• Home  
  • ಬಿಗ್‌ ಬಾಸ್‌ ದ್ವಿತೀಯ ಸ್ಥಾನಿ ರಕ್ಷಿತಾ ಶೆಟ್ಟಿಯವರಿಗೆ   ಹೆಜಮಾಡಿಯಲ್ಲಿ ಅಭಿಮಾನಿಗಳ ಸ್ವಾಗತ (Bigg Boss 1st runner-up Rakshita Shetty welcomed by fans in Hejamady)
- ಸನ್ಮಾನ, ಅಭಿನಂದನೆ

ಬಿಗ್‌ ಬಾಸ್‌ ದ್ವಿತೀಯ ಸ್ಥಾನಿ ರಕ್ಷಿತಾ ಶೆಟ್ಟಿಯವರಿಗೆ   ಹೆಜಮಾಡಿಯಲ್ಲಿ ಅಭಿಮಾನಿಗಳ ಸ್ವಾಗತ (Bigg Boss 1st runner-up Rakshita Shetty welcomed by fans in Hejamady)

Share: ಬಿಗ್‌ ಬಾಸ್‌ ದ್ವಿತೀಯ ಸ್ಥಾನಿ ರಕ್ಷಿತಾ ಶೆಟ್ಟಿಯವರಿಗೆ   ಹೆಜಮಾಡಿಯಲ್ಲಿ ಅಭಿಮಾನಿಗಳ ಸ್ವಾಗತ ಪಡುಬಿದ್ರಿಯ ಬೇಂಗ್ರೆ ಎಂಡ್ ಪಾಯಿಂಟ್ ಬಳಿ ಅದ್ದೂರಿ ಸನ್ಮಾನ ಆಯೋಜನೆ (Hejamady) ಹೆಜಮಾಡಿ  : ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ ಪಡುಬಿದ್ರಿಯ ಕುವರಿ ರಕ್ಷಿತಾ ಶೆಟ್ಟಿಯವರಿಗೆ ಇಂದು ಸಂಜೆ ಹೆಜಮಾಡಿ ಟೋಲ್‌ ಗೇಟ್‌ ಬಳಿ ಅವರ ಅಭಿಮಾನಿಗಳು ಅದ್ದೂರಿಯಾಗಿ  ಸ್ವಾಗತಿಸಿದರು.   ಇಂದು ಸಂಜೆ ನಾಲ್ಕು ಗಂಟೆಗೆ ರಕ್ಷಿತಾ ಶೆಟ್ಟಿಯವರು ಹೆಜಮಾಡಿ ಟೋಲ್‌ ಗೇಟ್‌ ಬಳಿ ಆಗಮಿಸಿದ್ದು, ಅವರನ್ನು ತೆರೆದ […]

(Hejamady) ಹೆಜಮಾಡಿ  : ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ ಪಡುಬಿದ್ರಿಯ ಕುವರಿ ರಕ್ಷಿತಾ ಶೆಟ್ಟಿಯವರಿಗೆ ಇಂದು ಸಂಜೆ ಹೆಜಮಾಡಿ ಟೋಲ್‌ ಗೇಟ್‌ ಬಳಿ ಅವರ ಅಭಿಮಾನಿಗಳು ಅದ್ದೂರಿಯಾಗಿ  ಸ್ವಾಗತಿಸಿದರು.

  ಇಂದು ಸಂಜೆ ನಾಲ್ಕು ಗಂಟೆಗೆ ರಕ್ಷಿತಾ ಶೆಟ್ಟಿಯವರು ಹೆಜಮಾಡಿ ಟೋಲ್‌ ಗೇಟ್‌ ಬಳಿ ಆಗಮಿಸಿದ್ದು, ಅವರನ್ನು ತೆರೆದ ಜೀಪಿನಲ್ಲಿ ಚೆಂಡೆ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಡುಬಿದ್ರಿಗೆ ಕರೆ ತರಲಾಯಿತು.

  ಹೆಜಮಾಡಿ ಟೋಲ್‌ ಗೇಟ್‌ ನಿಂದ ಪಡುಬಿದ್ರಿ ಸರ್ಕಲ್‌ವರೆಗೆ ನಡೆದ ವಾಹನ ಜಾಥದಲ್ಲಿ ನೂರಾರು ಸಂಖ್ಯೆಯಲ್ಲಿ ರಕ್ಷಿತಾ ಶೆಟ್ಟಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.

  ಪಡುಬಿದ್ರಿಯ ಬೇಂಗ್ರೆ ಎಂಡ್ ಪಾಯಿಂಟ್ ರಕ್ಷಿತಾ ಶೆಟ್ಟಿಯವರ ಮನೆ ಬಳಿ ಅದ್ದೂರಿ ಸನ್ಮಾನದ ಆಯೋಜನೆ ಮಾಡಲಾಗಿದೆ.

ಈ ಸಂದರ್ಭ ಸ್ಥಳೀಯರಾದ ನವೀನ್‌ ಚಂದ್ರ ಜೆ. ಶೆಟ್ಟಿ, ಸಂತೋಷ್‌ ಶೆಟ್ಟಿ ಪಲ್ಲವಿ, ಶರತ್‌ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.