ಪುತ್ತೂರು: ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್- 2026
ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿನಲ್ಲಿ ನಡೆಯಲಿರುವ ಕಾರ್ಯಕ್ರಮ
(Putturu – Pernaje) ಪುತ್ತೂರು- ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದೆ.
ಜೇನು ಗಡ್ಡದಾರಿ, ಕೃಷಿ ಹವ್ಯಾಸೀ ಲೇಖಕ, ಕೃಷಿ ಸಂಶೋಧನೆ, ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳ ತಮ್ಮ ವೃತ್ತಿ ಸೇವೆಯನ್ನು ಸಮಿತಿ ವತಿಯಿಂದ ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಜನತಾ ಚಾನೆಲ್ ಮುಖ್ಯಸ್ಥ ಆರ್ ಎನ್ ಭಾರದ್ವಾಜ್ ಹಾಗೂ ಗೋಪಾಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

