Tag: bantwala police

ಅಪಘಾತ

ಬಂಟ್ವಾಳ : ವೃತ್ತಕ್ಕೆ ಕಾರು ಬಡಿದು 6 ಜನರಿಗೆ ಗಾಯ, ಮೂವರು ಧಾರುಣ ಮೃತ್ಯು (Bantwal: 6 people injured, three dead after car crashes into Narayana guru Circle)

ಬಂಟ್ವಾಳ : ವೃತ್ತಕ್ಕೆ ಕಾರು ಬಡಿದು 6 ಜನರಿಗೆ ಗಾಯ, ಮೂವರು ಧಾರುಣ ಮೃತ್ಯು     ಬೆಂಗಳೂರಿನಿಂದ ಉಡುಪಿ ಕೃಷ್ಣ ಮಠಕ್ಕೆ ಸಾಗುತ್ತಿದ್ದ ಕಾರು. (Bantwala) ಬಂಟ್ವಾಳ: ಶನಿವಾರ ಮುಂಜಾನೆ ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ಕಾರೊಂದು ಬಡಿದು ಸಂಭವಿಸಿದ  ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಘಟಿಸಿದೆ.    ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದ‌ 9 ಮಂದಿ ಮುಂಜಾನೆ 4.45 […]

ಅಪರಾಧ

ಬಂಟ್ವಾಳ: ಪ್ರಿಯತಮೆಗೆ ಮಾರಣಾಂತಿಕ ಹಲ್ಲೆಗೈದ ಬಳಿಕ ನೇಣಿಗೆ ಶರಣಾದ ಪ್ರಿಯಕರ (Bantwal: Boyfriend commits suicide after fatally assaulting girlfriend)

ಬಂಟ್ವಾಳ: ಪ್ರಿಯತಮೆಗೆ ಮಾರಣಾಂತಿಕ ಹಲ್ಲೆಗೈದ ಬಳಿಕ ನೇಣಿಗೆ ಶರಣಾದ ಪ್ರಿಯಕರ  (Bantwala) ಬಂಟ್ವಾಳ: ಪಾಗಲ್  ಪ್ರೇಮಿಯೋರ್ವ ತನ್ನ ಪ್ರಿಯತಮೆಯ ಮನೆಗೆ ನುಗ್ಗಿ ಆಕೆಗೆ ಮಾರಣಾಂತಿಕವಾಗಿ ಹಲ್ಲೆಗೈದು, ಆ ಬಳಿಕ ಆಕೆ ಮೃತಪಟ್ಟಿರಬೇಕೆಂದು ಭಾವಿಸಿ ಆಕೆಯ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಸುಜೀರು ದೈಯಡ್ಕ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾಣ್ ಗ್ರಾಮದ ಕಾಂಜಿಲಕೋಡಿ ನಿವಾಸಿ  ಸುಧೀರ್ (30)ಎಂದು ಗುರುತಿಸಲಾಗಿದೆ. ಯುವತಿ ದಿವ್ಯ ಎಂಬಾಕೆ ಗಂಭೀರ ಸ್ಥಿತಿಯಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ಸದ್ಯ […]

ಅಪಘಾತ

ಬಂಟ್ವಾಳ: ತುಂಬೆ ಬಳಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಚಾಲಕ ಮೃತ್ಯು(Driver dies after car crashes into divider near Thumbay)

ಬಂಟ್ವಾಳ: ತುಂಬೆ ಬಳಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಚಾಲಕ ಮೃತ್ಯು (Bantwala) ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಕೆಳಗಿನ ತುಂಬೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ, ಮೇಲಿಂದ ಹಾರಿ ವಿರುದ್ದ ರಸ್ತೆ ಮೇಲೆ ಬಿದ್ದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮೃತರನ್ನು ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಪಾವೂರು ನಿವಾಸಿಯಾದ ನೌಫಾಲ್ ( 34)  ಎಂದು ಗುರುತಿಸಲಾಗಿದೆ. ಬಿ.ಸಿ.ರೋಡಿನ ಕೈಕಂಬದಲ್ಲಿ ಉಸ್ಮಾನ್ ಎಂಬವರಿಂದ  ಸ್ವಿಪ್ಟ್‌ ಕಾರನ್ನು ಖರೀದಿಸಿ ಮಂಗಳೂರು ಕಡೆಗೆ […]

ಅಪರಾಧ

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು‌ ಕತ್ತು ಹಿಸುಕಿ ಕೊಲೆಗೈದ ಪತಿ ನೇಣಿಗೆ ಶರಣು (Bantwal: Husband hangs himself for strangling pregnant wife)

