ಉಡುಪಿ: ಗೋವುಗಳನ್ನು ಕಡಿದರೆ ಏನಾಗುತ್ತದೆ ಎಂಬ ರಾಜ್ಯ ಪಶುಸಂಗೋಪನೆ ಸಚಿವರ ಹೇಳಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಸರಕಾರ ಗೋವುಗಳ ಸಂರಕ್ಷಣೆಗಾಗಿ ಮತ್ತು ಕೃಷಿಕರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದೆ. ಸಾಧು ಸಂತರ ಅಭಿಪ್ರಾಯಗಳಿಗೆ ಅನುಗುಣವಾಗಿ ಈ ಕಾಯಿದೆ ತರಲಾಗಿದೆ. ಆದರೆ ಸಚಿವರ ಈ ಹೇಳಿಕೆ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿಗಳು ತಮ್ಮ ಸಚಿವರನ್ನು ಕರೆದು ಈ ಬಗ್ಗೆ ಮಾತಾಡಬೇಕು. ರಾಜ್ಯದ ಜನರು ನಿಮಗೆ ಮತ ಹಾಕಿರುವುದು ನೀವು ಕೊಟ್ಟ ಆಶ್ವಾಸನೆಗಳಿಗಾಗಿ.ಅದನ್ನು ಈಡೇರಿಸಲು ಪ್ರಯತ್ನಮಾಡಿ. ಅದು ಬಿಟ್ಟು ಗೋಹತ್ಯೆ ನಿಷೇಧಕ್ಜೆ ಸಂಬಂಧಿಸಿ ಈ ರೀತಿಯ ಹೇಳಿಕೆ ನೀಡಬೇಡಿ. ಇದರಿಂದಾಗಿ ಗೋವುಗಳ ಮಾರಣಹೋಮವಾಗುತ್ತದೆ. ರೈತರ ಮತ್ತು ಹೈನುಗಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಮಾಡಿ. ಈ ರೀತಿ ಹೇಳಿಕೆ ನೀಡಿ ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ಬದಲಾವಣೆ ತಂದರೆ ಬಿಜೆಪಿ ಪಕ್ಷ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

