ಬಂಟ್ವಾಳ: ಪಿಕಪ್ ಚಾಲಕ ರಹೀಂ ಎಂಬಾತನ ಹತ್ಯೆ, ಘಟನಾ ಸ್ಥಳಕ್ಕೆ ತಲಪಿದ ಪೊಲೀಸರು
(Bantwala) ಬಂಟ್ವಾಳ : ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇಲಾಕೋಡಿಯ ಕೊಳತ್ತಮಜಲುವಿನಲ್ಲಿ ಕೊಳತ್ತಮಜಲು ನಿವಾಸಿ ಪಿಕಪ್ ಮಾಲೀಕ ರಹೀಂ ಮತ್ತು ಸಹಾಯಕ ಶಾಫಿ ಎಂಬವರ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದೆ. ಹಲ್ಲೆಗೀಡಾದ ಶಾಫಿ ಗಂಭೀರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಗಾಯಾಳುವನ್ನು ಬಂಟ್ವಾಳ ಆಸ್ಪತ್ರೆಗೆ ರವಾನಿಸಲಾಗಿದೆ.
ಪಿಕಪ್ ಮಾಲೀಕ ರಹೀಂ ಮನೆಯೊಂದರ ಬಳಿ ಮರಳು ಅನ್’ಲೋಡ್ ಮಾಡಿ ವಾಪಾಸಾಗುವ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡ ತಲ್ವಾರ್ ನಿಂದ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.ಯುವಕನನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿದೆ.
ಮೃತ ಯುವಕನನ್ನು ಸ್ಥಳೀಯ ಪಿಕಪ್ ಚಾಲಕ ರಹೀಂ ಎಂದು ಗುರುತಿಸಲಾಗಿದೆ.
ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲ್ವಾರ್ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

