• Home  
  •      ಬಂಟಕಲ್ ತಾಂತ್ರಿಕ  ಕಾಲೇಜಿನ ಐಇಇಇ ವಿದ್ಯಾರ್ಥಿ ಶಾಖೆಗೆ 5 ಪ್ರತಿಷ್ಠಿತ ಪ್ರಶಸ್ತಿ
- ಶಾಲಾ ಕಾಲೇಜು

     ಬಂಟಕಲ್ ತಾಂತ್ರಿಕ  ಕಾಲೇಜಿನ ಐಇಇಇ ವಿದ್ಯಾರ್ಥಿ ಶಾಖೆಗೆ 5 ಪ್ರತಿಷ್ಠಿತ ಪ್ರಶಸ್ತಿ

Share:     (IEEE Student Branch SMVITM   Bags five Awards at IEEE Bangalore Section AGM) ಬಂಟಕಲ್ ತಾಂತ್ರಿಕ ಕಾಲೇಜಿನ ಐಇಇಇ ವಿದ್ಯಾರ್ಥಿ ಶಾಖೆಗೆ 5 ಪ್ರತಿಷ್ಠಿತ ಪ್ರಶಸ್ತಿ (Udupi, Bantakal) ಉಡುಪಿ, ಬಂಟಕಲ್ : ಬಂಟಕಲ್‌  ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಶಾಖೆಗೆ ಪ್ರತಿಷ್ಠಿತ ಐದು ಪ್ರಶಸ್ತಿ ದೊರೆತಿದೆ.     ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಐಇಇಇ ಬೆಂಗಳೂರು ಸೆಕ್ಷನ್‌ನ ವಾರ್ಷಿಕ ಸಭೆಯಲ್ಲಿ ನೀಡಲಾಯಿತು.     ಐಇಇಇ ವಿದ್ಯಾರ್ಥಿ […]

(Udupi, Bantakal) ಉಡುಪಿ, ಬಂಟಕಲ್ : ಬಂಟಕಲ್‌  ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಶಾಖೆಗೆ ಪ್ರತಿಷ್ಠಿತ ಐದು ಪ್ರಶಸ್ತಿ ದೊರೆತಿದೆ.

    ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಐಇಇಇ ಬೆಂಗಳೂರು ಸೆಕ್ಷನ್‌ನ ವಾರ್ಷಿಕ ಸಭೆಯಲ್ಲಿ ನೀಡಲಾಯಿತು.

    ಐಇಇಇ ವಿದ್ಯಾರ್ಥಿ ಶಾಖೆಯು ಪಡೆದುಕೊಂಡ ಪ್ರಶಸ್ತಿಗಳು “ಔಟ್ ಸ್ಟಾಂಡಿಂಗ್‌ ಲಾರ್ಜ್ ಸ್ಟುಡೆಂಟ್ ಬ್ರಾಂಚ್ ಅವಾರ್ಡ್”, ಬೆಂಗಳೂರು ಸೆಕ್ಷನ್‌ನ “ಟಾಪ್ ೨೫ ವಿದ್ಯಾರ್ಥಿ ಶಾಖೆಗಳ ಪಟ್ಟಿಯಲ್ಲಿ ಸ್ಥಾನ”, “ಮೆಂಬರ್ ಶಿಪ್ ಡೆವಲಪ್‌ಮೆಂಟ್ ಚಾಲೆಂಜ್ ಅವಾರ್ಡ್”, “ಔಟ್ ಸ್ಟಾಂಡಿಂಗ್‌  ಸ್ಟುಡೆಂಟ್ ವಾಲಂಟಿಯರ್ ಅವಾರ್ಡ್” ದೊರೆತಿದೆ.

    ಒಂದೇ ವರ್ಷದಲ್ಲಿ ಐದು ಪ್ರಶಸ್ತಿಗಳನ್ನು ಪಡೆದ ಐಇಇಇ ಬೆಂಗಳೂರು ಸೆಕ್ಷನ್‌ನ ಏಕೈಕ ಸಂಸ್ಥೆಯಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಗುರುತಿಸಿಕೊಂಡಿದೆ.

    ಇದು ಸಂಸ್ಥೆಯ ಶ್ರೇಷ್ಠ ಕಾರ್ಯಕ್ಷಮತೆಯ ಪ್ರತೀಕವಾಗಿದೆ.

    ಸಂಸ್ಥೆ ಈ ಸಾಧನೆಗೆ ಐಇಇಇ ಬೆಂಗಳೂರು ಸೆಕ್ಷನ್ ಹಾಗೂ ಮಂಗಳೂರು ಉಪ-ಸೆಕ್ಷನ್‌ಗಳ ನಿರಂತರ ಮಾರ್ಗದರ್ಶನ, ಪ್ರೋತ್ಸಾಹವು ಕಾರಣವಾಗಿದೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.