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು‌ ಕತ್ತು ಹಿಸುಕಿ ಕೊಲೆಗೈದ ಪತಿ ನೇಣಿಗೆ ಶರಣು (Bantwala) ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಸಮೀಪದ ಕೀಳ್ತೋಡಿಯಲ್ಲಿ ತುಂಬು ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ಪತಿ ಬಳಿಕ ತಾನು ನೇಣಿಗೆ ಶರಣಾದ ದಾರುಣ ಘಟನೆ ಸಂಭವಿಸಿದೆ.   ಮೂಲತ: ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ  (52) ಆತ್ಮಹತ್ಯೆಗೆ ಶರಣಾದರೆ, ಇವರ ಪತ್ನಿ ಜಯಂತಿ (45)ಕೊಲೆಗೀಡಾದವರಾಗಿದ್ದಾರೆ.  ಗುರುವಾರ ಬೆಳಗ್ಗೆ ತಿಮ್ಮಪ್ಪ ಮೂಲ್ಯ ಅವರು ಅಡುಗೆ ಕೋಣೆಯ […]

ಅಪರಾಧ

ಬಂಟ್ವಾಳ ; ತಡರಾತ್ರಿ ಬಾಗಿಲು ಬಡಿದು ಪೊಲೀಸರಿಂದ ಖಾಸಗಿತನಕ್ಕೆ ಧಕ್ಕೆ: ಮಹಿಳೆಯರಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ (Women appeal to police officers for violating privacy by knocking on doors late at night)

ಬಂಟ್ವಾಳ; ತಡರಾತ್ರಿ ಬಾಗಿಲು ಬಡಿದು ಪೊಲೀಸರಿಂದ ಖಾಸಗಿತನಕ್ಕೆ ಧಕ್ಕೆ: ಮಹಿಳೆಯರಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ  (Bantwala) ಬಂಟ್ವಾಳ: ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧದ ಹಿನ್ನೆಲೆ ಇರದೆ, ಯಾವುದೇ ಪ್ರಕರಣಗಳಲ್ಲಿಯೂ ಭಾಗಿಯಾಗದೆ, ಸಾಮಾಜಿಕ ಹೋರಾಟಗಾರರು ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಆರ್ ಎಸ್ ಎಸ್ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮನೆಗೆ  ಪೊಲೀಸರು ಮಧ್ಯರಾತ್ರಿ ತೆರಳಿ ವಿನಾಕಾರಣ ಕಿರುಕುಳ ನೀಡತ್ತಿದ್ದು, ಈ ಅತಿರೇಕದ ಪ್ರವೃತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ […]

ಅಪರಾಧ ಕರಾವಳಿ

ಬಂಟ್ವಾಳ : ಪಿಕಪ್ ಚಾಲಕ ಸಹಿತ ಇಬ್ಬರ ಮೇಲೆ ತಲವಾರು ದಾಳಿ,ಒರ್ವ ಮೃತ್ಯು,ಇನ್ನೋರ್ವ ಗಂಭೀರ (Bantwala : Two people, including a pickup driver, were attacked head-on, one dead, another seriously injured)

ಬಂಟ್ವಾಳ : ಪಿಕಪ್ ಚಾಲಕ ಸಹಿತ ಇಬ್ಬರ ಮೇಲೆ ತಲವಾರು ದಾಳಿ,ಒರ್ವ ಮೃತ್ಯು,ಇನ್ನೋರ್ವ ಗಂಭೀರ (Bantwala) ಬಂಟ್ವಾಳ: ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಮರಳು ತರಿಸುವ ನೆಪದಲ್ಲಿ ಯುವಕರಿರ್ವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಲವಾರು ದಾಳಿ ನಡೆಸಿದ್ದು, ಈ ಪೈಕಿ ಗಂಭೀರಗಾಯಗೊಂಡಿದ್ದ ಪಿಕಪ್ ಚಾಲಕ ಮೃತಪಟ್ಟರೆ, ಇನ್ನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಘಟನೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಕೊಳತ್ತಮಜಲು, ಬಡಗಬೆಳ್ಳೂರು ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.  ಕೊಳತ್ತಮಜಲು ನಿವಾಸಿ ಅಬ್ದುಲ್ […]

ಅಪರಾಧ

ಬಂಟ್ವಾಳ: ಪಿಕಪ್ ಚಾಲಕ ರಹೀಂ ಎಂಬಾತನ ಹತ್ಯೆ, ಘಟನಾ ಸ್ಥಳಕ್ಕೆ ತಲಪಿದ ಪೊಲೀಸರು (Bantwal: Pickup driver Rahim murdered, police reach the scene)

ಬಂಟ್ವಾಳ: ಪಿಕಪ್ ಚಾಲಕ ರಹೀಂ ಎಂಬಾತನ ಹತ್ಯೆ, ಘಟನಾ ಸ್ಥಳಕ್ಕೆ ತಲಪಿದ ಪೊಲೀಸರು (Bantwala) ಬಂಟ್ವಾಳ : ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇಲಾಕೋಡಿಯ ಕೊಳತ್ತಮಜಲುವಿನಲ್ಲಿ ಕೊಳತ್ತಮಜಲು ನಿವಾಸಿ ಪಿಕಪ್ ಮಾಲೀಕ ರಹೀಂ ಮತ್ತು ಸಹಾಯಕ ಶಾಫಿ ಎಂಬವರ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದೆ.    ಹಲ್ಲೆಗೀಡಾದ ಶಾಫಿ ಗಂಭೀರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಗಾಯಾಳುವನ್ನು  ಬಂಟ್ವಾಳ ಆಸ್ಪತ್ರೆಗೆ ರವಾನಿಸಲಾಗಿದೆ.  ಪಿಕಪ್ ಮಾಲೀಕ ರಹೀಂ ಮನೆಯೊಂದರ ಬಳಿ ಮರಳು ಅನ್’ಲೋಡ್ […]

