ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಐಇಇಇ ದಿನಾಚರಣೆ
(Bantakal) ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಘಟಕದ ವತಿಯಿಂದ ವಿಶ್ವ ಐಇಇಇ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಇಲ್ಲಿನ ಕೃತಕ ಬುದ್ದಿ ಮತ್ತೆ ವಿಭಾಗದ ಮುಖ್ಯಸ್ಥರಾದ ಡಾ. ವೇಣುಗೊಪಾಲ ಪಿ ಎಸ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು “ಐಇಇಇ ಸದಸ್ಯತ್ವದ ಪ್ರಯೋಜನಗಳು” ಎಂಬ ವಿಷಯದ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಐಇಇಇ ಘಟಕವು ಒದಗಿಸುವ ಜಾಗತಿಕ ಮಾನ್ಯತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ವಿಶ್ವದಾದ್ಯಂತ ವೃತ್ತಿಪರರು ಮತ್ತು ಸಂಶೋಧಕರೊಂದಿಗೆ ಐಇಇಇ ಸದಸ್ಯರನ್ನು ಸಂಪರ್ಕಿಸುವ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ವಿವಿಧ ನೆಟ್‌ವರ್ಕಿಂಗ್ ಅವಕಾಶಗಳ ಬಗ್ಗೆ ಚರ್ಚಿಸಿದರು. ಐಇಇಇ ಘಟಕದ ವತಿಯಿಂದ ಐಇಇಇ ಸದಸ್ಯರಿಗೆ ದೊರೆಯ ಬಹುದಾದ ವಿದ್ಯಾರ್ಥಿ ವೇತನಗಳು, ಅನುದಾನಗಳು ಮತ್ತು ಉಚಿತ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ ವಿದ್ಯಾರ್ಥಿಗಳು ಐಇಇಇ ಘಟಕವು ಒದಗಿಸುವ ಮಾರ್ಗದರ್ಶನ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಲು ಮತ್ತು ಐಇಇಇ ಘಟಕದ ಸದಸ್ಯರಾಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಸಂಸ್ಥೆಯ ಐಇಇಇ ಘಟಕದ ಸಂಯೋಜಕರಾದ ಡಾ. ಸದಾನಂದ ಎಲ್ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥಿಸಿದರು. ನಿಯೋಲಾ ಪ್ರಿನ್ಸಿಯಾ ಡಿಸಿಲ್ವಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್‌ಗಳು ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

