• Home  
  • ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ವಿಜ್ಞಾತಮ್ ಉತ್ಸವ್-2025”  ಬಹುಮಾನ (Students of SMVITM, Gets Prize in “VIJNATHAM UTSAV- 2025”)
- ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ವಿಜ್ಞಾತಮ್ ಉತ್ಸವ್-2025”  ಬಹುಮಾನ (Students of SMVITM, Gets Prize in “VIJNATHAM UTSAV- 2025”)

Share: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ವಿಜ್ಞಾತಮ್ ಉತ್ಸವ್–2025”  ಬಹುಮಾನ (Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮಂಡ್ಯ, ಇಲ್ಲಿ ನಡೆದ “ವಿಜ್ಞಾತಮ್ ಉತ್ಸವ್-2025” ತಾಂತ್ರಿಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.   ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಭೂಷಣ್ ಭಾಸ್ಕರ್ ಪೂಜಾರಿ, ಕಿರಣ್ ಭಟ್, ಅಮೃತಾ, ವಿಶ್ರಿತಾ, ಪ್ರಜ್ವಲ್ ಮತ್ತು ಶ್ರೇಯಸ್ ಇವರು ಪ್ರಾಜೆಕ್ಟ್ ಪ್ರದರ್ಶನದಲ್ಲಿ 3ನೇ ಸ್ಥಾನ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ವಿಜ್ಞಾತಮ್ ಉತ್ಸವ್–2025”  ಬಹುಮಾನ

(Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮಂಡ್ಯ, ಇಲ್ಲಿ ನಡೆದ “ವಿಜ್ಞಾತಮ್ ಉತ್ಸವ್-2025” ತಾಂತ್ರಿಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.  

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಭೂಷಣ್ ಭಾಸ್ಕರ್ ಪೂಜಾರಿ, ಕಿರಣ್ ಭಟ್, ಅಮೃತಾ, ವಿಶ್ರಿತಾ, ಪ್ರಜ್ವಲ್ ಮತ್ತು ಶ್ರೇಯಸ್ ಇವರು ಪ್ರಾಜೆಕ್ಟ್ ಪ್ರದರ್ಶನದಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

ಇದು ವಿದ್ಯಾರ್ಥಿಗಳ ಶ್ರಮ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಸುತ್ತದೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ದಾದ್ಯಂತ ಒಟ್ಟು 87 ಇಂಜಿನಿಯರಿಂಗ್  ಕಾಲೇಜಿನ ತಂಡಗಳು ಭಾಗವಹಿಸಿದ್ದವು.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಪಠ್ಯೇತರ ಸಂಯೋಜಕರು ಅಭಿನಂದನೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.