• Home  
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ : ತಾಲೂಕು ಮಟ್ಟದ ವಿಚಾರಗೋಷ್ಠಿ (Sri Kshetra Dharmasthala Village Development Plan: Taluk Level Seminar)
- ಸಂಘ, ಸಂಸ್ಥೆಗಳು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ : ತಾಲೂಕು ಮಟ್ಟದ ವಿಚಾರಗೋಷ್ಠಿ (Sri Kshetra Dharmasthala Village Development Plan: Taluk Level Seminar)

Share: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ : ತಾಲೂಕು ಮಟ್ಟದ ವಿಚಾರಗೋಷ್ಠಿ  ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ನೇತೃತ್ವದ ಕಾರ್ಯಕ್ರಮ   (Yermal) ಎರ್ಮಾಳು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ. ಟ್ರಸ್ಟ್, ಕಾಪು ತಾಲೂಕು ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಇದರ ಸಹಯೋಗದೊಂದಿಗೆ ಪರಮಪೂಜ್ಯ ಪದ್ಮವಿಭೂಷಣ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಶನಿವಾರ […]

(Yermal) ಎರ್ಮಾಳು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ. ಟ್ರಸ್ಟ್, ಕಾಪು ತಾಲೂಕು ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಇದರ ಸಹಯೋಗದೊಂದಿಗೆ ಪರಮಪೂಜ್ಯ ಪದ್ಮವಿಭೂಷಣ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಶನಿವಾರ ಎರ್ಮಾಳು ಶೀ ಜನಾರ್ಧನ ಜನಲ್ಯಾಣ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಉದ್ಘಾಟಿಸಿದರು.

   ಈ ಸಂದರ್ಭ ಅವರು ಮಾತನಾಡಿ, ಪೂಜ್ಯ ಖಾವಂದರು ಅರ್ಥಪೂರ್ಣ ಸಮಾಜವನ್ನು ಕಟ್ಟಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರವೊಂದಿದ್ದರೆ ಅದು ಧರ್ಮಸ್ಥಳ ಕ್ಷೇತ್ರ ಮಾತ್ರಾ.

ಮಹಿಳೆಯರು ಸಾತ್ವಿಕ ಬದುಕಿನಿಂದ ಬದುಕಬೇಕೆಂಬ ಸಂಕಲ್ಪದಿಂದ ಅವರು ಮಹಿಳೆಯರು ಸದೃಡರಾಗವಂತೆ ಮತ್ತು ಮಹಿಳೆಯರು ಹಂಗಿಲ್ಲದ ಬದುಕು ಸಾಧಿಸುವಂತೆ ಮಾಡಿದ ಕೀರ್ತಿ ಮಾನ್ಯ ದರ್ಮಾಧಿಕಾರಿಯವರಿಗಿದೆ  ಎಂದೂ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದ್ದಾರೆ.

  ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್‌ ರಾಜ್ ಎರ್ಮಾಳುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಆಧುನಿಕ ಸಮಾಜದಲ್ಲಿ ಮಹಿಳೆಯ ಸಾಧನೆ ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಉಡುಪಿ ಸಮೂಹ ಶಿಕ್ಷಣ ಸಂಸ್ಥೆ ಮಣಿಪಾಲ ಇದರ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅರ್ಪಿತಾ ಪ್ರಶಾಂತ ಶೆಟ್ಟಿ ಕಟಪಾಡಿಯವರು ಮಾಹಿತಿ ನೀಡಿದರು.

  ನೂತನ ಜ್ಞಾನವಿಕಾಸ ಕೇಂದ್ರದ ದಾಖಲಾತಿ ಹಸ್ತಾಂತರವನ್ನು ಮಾಜಿ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಶ್ರೀಮತಿ ಶೀಲಾ ಶೆಟ್ಟಿ ನೆರವೇರಿಸಿದರು.

 ವೇದಿಕೆಯಲ್ಲಿ ಶ್ರೀ ಕ್ಷೇ. ಧ. ಗ್ರಾ. ಯೋ. ಬಿ.ಸಿ. ಟ್ರಸ್ಟ್ ನಿರ್ದೇಶಕ ನಾಗರಾಜ ಶೆಟ್ಟಿ, ಶಿರ್ವ ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಶ್ರೀಮತಿ ಗೀತಾ ವಾಗ್ಳೆ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಶ್ರೀಮತಿ ಸುಜಾತ ಸುವರ್ಣ, ಶ್ರೀ ಕ್ಷೇ. ಧ. ಗ್ರಾ. ಯೋ. ಬಿ.ಸಿ. ಟ್ರಸ್ಟ್ ಕಾಪು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

 ಶ್ರೀಮತಿ ಮಮತಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.