• Home  
  • ಮುಂಗಾರು: ಜೂ.1ಕ್ಕೆ ಕೇರಳ ಪ್ರವೇಶ, ಜೂ.5 ಅಥವಾ 6 ಕ್ಕೆ ಕರಾವಳಿ ಪ್ರವೇಶ (Mansoon Starts kerala June 1st, Karnataka costal likely 5th or 6th June)
- ಕರಾವಳಿ

ಮುಂಗಾರು: ಜೂ.1ಕ್ಕೆ ಕೇರಳ ಪ್ರವೇಶ, ಜೂ.5 ಅಥವಾ 6 ಕ್ಕೆ ಕರಾವಳಿ ಪ್ರವೇಶ (Mansoon Starts kerala June 1st, Karnataka costal likely 5th or 6th June)

Share: ಮುಂಗಾರು: ಜೂ.1ಕ್ಕೆ ಕೇರಳ ಪ್ರವೇಶ, ಜೂನ್‌ 5 ಅಥವಾ 6 ಕ್ಕೆ ಕರಾವಳಿ ಪ್ರವೇಶ  (Bengaluru) ಬೆಂಗಳೂರು: ಬಹುತೇಕ ಕಡೆ ಬೇಸಿಗೆಯ ಬಿಸಿ ತುಸು ಕಡಿಮೆಯಾಗಿದೆ. ಇದರ ಬೆನ್ನಿಗೆ ಭಾರತೀಯ ಹವಾಮಾನ ಇಲಾಖೆ ಕೂಡ ಜನರಿಗೆ ಖುಷಿಯ ಸುದ್ದಿ ನೀಡಿದೆ. ಈ ಸಲ ಮುಂಗಾರು ಜೂ.1ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ನೈಋತ್ಯ ಮುಂಗಾರು ಮಾರುತ ಅಂಡಮಾನ್, ಬಂಗಾಳ ಕೊಲ್ಲಿ ಮತ್ತು ನಿಕೋಬಾರ್‌ರ ದ್ವೀಪವನ್ನು ಮೇ 19ರಂದೇ ಪ್ರವೇಶಿಸಲಿದ್ದು, ಹೀಗಾಗಿ ಕೇರಳಕ್ಕೆ […]

ಮುಂಗಾರು: ಜೂ.1ಕ್ಕೆ ಕೇರಳ ಪ್ರವೇಶ, ಜೂನ್‌ 5 ಅಥವಾ 6 ಕ್ಕೆ ಕರಾವಳಿ ಪ್ರವೇಶ

 (Bengaluru) ಬೆಂಗಳೂರು: ಬಹುತೇಕ ಕಡೆ ಬೇಸಿಗೆಯ ಬಿಸಿ ತುಸು ಕಡಿಮೆಯಾಗಿದೆ. ಇದರ ಬೆನ್ನಿಗೆ ಭಾರತೀಯ ಹವಾಮಾನ ಇಲಾಖೆ ಕೂಡ ಜನರಿಗೆ ಖುಷಿಯ ಸುದ್ದಿ ನೀಡಿದೆ. ಈ ಸಲ ಮುಂಗಾರು ಜೂ.1ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ನೈಋತ್ಯ ಮುಂಗಾರು ಮಾರುತ ಅಂಡಮಾನ್, ಬಂಗಾಳ ಕೊಲ್ಲಿ ಮತ್ತು ನಿಕೋಬಾರ್‌ರ ದ್ವೀಪವನ್ನು ಮೇ 19ರಂದೇ ಪ್ರವೇಶಿಸಲಿದ್ದು, ಹೀಗಾಗಿ ಕೇರಳಕ್ಕೆ ಮುಂಗಾರು ಕ್ಲಪ್ತ ಸಮಯದಲ್ಲಿ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಸಲ ಮಾಮೂಲಿಗಿಂತ ಹೆಚ್ಚೇ ಮಳೆಯೂ ಆಗಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಭವಿಷ್ಯ ನುಡಿದಿತ್ತು.

 ಕೇರಳ ಪ್ರವೇಶಿಸಿ ಮುಂಗಾರು ಮೂರ್ನಾಲ್ಕು ದಿನಗಳ ಒಳಗಾಗಿ ಕರ್ನಾಟಕ ಕರಾವಳಿಗೆ ಬರುತ್ತದೆ. ಅಂದರೆ ಕರಾವಳಿಯಲ್ಲಿ ಈ ವರ್ಷ ಜೂನ್ ಮೊದಲ ವಾರದಲ್ಲೇ ಮಳೆಗಾಲ ಪ್ರಾರಂಭವಾಗುವುದನ್ನು ನಿರೀಕ್ಷಿಸಬಹುದು. ಕೃಷಿ ಚಟುವಟಿಕೆಗೆ ಇದು ಪೂರಕವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿಕೊಂಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.