• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿಆವಿಷ್ಕಾರ್ 2025 ವಿಜ್ಞಾನ ಉತ್ಸವ (SMVITM Inaugurates AVISHKAR 2K25 – A Science Fest for Young Minds)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿಆವಿಷ್ಕಾರ್ 2025 ವಿಜ್ಞಾನ ಉತ್ಸವ (SMVITM Inaugurates AVISHKAR 2K25 – A Science Fest for Young Minds)

Share:  ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿಆವಿಷ್ಕಾರ್ 2025 ವಿಜ್ಞಾನ ಉತ್ಸವ ವಿಜ್ಞಾನ ಉತ್ಸವ ಉದ್ಘಾಟಿಸಿದ ಜಿಲ್ಲಾ ಪಂಚಾಯತ್‌ನ ಸಿಇಓ ಪ್ರತೀಕ್ ಬಾಯಲ್‌ (Bantakal) ಬಂಟಕಲ್‌ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿಪೂರ್ವ ಮತ್ತು ಫ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಆವಿಷ್ಕಾರ್ 2025 ವಿಜ್ಞಾನ ಉತ್ಸವವನ್ನು ಶನಿವಾರ ಆಯೋಜಿಸಲಾಗಿತ್ತು.    ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್‌ ರವರು   ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.  ಅವರು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವಿಜ್ಞಾನ […]

(Bantakal) ಬಂಟಕಲ್‌ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿಪೂರ್ವ ಮತ್ತು ಫ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಆವಿಷ್ಕಾರ್ 2025 ವಿಜ್ಞಾನ ಉತ್ಸವವನ್ನು ಶನಿವಾರ ಆಯೋಜಿಸಲಾಗಿತ್ತು.

   ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್‌ ರವರು   ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

 ಅವರು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನುಒತ್ತಿ ಹೇಳಿದರು. ಯುವ ವೈಜ್ಞಾನಿಕ ಮನಸ್ಸುಗಳನ್ನು ಪೋಷಿಸುವಲ್ಲಿ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು.

   ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ್ದ  ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ ಜಗದೀಶ್ ನಾವಡ ಮಾತನಾಡಿ,    ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ವಿದ್ಯಾಸಂಸ್ಥೆಗಳ ಸಹಯೋಗದ ಮಹತ್ವವನ್ನು ತಿಳಿಸಿದರು.

ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾ ಅಧಿಕಾರಿ ಡಾ. ಉದಯ ಶೆಟ್ಟಿ ಮತ್ತು ಯೋಜನಾ ನಿರ್ದೇಶಕರಾದ ವಿಜಯ್‌ಕುಮಾರ್, ಕೆಎಎಸ್ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಭವಿಷ್ಯದ ಪೀಳಿಗೆಯಿಂದ ನವೀನ ಯೋಜನೆಯನ್ನು ನಿರ್ಮಿಸುವಲ್ಲಿನ ಮಹತ್ವವನ್ನುಒತ್ತಿ ಹೇಳಿದರು.

    ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಮನಸ್ಸುಗಳು ತಮ್ಮ ಜ್ಞಾನವನ್ನು ಉತ್ಕೃಷ್ಟಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

 ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 500 ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಯುವ ಮನಸ್ಸುಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಲು ಮತ್ತು ಪ್ರಾಯೋಗಿಕ ವೈಜ್ಞಾನಿಕ ಪರಿಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮವು ವಿಜ್ಞಾನ ಮಾದರಿ ಪ್ರದರ್ಶನ, ವಿಜ್ಞಾನ ರಸ ಪ್ರಶ್ನೆ ಮತ್ತು ಕಿರು ವೀಡಿಯೋ ತಯಾರಿಕೆ ಸ್ಪರ್ಧೆ ಮೊದಲಾದ ಹಲವು ಸ್ಪರ್ಧೆಗಳನ್ನು ಒಳಗೊಂಡಿತ್ತು.

ಸಂಸ್ಥೆಯ ಶೈಕ್ಷಣಿಕ ಡೀನ್‌ ಡಾ. ನಾಗರಾಜ ಭಟ್ ಅತಿಥಿಗಳನ್ನು ಸ್ವಾಗತಿಸಿದರು.

   ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಂಯೋಜಕರೂ ಆದ ಡಾ. ಸುಬ್ಬುಲಕ್ಷ್ಮೀ ಎನ್‌ ಕಾರಂತ್‌ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿನಿ ಕುಮಾರಿ ವಿಂಧ್ಯಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ದೀಪಾ ಡಿ ಪ್ರಭು ಮತ್ತು ಚಿರಶ್ರೀ ನಿರೂಪಿಸಿದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.