ಬಂಟಕಲ್ ಇಂಜಿನಿಯರಿಂಗ್ ಕಾಲೇಜು “ಮೆಂಟರ್ ಇನ್ಸಿಟ್ಯೂಟ್” ಆಗಿ ಆಯ್ಕೆ
ಉಡುಪಿ: ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವು ಭಾರತ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಇನ್ಸಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ (ಐಐಸಿ)ನಿಂದ ಮಾರ್ಗದರ್ಶಕ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.
ಈ ವಿದ್ಯಾಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿ ಮಾರ್ಗದರ್ಶಕ ಸಂಸ್ಥೆಯಾಗಿ ಗುರುತಿಸಲ್ಪಟ್ಟ ಏಕೈಕ ಸಂಸ್ಥೆಯಾಗಿದ್ದು, ಕರ್ನಾಟಕದ 13ಕಾಲೇಜುಗಳಲ್ಲಿ ಈ ಸಂಸ್ಥೆ ಒಂದಾಗಿದೆ.
ಈ ಯೋಜನೆಯಡಿಯಲ್ಲಿ 100 ಉನ್ನತ ಕಾರ್ಯನಿರ್ವಹಣೆಯ ಐಐಸಿ ಸಂಸ್ಥೆಗಳು 500ಐಐಸಿ ಸಂಸ್ಥೆಗಳಿಗೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ. ಮಾರ್ಗದರ್ಶಕ ಸಂಸ್ಥೆಗಳಿಗೆ ನಿಗದಿತ ಚಟುವಟಿಕೆಯನ್ನು ಆಯೋಜಿಸಲು ಎಮ್ಐಸಿ/ಎಐಸಿಟಿಇ ವತಿಯಿಂದ ರೂ. 2, 25,000 ದಷ್ಟು ಧನಸಹಾಯವನ್ನು ನೀಡಲಾಗುತ್ತದೆ.
ಈ ಮಾರ್ಗದರ್ಶಕ ಕಾರ್ಯಕ್ರಮದ ಮುಖ್ಯ ಉದ್ದೇಶ ಐಐಸಿ ಸಂಸ್ಥೆಗಳು ಉನ್ನತ ಕಾರ್ಯನಿರ್ವಹಣೆಯ ಐಐಸಿ ಸಂಸ್ಥೆಗಳನ್ನು ಇತರ ಐಐಸಿಗಳ ತರಬೇತಿಗೆ ಬಳಸಿಕೊಳ್ಳುವುದಾಗಿದೆ.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ 5 ಅಂಕದಲ್ಲಿ 3.5 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದುಕೊಂಡಿರುವ, ಮಾರ್ಗದರ್ಶನ ಅಗತ್ಯವಿರುವ ಐಐಸಿ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವುದಾಗಿದೆ.
ಔದ್ಯೋಗೀಕರಣದ ಮಾಹಿತಿ ವಿನಿಮಯದ ಜೊತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಬೆಂಬಲವನ್ನು ಒದಗಿಸುತ್ತದೆ. 2022-23ರ ಶೈಕ್ಷಣಿಕ ವರ್ಷದಲ್ಲಿ ನಡೆದ ನಾವೀನ್ಯತೆ, ಉದ್ಯಮಶೀಲತೆ ಸಂಬಂಧಿತ ಚಟುವಟಿಕೆಗಳಲ್ಲಿ 3 ಸ್ಟಾರ್ ರೇಟಿಂಗ್ ಪಡೆದ ಸಲುವಾಗಿ ಈ ಮಾರ್ಗದರ್ಶಕ ಸ್ಥಾನವನ್ನು ವಿದ್ಯಾ ಸಂಸ್ಥೆಯು ಪಡೆದಿರುತ್ತದೆ.
ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾವೀನ್ಯತೆ ಮತ್ತುಸ್ಟಾರ್ಟ್-ಅಪ್ ಮತ್ತು ಇಕೋ ಸಿಸ್ಟಮ್ಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ. ಕಾಲೇಜಿನ ಇನ್ನೋವೇಶನ್ ಕೌನ್ಸಿಲ್(ಐಐಸಿ)ನ ಸದಸ್ಯರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ (DR Tirumaleshwar Bhat) , ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ (DR Ganesh Aital) ಇವರು ಐಐಸಿ ಸಂಯೋಜಕರು ಮತ್ತು ಸದಸ್ಯರನ್ನು ಅಭಿನಂದಿಸಿದರು

