ಬಿಗ್ ಬಾಸ್ ದ್ವಿತೀಯ ಸ್ಥಾನಿ ರಕ್ಷಿತಾ ಶೆಟ್ಟಿಯವರಿಗೆ ಇಂದು ಹುಟ್ಟೂರ ಸನ್ಮಾನ
ಪಡುಬಿದ್ರಿಯ ಬೇಂಗ್ರೆ ಎಂಡ್ ಪಾಯಿಂಟ್ ಬಳಿ ಅದ್ದೂರಿ ಸನ್ಮಾನ ಆಯೋಜನೆ
(Padubidri) ಪಡುಬಿದ್ರಿ: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ ಪಡುಬಿದ್ರಿಯ ಕುವರಿ ರಕ್ಷಿತಾ ಶೆಟ್ಟಿಯವರಿಗೆ ಇಂದು ಸಂಜೆ ಹುಟ್ಟೂರು ಪಡುಬಿದ್ರಿಯಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದು ಸಂಜೆ ಮೂರು ಗಂಟೆಗೆ ರಕ್ಷಿತಾ ಶೆಟ್ಟಿಯವರು ಆಗಮಿಸಲಿದ್ದು, ಅವರನ್ನು ಹೆಜಮಾಡಿ ಟೋಲ್ ಗೇಟ್ ಬಳಿ ಭವ್ಯವಾಗಿ ಸ್ವಾತಿಸಲಾಗುವುದು.
ಹೆಜಮಾಡಿ ಟೋಲ್ ಗೇಟ್ ನಿಂದ ಪಡುಬಿದ್ರಿ ಸರ್ಕಲ್‌ವರೆಗೆ ವಾಹನ ಜಾಥದಲ್ಲಿ ಮೆರವಣಿಗೆ ಸಾಗಲಾಗುವುದು.
ಪಡುಬಿದ್ರಿಯ ಬೇಂಗ್ರೆ ಎಂಡ್ ಪಾಯಿಂಟ್ ರಕ್ಷಿತಾ ಶೆಟ್ಟಿಯವರ ಮನೆ ಬಳಿ ಅದ್ದೂರಿ ಸನ್ಮಾನದ ಆಯೋಜನೆ ಮಾಡಲಾಗಿದೆ ಎಂದು ಬೆಂಗ್ರೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

