• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (ATL Connect Program – a student mentoring activity on “IOT Applications)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (ATL Connect Program – a student mentoring activity on “IOT Applications)

Share: ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಾರ್ಗದರ್ಶನ   (Bantakal) ಬಂಟಕಲ್: ಜುಲೈ 2025: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅನ್ನಪೂರ್ಣ ಶೆಣೈ, ಪೂರ್ಣಿತಾ, ದಿವ್ಯಾಂತ್, ಶರಣ್ಯ, ಚಂದನ್ ಮತ್ತು ಕಾರ್ತಿಕ್‌ರವರು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಐಒಟಿ ಅಪ್ಲಿಕೇಶನ್ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. […]

  (Bantakal) ಬಂಟಕಲ್: ಜುಲೈ 2025: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅನ್ನಪೂರ್ಣ ಶೆಣೈ, ಪೂರ್ಣಿತಾ, ದಿವ್ಯಾಂತ್, ಶರಣ್ಯ, ಚಂದನ್ ಮತ್ತು ಕಾರ್ತಿಕ್‌ರವರು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಐಒಟಿ ಅಪ್ಲಿಕೇಶನ್ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ.

 ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯ 8ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಸಂವೇದಕ ಆಧಾರಿತ ವ್ಯವಸ್ಥೆಗಳ ಮೂಲಭೂತ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

 ವಿದ್ಯಾರ್ಥಿಗಳಿಗೆ ಆರ್ಡಿನೋ ಪ್ರೋಗ್ರಾಮಿಂಗ್, ಎಲ್‌ಇಡಿ ನಿಯಂತ್ರಣ ಮತ್ತು ಸಂವೇದಕಗಳನ್ನು ಬಳಸಿಕೊಂಡು ಸರಳ ಯಾಂತ್ರಿಕರಣವನ್ನು ಪರಿಚಯಿಸಲಾಯಿತು. ಈ ಮಾರ್ಗದರ್ಶನ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ಶಾಲಾ ಮಟ್ಟದ ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

 ಕಾರ್ಯಕ್ರಮವನ್ನು ಸಂಸ್ಥೆಯ ಗಣಕಯಂತ್ರ ವಿಭಾಗದ ದೀಪಕ್‌ ರಾವ್‌ ಸಂಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.