• Home  
  •  ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ
- ಅಪರಾಧ - ವಿಡಿಯೋ

 ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ

Share: ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ ಬೆಂಗಳೂರು: ಬಹುಕೋಟಿ ವಂಚನೆಯ ಬೃಹನ್ನಾಟಕ ಸೂತ್ರಧಾರಿ ಚೈತ್ರಾ ಕುಂದಾಪುರ ಸಿಸಿಬಿ ಪೋಲಿಸರ ಮುಂದೆ ಮತ್ತೊಂದು ನಾಟಕ ಮಾಡಿರುವ ಅನುಮಾನ ಮೂಡಿದೆ‌.   ಇಂದು ಮುಂಜಾನೆ ಮೂರ್ಚೆ ಬಂದಂತೆ ನಟಿಸಿದ್ದ ಚೈತ್ರಾ ಬಾಯಲ್ಲಿ ನೊರೆ ಬರಲು ಬಟ್ಟೆ ತೊಳೆಯುವ ಸಾಬೂನಿನ ನೊರೆ ಹಾಕಿಕೊಂಡ ಶಂಕೆ ವ್ಯಕ್ತವಾಗಿದೆ.  ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯಲ್ಲಿರುವ ವಾಶ್​ ರೂಮ್ ಅನ್ನು […]

ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ

ಬೆಂಗಳೂರು: ಬಹುಕೋಟಿ ವಂಚನೆಯ ಬೃಹನ್ನಾಟಕ ಸೂತ್ರಧಾರಿ ಚೈತ್ರಾ ಕುಂದಾಪುರ ಸಿಸಿಬಿ ಪೋಲಿಸರ ಮುಂದೆ ಮತ್ತೊಂದು ನಾಟಕ ಮಾಡಿರುವ ಅನುಮಾನ ಮೂಡಿದೆ‌.

  ಇಂದು ಮುಂಜಾನೆ ಮೂರ್ಚೆ ಬಂದಂತೆ ನಟಿಸಿದ್ದ ಚೈತ್ರಾ ಬಾಯಲ್ಲಿ ನೊರೆ ಬರಲು ಬಟ್ಟೆ ತೊಳೆಯುವ ಸಾಬೂನಿನ ನೊರೆ ಹಾಕಿಕೊಂಡ ಶಂಕೆ ವ್ಯಕ್ತವಾಗಿದೆ.

 ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯಲ್ಲಿರುವ ವಾಶ್​ ರೂಮ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆ ಸಲುವಾಗಿ ಚೈತ್ರಾ ಕುಂದಾಪುರ ಅವರ ಆರೋಗ್ಯವನ್ನು ಎಲ್ಲಾ ರೀತಿಯಲ್ಲಿ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

 ಅದರಂತೆ, ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ. ಅದರೂ ಮೂರ್ಛೆ ರೋಗಕ್ಕೆ ಸಂಬಂಧಿಸಿದ ತಪಾಸಣೆಗಳು, ಬಿಪಿ, ಹೃದಯ ಸಂಬಂಧಿ ಚೆಕಪ್, ಉಸಿರಾಟದ ಸಮಸ್ಯೆ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

 ವೈದ್ಯರ ತಪಾಸಣೆ ವೇಳೆ ಪಿಟ್ಸ್ ಅಥವಾ ಮೂರ್ಛೆ ರೋಗಕ್ಕೆ ಸಂಬಂಧಿಸಿದ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನಲಾಗಿದ್ದು, ಸದ್ಯ ಇನ್ನೂ ಕೆಲಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲು ಸಿಸಿಬಿ ಪೊಲೀಸರ ನಿರ್ಧಾರ ಮಾಡಿದ್ದಾರೆ.

 ಸದ್ಯ ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಬಂದ ತನಿಖಾಧಿಕಾರಿ ಸಿಸಿಬಿ ಕಚೇರಿಗೆ ವಾಪಸ್ ಆಗಿದ್ದಾರೆ. ಅಲ್ಲದೇ ಈ ಹಿಂದೆ ಇದೇ ರೀತಿ ಆಗಿದ್ದ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

 ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ. ಅಸೀಮಾ ಬಾನು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಚೈತ್ರಾ ಕುಂದಾಪುರ ಸಿಟಿ ಸ್ಕ್ಯಾನ್, ಇಸಿಜಿ ರಿಪೋರ್ಟ್ ನಾರ್ಮಲ್​ ಇದೆ. ಚೈತ್ರಾ ಕುಂದಾಪುರಗೆ ನಡೆಸಿದ ಎಲ್ಲಾ ಟೆಸ್ಟ್​ನಲ್ಲೂ ನಾರ್ಮಲ್ ಇದೆ. ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೂರ್ಛೆ ರೋಗ ಇರಲಿಲ್ಲ. ಸದ್ಯ ಐಸಿಯುನಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.