಸರ್ಕಲ್ ರಸ್ತೆ, ಅಂಬೇಡ್ಕರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಗುರಿಕಾರ ಶಂಕರ ಬೆಳಪು, ಪ್ರಧಾನ ಅರ್ಚಕರಾದ ಬಾಲಕೃಷ್ಣ ಪಣಿಯೂರು, ವಾಸು ಕೆ ಪಣಿಯೂರು, ನಾರಾಯಣ ಎನ್, ಮಹಿಳಾ ಮಂಡಳಿಯ ಸದಸ್ಯರು, ಯುವಕ, ಯುವತಿಯರು, ಹಿರಿಯರು ಉಪಸ್ಥಿತರಿದ್ದರು.