ಅಪರಾಧ

ಬಂಟ್ವಾಳ: ಆತ್ಮರಕ್ಷಣೆಯ ರಿವಾಲ್ವರ್ ಗುಂಡು ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್‌ ಶೆಟ್ಟಿಗೆ ಗಾಯ (Bantwala: Congress leader Bondala Chittaranjan Shetty injured in self-defense revolver fire)

ಬಂಟ್ವಾಳ: ಆತ್ಮರಕ್ಷಣೆಯ ರಿವಾಲ್ವರ್ ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್‌ ಶೆಟ್ಟಿಗೆ ಗಾಯ (Bantwala) ಬಂಟ್ವಾಳ: ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ ಅಚಾನಕ್ಕಾಗಿ ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್‌ ಶೆಟ್ಟಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಇಂಟಕ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಇತ್ತೀಚೆಗಷ್ಟೇ ತನ್ನ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದು ರಿವಾಲ್ವ‌ರ್ ಇಟ್ಟುಕೊಂಡಿದ್ದರು.  ವಿಟ್ಲ ಠಾಣಾ ವ್ಯಾಪ್ತಿಯ ಅನಂತಾಡಿ ಬಳಿ ತನ್ನ ಪ್ಯಾಂಟಿನ ಕಿಸೆಯಲ್ಲಿರಿಸಿದ್ದ ತನ್ನದೇ ರಿವಾಲ್ವರ್‌ನ ಗುಂಡು ಆಕಸ್ಮಿಕವಾಗಿ […]

ಅಪರಾಧ

 ಅರಣ್ಯ ಇಲಾಖಾ ಕಚೇರಿಯಲ್ಲಿ‌ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತ್ಯು‌ (Died after collapsing while on duty in the forest department office)

ಅರಣ್ಯ ಇಲಾಖಾ ಕಚೇರಿಯಲ್ಲಿ‌ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತ್ಯು‌ (Bantwala) ಬಂಟ್ವಾಳ: ರಾತ್ರಿ ಪಾಳಿಯ  ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವರು ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮಜ್ಜೋನಿ ನಿವಾಸಿ ಜಯರಾಮ‌ ಮೂಲ್ಯ ಮೃತಪಟ್ಟವರೆಂದು ಗುರುತಿಸಲಾಗಿದೆ.   ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಅರಣ್ಯ ಇಲಾಖೆಯಲ್ಲಿ ಶುಕ್ರವಾರ ರಾತ್ರಿ ಪಾಳಿಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆ ಸುತ್ತು ಬರುವ ಬಗ್ಗೆ ಇಲಾಖೆಯ […]

ಅಪರಾಧ

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಕಳವು ಪ್ರಕರಣ ಬೇಧಿಸಿದ ಪೊಲೀಸರು, ಮೂವರು ಕುಖ್ಯಾತ ಚೋರರ ಬಂಧನ (Three notorious thieves have been arrested by the police connetion with Thumbe Sri Mahalingeshwara Temple)

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಕಳವು ಪ್ರಕರಣ ಬೇಧಿಸಿದ ಪೊಲೀಸರು, ಮೂವರು ಕುಖ್ಯಾತ ಚೋರರ ಬಂಧನ (Bantwala) ಬಂಟ್ವಾಳ: ರಾ.ಹೆ.ಯ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಗದು, ಬೆಳ್ಳಿಯ ಆಭರಣ ಹಾಗೂ ಕಳವು  ಪ್ರಕರಣವನ್ನು ಬೇಧಿಸುವಲ್ಲಿ ವಿಶೇಷ ಪೊಲೀಸರ ತಂಡ ಯಶಸ್ವಿಯಾಗಿದ್ದು, ಈಸಂಬಂಧವಾಗಿ ಮೂವರು ಕುಖ್ಯಾತ ಚೋರರನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ‌, ಹೊಸದುರ್ಗ ತಾಲೂಕಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪುಕೊರೊಕ್ ಪರಂಬು ನಿವಾಸಿ ಬಶೀರ್ ಕೆ ಪಿ ಆಕ್ತಿ ಬಶೀರ್(44 ), ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿ ತಾಲೂಕಿನ ಆಲಪ್ಪಾಡ್ ಗ್ರಾಮದ ತುಯ್ಚಿಯಿಲ್ […]

eMedia Kannada  @2025. All Rights Reserved.