ಬಪ್ಪನಾಡು: ವಿಜೃಂಭಣೆಯ ಹಗಲು ರಥೋತ್ಸವ ಸಂಪನ್ನ
ಮಲ್ಲಿಗೆ ಪ್ರಿಯೆ ಬಪ್ಪನಾಡು ಶ್ರೀದೇವಿಯ ಶಯನೋತ್ಸವಕ್ಕೆ ಭಕ್ತಾಧಿಗಳಿಂದ ಸಾವಿರಾರು ಅಟ್ಟೆ ಮಲ್ಲಿಗೆ
(Mulki) ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ನರಸಿಂಹ ಭಟ್ ಹಾಗೂ ಶ್ರೀಪತಿ ಉಪಾಧ್ಯಾಯ, ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಮಂಗಳವಾರ ಶ್ರೀ ದೇವರ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನ ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ನಡೆಯಿತು.
ಬೆಂಗಳೂರಿನ ಉದ್ಯಮಿ ಶರತ್ ಸಾಲ್ಯಾನ್ ರವರಿಂದ ಸುಮಾರು 5,000 ಜನಭಕ್ತಾದಿಗಳಿಗೆ ಮಜ್ಜಿಗೆ ಸೇವೆ ನಡೆಯಿತು
ರಾತ್ರಿ ಶ್ರೀ ದೇವರ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ,ಪಲ್ಲಕಿ ಉತ್ಸವ, ಮಲ್ಲಿಗೆ ಪ್ರಿಯೆ ಬಪ್ಪನಾಡು ಶ್ರೀದೇವಿಗೆ ಶಯನೋತ್ಸವ ನೆರವೇರಿತು.
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಮಾಜಿ ಮೊಕ್ತೇಸರ ಡಾ. ಹರಿಕೃಷ್ಣ ಪುನರೂರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ಅಕೌಂಟೆಂಟ್ ಶಿವಶಂಕರ್ ವರ್ಮ ಹಾಗೂ ಭಕ್ತಾದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು
ಕ್ಷೇತ್ರದಲ್ಲಿ ಇಂದು ಬುಧವಾರ ಬೆಳಿಗ್ಗೆ ಕವಾಟೋದ್ಘಾಟನೆ, ಭಕ್ತರಿಗೆ ಮಲ್ಲಿಗೆ ಪ್ರಸಾದ ವಿತರಣೆ ನೆರವೇರಿತು.
ಇಂದು (ಬುಧವಾರ) ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ.

