ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ರಜತ ಖಚಿತ ಬೆಳ್ಳಿಯ ನೊಗ ಸಮರ್ಪಣೆ
(Mulki) ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧ್ವಜಸ್ತಂಭ ದಾನಿಗಳಾದ ಬಪ್ಪನಾಡು ರಾಘವೇಂದ್ರ ದೇವಾಡಿಗ ದಂಪತಿಗಳು ನೂತನ ರಜತ ಖಚಿತ ಬೆಳ್ಳಿಯ ನೊಗ ಸಮರ್ಪಣೆ ಮಾಡಿದ್ದಾರೆ.
ಅರ್ಚಕ ಪ್ರಸಾದ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ದಾನಿಗಳಿಗೆ ಶ್ರೀದೇವಿಯ ಪ್ರಸಾದ ನೀಡಿದರು.
ಈ ಸಂದರ್ಭ ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ಮಹೀಮ್ ಹೆಗಡೆ, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಗೋಪಾಲಕೃಷ್ಣ ಭಟ್, ನಾಗೇಶ್ ಬಪ್ಪನಾಡು, ಪುರುಷೋತ್ತಮ್ ಬಡಗುಹಿತ್ಲು, ರಮೇಶ್ ಅಮೀನ್, ಅಕೌಂಟೆಂಟ್ ಶಿವಶಂಕರ್, ರಾಧಾಕೃಷ್ಣರಾವ್ ಮತ್ತಿತರರು ಉಪಸ್ಥಿತರಿದ್ದರು.

