• Home  
  •  ಬಂಟಕಲ್‌ ಕಾಲೇಜು : “ಯುವ ಪ್ರೌಢಾವಸ್ಥೆ,  ಪೋಷಕರಲ್ಲಿ ಹೊಸ ಅಧ್ಯಾಯ” ಉಪನ್ಯಾಸ (“Young Adulthood: A New Chapter in Parenting.”- A talk by SoujanyaShetty at SMVITM)
- ಶಾಲಾ ಕಾಲೇಜು

 ಬಂಟಕಲ್‌ ಕಾಲೇಜು : “ಯುವ ಪ್ರೌಢಾವಸ್ಥೆ,  ಪೋಷಕರಲ್ಲಿ ಹೊಸ ಅಧ್ಯಾಯ” ಉಪನ್ಯಾಸ (“Young Adulthood: A New Chapter in Parenting.”- A talk by SoujanyaShetty at SMVITM)

Share:     ಬಂಟಕಲ್‌ ಕಾಲೇಜು : “ಯುವ ಪ್ರೌಢಾವಸ್ಥೆ,  ಪೋಷಕರಲ್ಲಿ ಹೊಸ ಅಧ್ಯಾಯ”ಉಪನ್ಯಾಸ   ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ   (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶಿಕ್ಷಕ-ರಕ್ಷಕ ಸಭೆಯನ್ನುಆಯೋಜಿಸಲಾಗಿದ್ದು, ಸಭೆಯ ಅಂಗವಾಗಿ ಪೋಷಕರಿಗೆ ಡಾ. ಎ ವಿ ಬಾಳಿಗ ಸ್ಮಾರಕ  ಆಸ್ಪತ್ರೆಯ ಆಡಳಿತ ಅಧಿಕಾರಿ ಮತ್ತು ಸಮಾಲೋಚಕಿ, ಶ್ರೀಮತಿ ಸೌಜನ್ಯ ಶೆಟ್ಟಿಯವರಿಂದ“ಯುವ ಪ್ರೌಢಾವಸ್ಥೆ: ಪೋಷಕರಲ್ಲಿ ಹೊಸ ಅಧ್ಯಾಯ”ಎಂಬ ವಿಷಯದ ಕುರಿತು ಉಪನ್ಯಾಸವನ್ನುಆಯೋಜಿಸಲಾಯಿತು.   […]

  (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶಿಕ್ಷಕ-ರಕ್ಷಕ ಸಭೆಯನ್ನುಆಯೋಜಿಸಲಾಗಿದ್ದು, ಸಭೆಯ ಅಂಗವಾಗಿ ಪೋಷಕರಿಗೆ ಡಾ. ಎ ವಿ ಬಾಳಿಗ ಸ್ಮಾರಕ  ಆಸ್ಪತ್ರೆಯ ಆಡಳಿತ ಅಧಿಕಾರಿ ಮತ್ತು ಸಮಾಲೋಚಕಿ, ಶ್ರೀಮತಿ ಸೌಜನ್ಯ ಶೆಟ್ಟಿಯವರಿಂದ“ಯುವ ಪ್ರೌಢಾವಸ್ಥೆ: ಪೋಷಕರಲ್ಲಿ ಹೊಸ ಅಧ್ಯಾಯ”ಎಂಬ ವಿಷಯದ ಕುರಿತು ಉಪನ್ಯಾಸವನ್ನುಆಯೋಜಿಸಲಾಯಿತು.

    ಈ ಸಭೆಯ ಮುಖ್ಯ ಉದ್ದೇಶ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯ ವಿವಿಧ ಅಂಶಗಳನ್ನು ಚರ್ಚಿಸುವುದು.

    ಶ್ರೀಮತಿ ಸೌಜನ್ಯ ಶೆಟ್ಟಿಯವರು ಮಾತನಾಡಿ, ಮಕ್ಕಳ ಪ್ರೌಢಾವಸ್ಥೆಯ ಪರಿವರ್ತನೆಯ ಸಮಯದಲ್ಲಿ ಪೋಷಕರ ಬೆಂಬಲದ ಬಗ್ಗೆ ತಿಳಿಸಿದರು.

     ಪೋಷಕರು ಮಕ್ಕಳನ್ನು ಅತಿಯಾಗಿ ನಿರ್ಬಂಧಿಸುವ, ನಿಯಂತ್ರಿಸುವ ಬದಲು ಸ್ನೇಹಪರ ಹಾಗೂ ಬೆಂಬಲ ನೀಡುವ ವಾತಾವರಣವನ್ನು ಸೃಷ್ಟಿಸಬೇಕು. ಅತಿಯಾದ ನಿಯಂತ್ರಣವು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಮೇಲೆ ಪರಿಣಾಮವನ್ನು ಬೀರುತ್ತದೆ. ಅದಕ್ಕೆ ಬದಲಾಗಿ ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸುವ ಮೂಲಕ ಅವರಲ್ಲಿ ನಂಬಿಕೆ ಮತ್ತು ಜವಾಬ್ದಾರಿಯನ್ನು ಬೆಳೆಸಬಹುದು.

    ಶಿಕ್ಷಣದ ಹಂತದಲ್ಲಿ ಹಣ, ಮಾಧ್ಯಮ, ಮೊಬೈಲ್ ಫೋನ್‌ಗಳು ಮತ್ತು ಮೋಟಾರ್‌ ಬೈಕ್‌ಗಳ ನಕಾರಾತ್ಮಕ ಪ್ರಭಾವದ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಿ,  ಪೋಷಕರು ಉತ್ತಮ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡರೆ, ಮಕ್ಕಳು ಬಾಹ್ಯ ಪ್ರಭಾವಗಳಿಂದ ವಿಚಲಿತರಾಗುವ ಸಾಧ್ಯತೆ ಕಡಿಮೆ ಎಂದರು.

   ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.