• Home  
  • ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜು: ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯಾಸಂಗ: ಪ್ರಾಂಶುಪಾಲ ಡಾ. ತಿರುಮಲೇಶ್ವರ್‌ ಭಟ್ (Bantakal SMVITM College Good education at Low cost :Principal Dr Tirumaleshwar Bhat)
- ವಿಡಿಯೋ - ಶಾಲಾ ಕಾಲೇಜು

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜು: ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯಾಸಂಗ: ಪ್ರಾಂಶುಪಾಲ ಡಾ. ತಿರುಮಲೇಶ್ವರ್‌ ಭಟ್ (Bantakal SMVITM College Good education at Low cost :Principal Dr Tirumaleshwar Bhat)

Share: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜು: ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯಾಸಂಗ: ಪ್ರಾಂಶುಪಾಲ ಡಾ. ತಿರುಮಲೇಶ್ವರ್‌ ಭಟ್  (Bantakal) ಬಂಟಕಲ್:‌ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದಿಂದ ಪ್ರವರ್ತಿತವಾಗಿದ್ದು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ 2010ರಲ್ಲಿ ಪ್ರಾರಂಭವಾಗಿ, NAAC ನಿಂದ ‘A’ ಶ್ರೇಣಿಯ ಮಾನ್ಯತೆ ಪಡೆದು, NIRF ನಿಂದ ಮಾನ್ಯತೆ ಪಡೆದ ದೇಶದ 150 ರಿಂದ 300 ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಆವಿಷ್ಕಾರದಲ್ಲಿಯೂ […]

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜು: ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯಾಸಂಗ: ಪ್ರಾಂಶುಪಾಲ ಡಾ. ತಿರುಮಲೇಶ್ವರ್‌ ಭಟ್

 (Bantakal) ಬಂಟಕಲ್:‌ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದಿಂದ ಪ್ರವರ್ತಿತವಾಗಿದ್ದು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ 2010ರಲ್ಲಿ ಪ್ರಾರಂಭವಾಗಿ, NAAC ನಿಂದ ‘A’ ಶ್ರೇಣಿಯ ಮಾನ್ಯತೆ ಪಡೆದು, NIRF ನಿಂದ ಮಾನ್ಯತೆ ಪಡೆದ ದೇಶದ 150 ರಿಂದ 300 ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಆವಿಷ್ಕಾರದಲ್ಲಿಯೂ ಮಾನ್ಯತೆ ಪಡೆದ ತಾಂತ್ರಿಕ ಮಹಾವಿದ್ಯಾಲಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ತಿರುಮಲೇಶ್ವರ್‌ ಭಟ್  ಹೇಳಿದ್ದಾರೆ.

ಪ್ರಸ್ತುತ 14ನೇ ವರ್ಷದಲ್ಲಿ 11 ಬ್ಯಾಚ್ ನ ವಿದ್ಯಾರ್ಥಿಗಳು ದೇಶ-ವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ. ಅದೇ ರೀತಿ ಉನ್ನತ ವ್ಯಾಸಂಗವನ್ನೂ ಮಾಡುತ್ತಿದ್ದಾರೆ.

 ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದು ತಾಂತ್ರಿಕ ಕ್ಷೇತ್ರದ 5 ವಿಭಾಗಗಳಾದ Computer Science & Engineering, Electronic & Communication Engineering, Mechanical Engineering, Artificial Intelligence Data Science Engineering,  Artificial Intelligence Machine Learning Engineering ನಲ್ಲಿ ಪದವಿ ಪಡೆಯಬಹುದಾಗಿದೆ.

 ಇದರ ಜೊತೆಗೆ ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪದವಿ, ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನಲ್ಲಿ 3 ವಿಭಾಗದಲ್ಲಿ ಪದವಿ ಪಡೆಯುವ ಅವಕಾಶವಿದೆ. ಸ್ನಾತಕೋತ್ತರ ವಿಭಾಗದಲ್ಲಿ MBA ವಿಷಯದಲ್ಲಿ Marketing, Finance, H.R ಪದವಿ ಪಡೆಯಬಹುದಾಗಿದೆ‌.

ಒಂದೇ ಕ್ಯಾಂಪಸ್ಸಿನಲ್ಲಿ ಈ ಎಲ್ಲಾ ಕೋರ್ಸುಗಳು ಲಭ್ಯವಿದೆ.

 ನಮ್ಮ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣವನ್ನು Management, COMED K, CET  ಸೀಟುಗಳ ಮೂಲಕ admission ಪಡೆಯಬಹುದು. CET ಪರೀಕ್ಷೆಯ ಫಲಿತಾಂಶ ಬಂದ ಮೇಲೆ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ನಮ್ಮ ಕಾಲೇಜನ್ನು ಸಂಪರ್ಕಿಸಬಹುದು.

ನಮ್ಮ ಕಾಲೇಜಿನಲ್ಲಿರುವ ಪ್ರಯೋಜನಗಳು :

ಉತ್ತಮ ಸೌಲಭ್ಯಗಳ ಜೊತೆಗೆ Placement ಮೂಲಕ 83% ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ. ಕೌಶಲಾಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು, ಮೌಲ್ಯಯುತ ತರಬೇತಿ, ಉದ್ಯೋಗ ಪಡೆಯಲು ಶುಲ್ಕ ರಹಿತವಾಗಿ ವಿಶೇಷ ತರಬೇತಿಗಳು, 20 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ಬಾರಿ 5 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಯೋಜನೆ ಹಮ್ಮಿಕೊಳ್ಳುವ ಯೋಜನೆಯಿದೆ.

 ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್ ಮಾಹಿತಿ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.